ಪುಟ:ಜೀವಂಧರ ಚರಿತೆ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಸ್ಕರಕವಿರಚಿತ ೩೧ ಬು'ಕ ನೃಪನಬಲೆಯನು ತೊಡೆಗಳೊ | ೪ಳುಹಿಕೊಂಡು ಜಿನೇಶ್ವರನ ನೆನೆ! ದೊಲಿದು ಗಂಧೋದಕವ ಕಣ್ಣಳೊಳೊ ಮರ್ಚ್ಛೆಯನು || ಕಳೆದು ದೇಹದ ಧೂಳಿಗಳ ಕರ | ತಳದೊಳವನಿಪ ಕೊಡಹಿ ಮುದದಿಂ | ದಲಿ ಕುರುಳ ನೇವರಿಸಿ ಸಂತೈಸಿದನು ಕೋಮಲೆಯ | ೩೦ ತರುಣಿ ಕೇಳುಚ್ಚಿಷ್ಟದೋಷ | ತರದಿ ಧಾತುಪ್ರಕೃತಿಗಳೊಳಾ | ತುರದಿ ದುಸ್ವಪ್ಪ೦ಗಳಹವಿದಕೇನು ಭೂಮಿಯಲಿ || ನಿರುತವೆಂಬರು ಕನಸ ಕಂಡಾ| ಪರಿಯಲಾದರೆ ಲೇಸು ಹುಸಿಯಿದ | ಕರಸಿ ಚಿಂತಿಸಲೇನು ಕಾರಣವೆಂದನಾಭೂಪ | ೩೧ ಧರಣಿಯೊಳು ವಿಧಿವಶದಿ ಹರಿ ಸೂ | ಕರಝವಾದಿ ಭವಂಗಳಿಂದವ | ತರಿಸಿದನು ಹರ ತಿರಿದನಬ್ಬ ಜ ನೀಗಿದನು ಶಿರವ || ಸುರಪ ನಿಂದಿತನಾದ ಶಶಿ | ರರನು ತೊಟ್ಟನೆ ತೊಳಲಿಸಿತು ನಾ | ವತು ಕರ್ಮಾಧೀನಕೆನಿತೆಂದನು ಮಹೀಪಾಲ || - ಬಿಸಿಲ ತಾಪಕ್ಕಗಿದು ಶಿಖಿಯಲಿ | ನುಸುಳುವವೊಲಾಪತ್ತಿಗುರೆ ಚಿ೦ | ತಿಸಲು ಘನವಹುದಿದಕೆ ಧೈರವ ತಳೆದು ಧರ್ಮವನು || ಎಸಗಿದರೆ ತಮದೊಳಗೆ ಶಶಿ ದೀ | ಪ್ರಿಸುವ ವಿಧದಿ ವಿಪತ್ತಿನಂಬುಧಿ | ಯೊಸರಿ ನಿರ್ಮಳರಪ್ಪರಂಬುಜನೇತ್ರೆ ಕೇಳೆಂದ || ಸರಸಿಜಾಕ್ಷಿಯನಿಂತು ನಾನಾ | ಪರಿಯ ನಯದಿಂ ತಿಳುಹಿ ಮುನ್ನಿನ | ಪರಿಯಲವನಿಪನಾಸತಿಯನಾನಂದಲೀಲೆಯಲಿ || ನೆರೆಯುತಿರೆ ತಪ್ಪಪ್ಪ ಫಲ ಭೂ | ವರಗೆ ಮರಣವ ಸೂಚಿಸುವವೊಲು | ತರುಣಿಗಾದುದು ಗರ್ಭವವನೀಪಾಲ ಕೇಳೆಂದ || ೩೨. ೩ ೩೪