ಪುಟ:ಜೀವಂಧರ ಚರಿತೆ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೦ ೯೧. ಭಾಸ್ಕರನವಿರಚಿ ವರಮಹಾರ್ಣವದೊಳಗೆ ಮಂದರ | ತಿರುಗುವಂತೆ ವನಾಂತದೊಳಗಾ | ವರಿಸಿದತಿಭೀಕರದವಾನಲನಂತೆ ತಾವರೆಯ || ಸರಿಸಿಯೊಳು ಕರಿರಾಜ ಹೊಕ್ಕಡ | ವೆರಸಿ ಸವಳುವ ತೆಂದೆ ರಿಪಮೋ | ಹರವ ತೊತ್ತಅದುಟಿದನಾನೃಪನರಸ ಕೇಳೆಂದ | - ಸುರಪ ವಜ್ರದೊಳದ್ರಿಗಳ ಕ | ಇರಿಸುವಂತಸಿಯಿಂದ ಕರಿಗಳ | ನರಿದು ಮತ್ತವನಂಬುಧಿಯ ತೆರೆಗಳನು ತಿವಿನಂತೆ || ಚರಣಹತಿಯಿಂದಶ್ಯಗಳ ಸಂ || ಹರಿಸಿ ಮಸಗಿದ ಕಾಲರುದ್ರನ | ಪರಿಯೊಳರಿಸುಭಾವಳಿಯನರಿದನು ಮಹೀಪಾಲ || ಕೆಲವರನು ಧನುವಿನಲಿ ಕೆಲಬರ | ನಲಗಿನಲಿ ಕೆಲಬರನು ಗದೆಯಲಿ | ಕೆಲಬರನು ಸುರಗಿಯಲಿ ಕೆಲಬರನತುಳಪರಿಘದಲಿ | ಕೆಲಬರನು ಚಕ್ರದಲಿ ಕೊಂತದಿ | ಕೆಲಬರನು ಕೊಂದವನಿಪತಿ ಮಾ | ರ್ಬಲದೊಳಗೆ ನೆರೆ ಚಾರಿವರಿದನು ಭೂಪ ಕೇಳೆಂದ || - ನರನ ಚಾಪಪ್ರೌಢಿ ಲಕ್ಷ್ಮಿ | ಧರನ ಶರಸಂಧಾನವಮರೇ | ಶ್ವರನದಟು ರಾವಣನ ಹಮ್ಮಿ ಕೆ ರಾಮನಾಟೋಪ ||. ಹರಿಯುಪಾಯ ನದೀಸುತನ ದಿ | ಕರಣೆ ಕರ್ಣನ ಧೈಲ್ಯ ಗಿರಿಜಾ | ವರನ ಬಲವಳವಟ್ಟು ದಾನೃಪಗಾಹವಾಗ್ರದಲಿ || - ಅರಸ ಹೊಕ್ಕೆಡೆಯರುಣ[ಜಲ]ಸಾ | ಗರದ ಮಯ ಕೈಮಾಡಿದತ್ತಲು | ... ಕರುಳಮಯ ಮೊಗವಿಕ್ಕಿದತ್ತಲು ಮೊರೆವ ಹೆಣನ ಮಯ || ಕರಿ ಮಸಗಿ ಕದಳಿಯನು ಹೊಕ್ಕಂ | ' , . ತರಿಬಲವ ನಿಮಿಷದಲ್ಲಿ ಸತ್ಯಂ || ಧರನು ದೋರ್ವಲದಿಂದ ಸವ'ದನರಸ ಕೇಳೆಂದ || ೯೨ ೯೩ ೯೪