ಪುಟ:ಜೀವಂಧರ ಚರಿತೆ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Se ೧೦೦ ಭಾಸ್ಕರನವಿರಚಿತ ಲುಳಿತ ಕರ್ಮವ ತಾಳವರು ಜೆ | ಇಳೆಗೀವರಾಕರ್ಮಭಾರವ | ನು'ದವರು ಲಘುವಾದಕಾರಣ ನಭಕೆ ಪುಟನೆಗೆದು || ನಿಲುಕುವರು ಸತ್ಪಥವನೆಂದನ | ಲಿಳೆಯಸತಿ ತತ್ಕರ್ಮಗಳನು | ದಳವಿನಿಂದಾದವನು ದೇವನು ಭೂಪ ಕೇಳೆಂದ || ಹರಣ ತೊಲಗಿಯೆ ನೃಪನ ಬಹಿಡ | ಲಿರಲು ಕಂಡರಿಭಟರು ಬೊಬ್ಬಿರಿ ! ದರರೆ ಮಡಿದನೆನುತ್ತ ಬರಲಾಗೃಹನ ಸರ್ವಾಂಗ | ಮರುತವಶದಿಂದಲುಗೆ ಮಗುವಾ | ವರಿಸಿತಸುವೆಂದಳುಕಿ ದೂರದಿ | ಸರಳೊಳೆಚ್ಚಾಶಬವ ಕೆಡಹಿದರರಸ ಕೇಳೆಂದ || ಇದು ವಿನಮದಮರೇಂದ್ರ ಶ್ರೀಜನ | ಪದಕಮಲಷಟ್ಟರಣವಾಣೀ | ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ | ಚದುರ ಭಾಸ್ಕರರಚಿತ ಧರ್ಮ | ಪ್ರದನ ಜೀವಂಧರನ ಚರಿತೆಯೊ | ಆದುವೆ ಸತ್ಯಂಧರವಧಸ್ಥಿತಿಯರಸ ಕೇಳೆಂದ | ನಾಲ್ಕನೆಯ ಸಂಧಿ ಮುಗಿದುದು. ೧೦೧ ೧೦೨ ಐದನೆಯ ಸಂಧಿ. ಸಚನೆ| ವನದೊಳುದಿಸಿ ವಣಿಗೂರೇಂದ್ರನ || ಮನೆಯೊಳೊಲವಿಂ ಬಳೆದು ವಿದ್ಯದಿ | ಘನವಿಶಾರದನಾಗಿ ಜೀವಂಧರನು ರಂಜಿಸಿದ || ಧರಣಿಪತಿ ಕೇಳಿಂತು ಸತ್ಯಂ | ಧರನು ನಾಕಸ್ತ್ರೀಯರಲಿ ತಾ | ನೆರೆಯ ಪುರಜನಪರಿಜನವ ಶೋಕಾಬ್ಬಿ ಯಲಿ ಮುಳುಗಿ || ಅರೆಗಳಿಗೆಗವನೀಶ ಸಹಿತೆ | ಶ್ವರಿಯಸಂಪದವಳಿದುದಕಟಾ | ನರರ ಸಂಸಾರವನ್ನಿರವು» ಸುಡಲೆಂದ |