ಪುಟ:ಜೀವಂಧರ ಚರಿತೆ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಷಯಸೂಚಿ ಸಂಧಿ ೧-ಪೂರ್ವಪ್ರಸಂಗ-(ಪುಟ ೧-೧೧) ಜನಸ್ತುತಿ ; ಸಿದ್ಧ ಆಚಾರ್ಯ, ಉಪಾಧ್ಯಾಯ, ಸಾಧು-ಇವರುಗಳ ಸ್ತುತಿ ; ಸರಸ್ವತಿಯ ಸ್ತುತಿ : ಅನುಬದ್ಧ ಕೇವಲಿಗಳು ಮೊದಲುಗೊಂಡು ಸಚ್ಚಾರಿತ್ರ ಭೂಷಣರ ವರೆಗೆ ಗುರುಗಳ ಸ್ವವನ : ಕವಿತಾ ಪ್ರಶಂಸ; ಸಮವಸರಣ ; ಸುಧರ್ಮ ಮುನಿಪನು ಜೀವಂಧರನ ಚರಿತೆಯನ್ನು ಮಗಧೇಂದ್ರನಿಗೆ ಹೇಳುತ್ತಾನೆ. ಸಂಧಿ ೨-ಆಧಿರಾಜವರ್ಣನ- ಪುಟ ೧೧-೨೫) ಆರಖಂಡದ ಹೇಮಾಂಗನಿಷಯದ ರಾಜಪುರಿಯಲ್ಲಿ ಸತ್ಯಂಧರನ ಮತ್ತು ಆತನ ಪ್ರಯ ವರ್ಣನೆ, ಸಂಧಿ ೩-ಕಾಷ್ಠಾ೦ಗಾರನ ಪೂರ್ವಕಥೆ-(ಪುಟ ೨೫-೩೩) ಸತ್ಯಂಧರನು ಕಾಷ್ಠಾಂಗಾರನ ಹವಣರಿದು, ಆತನನ್ನು ತನಗೆ ಮಂತ್ರಿಯಾಗಿ ಮಾಡಿ ಕಂಡುದು, ಸಂಧಿ ೪-ಸತ್ಯಂಧರನ ವಧಸ್ಥಿತಿ-(ಪುಟ ೩೪-೫೪) ವೃದ್ಧರಾದ ಮಂತ್ರಿಗಳು ಬೇಡವೆಂದರೂ ಕೇಳದೆ, ಸತ್ಯಂಧರನು ಕಾಷ್ಠಾಂಗಾರನಿಗೆ ಮಂತ್ರಿತ್ವವನ್ನು ಕೊಟ್ಟು, ಆ ದುರುಳನಿಂದ ಸುರಪುರವನ್ನೋದಿದುದು. ಸಂಧಿ ೫-ಕುಮಾರೋದಯವರ್ಣನೆ-(ಪುಟ ೫೪-೭೩) ಜೀವಂಧರನು ವನದೊಳಗೆ ಜನಿಸಿ, ಗಂಧೋತ್ಮ ಟನೆಂಬ ವಣಿಕ್ಟರನ ಮನೆಯಲ್ಲಿ ಐನೂರು ಕುಮಾರರೊಡನೆ ಬಳೆದು ಸಕಲ ವಿದ್ಯಗಳಲ್ಲಿ ವಿಶಾರದನಾಗಿ ರಂಜಿಸಿ ದುದು, ಸಂಧಿ -ಗೋಗ್ರಹಣಪ್ರಶಸ್ತಿ- (ಪುಟ ೭೩-೮೦) ದುರುಳ ಕಾಷ್ಠಾಂಗಾರನು ಶಬರರು ಹಿಡಿದು ಕೊಂಡುಹೋದ ತುರುಗಳನ್ನು ಮರಳಿಸಲಾಗದೆ ಹೋಗಲು, ಜೀವಂಧರನು ಆ ಶಬರರನ್ನು ಒರಸಿ, ಆ ತುರುಗಳನ್ನು ಮರಳಿಸಿದುದು. ಸಂಧಿ ೭ಸ್ವಯಂವರಮಂಟಪ ಸ್ತುತಿ-(ಪುಟ ೮-೯೩) ವಾಣಿಜವರನಾದ ಶ್ರೀದತ್ತನು ಗಂಧರ್ವದತ್ತೆಗೆ ಸ್ವಯಂವರವೆಂದು ನಾನಾ ದೇಶದ ಅರಸುಗಳಲ್ಲಿ ಸಾರಿಸಲು, ಅರಸುಗಳ ಬರುವಿಕೆ, ಸಂಧಿ ೮-ಸಕಲಭೂಪಾವಲೋಕನ-(ಪುಟ ೯೩–೧೦೭) ಗಂಧರ್ವದತ್ತೆಯು ಸ್ವಯಂವರಮಂಟಪಕ್ಕೆ ಬಂದು, ಅಲ್ಲಿ ನೆರೆದಿದ್ದ ಭೂಮಿಾ ಪಾಲಕರ ಕುಡಿತಗಣ್ಣಲಿ ಮೊಗೆದು ಸಸಿದುದು.