ಪುಟ:ಜೀವಂಧರ ಚರಿತೆ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ ೨೦ ಭಾಸ್ಕರಕವಿರಚಿತ ಜನಪ ಕೇಳಾಭೂಮಿಪತಿ ಸ|| ದ್ವಿನುತಸಂಧ್ಯಾವಂದನಾದಿಯ | ನನುಕರಿಸಿ ದೇವಾರ್ಚನೆಯನಾನಂದದಲಿ ಮಾಡಿ | ಅನುನಯದಿ ಶಯ್ಯಾಗೃಹಕೆ ಬಂ || ದಿನಿಯಳೊಡಗೂಡಿರ್ದು ನಿದ್ರಾ || ಗನೆಯೊಳೊಂದಿದನಾರಮಣಿ ಸಹಿತರಸನೊಲವಿನಲಿ || - ನಿದ್ರೆ ತಿಳಿಯಲು ಕುಸಿದ ಗೋಣ ನಿ | ಮಿರ್ದು ನೆಗಹಿಯೆ ಕೇಸರಗಳನ | ಮರ್ದು ಮೇಲೋರ್ಗುಡಿಸಿ ಜೋಡಿಸಿ ಪಕ್ಕಗಳ ಬಡಿದು || ಸಾರ್ದು ಹೋಗೆಲೆ ರಜನಿ ರವಿಯುದ | ಯಾದ್ರಿಗಡರಿದನೆಂದು ಸಾರ್ವo | ತೆದ್ದು ಕರೆದುವು ಕುಕ್ಕುಟಗಳೆರ್ದೆ ಬಿರಿಯೆ ಕಾಮುಕರ || ೨೧ - ಹರಿಕರಾಶ್ರಯನಮಳಶುಚಿಸಾ | ಗರಜನಿತ ಸದ್ದೇವಪೂಜಾ | ಕರಕರ್ಹನೆನಿಸೆನ್ನ ನಿಷ್ಕಾರಣದೊಳೆಂಜಲನು | ಗೊರವನೂಡಿದನೆಂದು ವಾಣೀ | ವರಗೆ ಮೊರೆಯಿಡುವಂತೆ ಸುರಮಂ || ದಿರದ ಶಂಖಧ್ವನಿಗಳೆಸೆದುವು ಸುಪ್ರಭಾತದಲಿ || ತರಣಿಯಪರಾಚಲವನಡರು | ತಿರೆ ನಿಶಾಸುರೆ ವಿತಳದಿಂ ಪಾ | ಯರರೆ ನಿಲ್ಲೆಂದಡಸಿ ಪಿಡಿದು ತದಂಶುಜಾಲದಲಿ | ಭರದಿ ಲೋಕನ ಜಿಗಿದು ತಾ ಬ೦° | ಕರುಣದಲಿ ಬಂದುದಯಗಿರಿವಿ | ಷ್ಟರದಿ ಕುಳ್ಳಿರ್ದುಗುಟ್ಟಿಳಾಸತಿಯೆನಲು ರವಿ ಮೆರೆದ | ೨೩ ಇನನುದಯವಾಗಿ ನಿದ್ರಾಂ | ಗನೆಯ ಬೀತಿಟ್ಟೆಸೆವ ಮಂಗಳ | ನಿನದದಿಂದವನೀಶನುಪ್ಪವಡಿಸುವ ಕೃತ್ಯಗಳ | ವಿನುತಸಂಧ್ಯಾವಂದನಾದಿಯ || ನನುಕರಿಸಿ ದೇವಾರ್ಚನೆಯನಾ | ಜನಪನೆಸಗಿ ಸುಖಾನುಭಾವದೊಳಿರ್ದನೊಲವಿನಲಿ || ೨೪ ೨೨