ಪುಟ:ಜೀವಂಧರ ಚರಿತೆ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಸ್ಕರಳವಿರಚಿತ ಕೆಲರು ಖಳನಿವನೆಂದಮಾತ್ಯರು | ತಿಳುಹೆ ಕಾಷ್ಠಾಂಗಾರಗ'ದಲ' | ದಿಳೆಯೆಸಗಿ ತನ್ನಿಂದ ತಾನೇ ಕೆಟ್ಟನಕಟೆಂದು || ಕೆಲರು ಹಾವಿಗೆ ಹಾಲೆರಿದು ನೆಲತಿ | ಸಲಹೆ ವಿಷ ಮೇಲಪ್ಪದಂತಾ | ಖಳರ ಸಾಕಿದ ನೃಪರಿಗಿಂತೆಂದಆಲಿತಋಳಜನ | - ಧರಣಿಪತಿ ಕೇಳಿಸತ್ಯಂ || ಧರನು ಬಿಟ್ಟ ಮಯೂರಯಂತ್ರವು | ಭರದಿ ಕೊಂಡುಯ್ಯಾಪುರದ ಸುಡುಗಾಡಿನೊಳಗಿಹೆ || ತರುಣಿ ಮೆಲ್ಲನೆ ಕಣ್ಣೆ ಅದು ಚೇ | ತರಿಸಿ ದಶದಿಕ್ಕುಗಳನಾರೈ | ದರಸನನು ತಾ ನೋಡಿ ಕಾಣದೆ ಮmುಗಿದಳು ಕಾಂತ 1) ೮ - ಹಾ ರಮಣ ! ಹಾ ವಿಬುಧಜನಮಂ | ದಾರ ! ಹಾಹಾ ಶತ್ರುಕುಲಸಂ | ಹಾರ ! ಹಾ ಗಂಭೀರಪಾರಾವಾರ ! ಹಾ ಕಾಂತ ! | ಹಾ ರಸಿಕ ! ಹಾ ಸುಭಗ ! ಧೀರೋ | ದಾರ ! ಹಾಹಾ ನವಮದನಾ | ಕಾರ! ಹಾಹಾಯೆಂದು ಹಂಬಲಿಸಿಗಳು ಹರಿಣಾಕ್ಷಿ || ೯ * ರಾಜಚೂಡಾರತ್ನ ಹಾ ! ಸುರ | ರಾಜಸಮಸಂಪನ್ನ ಹಾ ! ರವಿ | ರಾಜನಿಭ ! ರಾಜೀವನಯನವಿರಾಜಿತನೆ ಹಾಹಾ! || ರಾಜರಾಜೇಶ್ವರ್ ಹಾಹಾ! || ರಾಜಸದೃಕೊಪಾಯ ಹಾಹಾ ! | ರಾಜಹಂಸನೆ ಹಾ ! ಯೆನುತ ಹಲುಬಿದಳು ಹರಿಣಾಕ್ಷಿ 11 ೧೦ ಹರಿಸಮಾನಸುಧರ್ಮಯುತ ಹಾ ! | ಹರಿಸಮಾನೋಪಾಯ ಹಾಹಾ | ಹರಿಸಮಾನೈಶ್ವರ ಹಾಹಾ ! ಹರಿಸಮಾನಬಲ || ಹರಿಸಮಾನಸುತೇಜ ಹಾಹಾ | ಹರಿಸಮಾನಗುಣಾನ್ವಿತನೆ ಹಾ ! | ಹರಿಸಮಾನಾಳಾಸ ಹಾಯೆಂದಲಿದಳು ತರುಣಿ || ೧೧