ಪುಟ:ಜೀವಂಧರ ಚರಿತೆ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ೪೫ ಧರೆಯೊಳುತ್ತಮರಿಂಗಿತದೊಳುರು | ತರದೊಳುವರು ಮಧ್ಯಮರು ಕೇ | ವರಧಮರು ಕಂಡವರತ್ಯಧಮರಾದವರು || ದರುಶನಶ್ರವಣೇಂಗಿತದೊಳು | ಯರು ಸುನಿಶ್ಚಯವಬಿಳಕಳೆಯಲಿ | ಪರಿಣತನು ನೃಪನಿಯದಿಹುದಿದು ಕರ್ಮವಶವೆಂದ | ಧಾರಿಣೀಪತಿ ಕೇಳು ಕಾಷ್ಠಾಂ | ಗಾರನಾವಿಷಯದ ಸಮಸ್ಯಮ | ಹೀರಮಣರನು ಮಕುಟವರ್ಧನಮಂಡಳೀಕರನು || ಶರಸುಭದಾಮಾತ್ಯಕುಲಪರಿ | ಚಾರವನ್ನೆ ಯನಾಯಕರ ಸುವಿ | ಚಾರದಿಂದೊಳಹೊಯ್ದು ಕೊಂಡನುಪಾಯಕುಶಲದಲಿ || ೪೬ - ದುರುಳಕಾಷ್ಠಾಂಗಾರನೊಂದಿನ | ದಿರುಳು ರಾಜದ್ರೋಹವನು ನೆನೆ || ದುರುತರದೊಳಿಂತೆಂದನನ್ನಾಧೀನವಾಗಿರ್ದ | ಧರಣಿಯೊಡೆತನವೇಕೆ ಸಕಲೈ | ಶ್ವರಿಯವೇಕದಿಂದಲಾತಗೆ | ಎರಣ ಲೇಸೆಂದೆನುತ ಚಿಂತಿಸುತಿರ್ದನಾತ್ಮ ದಲಿ || ೪೬ - ಮೌನವಿಲ್ಲದ ಬ್ರಹ್ಮಚರ್ಯ ಸು | ದಾನವಿಲ್ಲದ ವಸ್ತುಚಯವಳಿ | ಮಾನವಿಲ್ಲದ ನಾರಿ ಸಜ್ಜನರಿಲ್ಲದಾಗ್ದಾನ | ಮಾನಿತ ಪ್ರಿಯವಿಲ್ಲದೋಲಗ | ಗಾನವಿಲ್ಲದ ನೃತ್ಯ ತನ್ನಾ | ಧೀನವಿಲ್ಲದ ಸಂಪದವ ಸುಡಲೆಂದು ಬಿಸುಸುಯ್ 11 ಧರೆಯೊಳನ್ನಾಧೀನವಾಗಿಹ | ನರಗೆ ತನ್ನ ಯ ಬಂಧುಬಳಗವ || ಹೊರೆಯಲಿಲ್ಲ ಭಿಮತವ ವಿಬುಧರಿಗೀಯಲಿಲ್ಲೆಸೆವ || ಕರಿತುರಗ ಮಹಿಳಾಜನವ ವಿ! ಸ್ವರದಿ ಜೋಡಿಸಲಿಲ್ಲ ವನು ಪ್ರಾ| ಮರನು ಸೇವಾಪರನ ಬಾಳು ನಿರರ್ಥವವನಿಯಲಿ || ೪೮ M ೪೯