ಪುಟ:ಜೀವಂಧರ ಚರಿತೆ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ಚಾರುಚತವೆ ಚೂತಬಾಣಾ | ಕಾರನನು ಮಂದಾರ ಬುಧವಂ | ದಾರನನು ಚಂದನವೆ ಚಂದನಲೇಪಿತಾಂಗನನು || 'ನಾರಿಕೇಳವೆ ಲಲಿತಕೀರ್ತಿಯ | ನಾರಿಯಧಿಪನ ಕಾಣಿರೇ ಎಂ | ದಾರಮಣಿ ಬೆಸಗೊಂಡಳವನೀಶ್ವರನ ಎಕಳದಲಿ || ೨೨ - ತಿಲಕ ನೀ ತೋ ಆಖಿಲಭೂಮಿಪ | ತಿಲಕನನು ವಿಮಲಾರ್ಜುನವೆ ದೋ | ರ್ಬಲಬೇತಾರ್ಜುನನನು ಸುಕೇತಕಿ ವಿಜಯಕೇತನನ || ಲಲಿತಕ೦ಕೆಲಿದ್ರುಮವೆ ನೀ ತೊ | ಲಿದು ಕಂಕಲಿಪ್ರಿಯನನೆಂದಾ | ಅಳಿಕುಳಾಳಕೆ ತರುಗಳನು ಬೆಸಗೊಂಡಳವನಿಪನ | ೨೩ ಕಮಲವೇ ಕಮಲಾನುರಕ್ತನ | ಕುಮುದ ಕುಮುದೋದ್ದಾಸಿಯನು ವಿ || ದ್ರುಮವೆ ವಿಲಸದ್ವಿದ್ರುಮೋಷ್ಠನ ರಾಜಹಂಸಗಳೇ || ವಿಮಲಗುಣಯುತರಾಜಹಂಸನ | ಸುಮನವೇ ಸುಮನೋಭನ ಸು | ಭಮರವೇ ಇಮರಾಳಕನ ತೋರೆಂದಳಿಂದಮುಖಿ | ೨೪ - ಜಾಣನನು ಸಂತತಲಸು | ಲ್ಯಾಣನನು ಸುಜನನನು ಭುವನ | ತ್ರಾಣನನು ವೀಣಾಪ್ರವೀಣನ ಗುಣವಿಭೂಷಣನ || ಕೊಣಿಪಾಲಶ್ರೇಣಿನುತ | ರ್ವಾಣನಾದನಮಾನನನು ನೀವ್ | ಕಾಣಿರೇ ಎಂದಬಲೆ ಬೆಸಗೊಂಡಳು ತರುವ್ರಜವ || ತರುಣಿಯಂತಿನಿಯನ ವಿಯೋಗಾಂ | ತರದಿ ನೆರೆ ಕಳವಳಿಸಿ ತಾ ಕಂ || ಡರನಿರದೆ ಕೇಳುತ್ತ ಧೈರವ ತಳೆದು ತತ್ಕಾಂತೆ || ದುರುಳಕಾಷ್ಠಾಂಗಾರನಿಂ ಸುರ | ಪರಕೆ ಸರಿದನೋ ತಿಳಿಯದೆಂದಾ | ತರುಣಿ ತತಾವನಿಗೆ ತಿರುಗಿದಳು ಶೋಕದಲಿ || ೨೬ ೨೫