ಪುಟ:ಜೀವಂಧರ ಚರಿತೆ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಸ್ಕರನವಿರಚಿತ ಧರಣಿಪತಿ ಕೇಳಿತ್ತಲಾಪುರ | ವರದೊಳಗೆ ಗಂಧೋತ್ಕಟನು ಕಡು | ಹರುಷದಲಿ ಪುತ್ರೋತ್ಸವನ ಮೂಡಿಸಿದನಾದಿವಸ | ದುರುಳ ಕಾಷ್ಠಾಂ ರನತಿ ವಿ | ಸ್ವರದಿ ರಾಜ್ಯದ ಪಟ್ಟವನು ತಾ | ಧರಿಸಿ ಬು' ಕಾಕ್ಷಣವೆ ದೂತರ ಕರೆದು ನೇಮಿಸಿದ || ೪೭ ಪೌರಜನರಿಷ್ಟವನು ನಿಜಪರಿ | ವಾರ ಸನ್ನು ತಸಚಿವರಂತ || ಸ್ಟಾರವನು ಪರಿಜನದ ಗುಬೆಗುಜಿನ ಪ್ರವರ್ತನೆಯ || ಆರಯಿದು ಬಂದಲುಹಿ ನೀವೆನ | ಊರೊಳದನಾತೈದು ಕಾಷ್ಟಾಂ | ಗಾರಗಂತಾಹದನ ಚರರುಹಿದರು ವಿನಯದಲಿ || ೪೮ ಸುರುಚಿರದಿ ಗಂಧೋತ್ಸಟನ ಮಂ | ದಿರದೊಳಾದುತ್ಸವವದಲ್ಲದೆ | ಪುರದೊಳಗೆ ಸತ್ಯಂಧರನು ಮಡಿದುದಕೆ ಶೋಕಿಸದ | ನರನದೋರ್ವನ ಕಾಣೆವೆನಲ | ಚೌರಿಯದೆಂದಾಖಳನು ಬೇಗದಿ | ಕರೆಸಿ ಗಂಧೋತ್ಕಟಗೆ ಕಾಷ್ಟಾಂಗಾರನಿಂತೆಂದ || Vଟ - ಹೋಟಲೊಳಿಲ್ಲದ ವಿಭವ ನಿನ್ನಯ | ನಿಳಯದೊಳಗಿಂದೇನೆನಲು ನೀ | ಎಳೆಯ ಪಟ್ಟವನಾಂತ ಸಂತಸದಲ್ಲಿ ಮಹೊತ್ಸವವ || ಒಲವಿನಲಿ ಮಾಡಿಸಿದೆನೆನೆ ಖಳ | ತಿಲಕ ರಾಗಿಸಿ ಮೆಚ್ಚಿ ಧನವಿ || ತೊಲಿದುದನು ಬೇಡೆನೆ ವಣಿಕ್ಟರನಾಗಿಂತೆಂದ || ೫೦ - ಎನಗೆ ಸುತನಿಂದುದಯಿಸಿದನೀ | ದಿನದಿ ಜನಿಸಿದ ಪುರದ ವೈಶ್ಯರ | ತನಯರೆನ್ನಾ ತ್ಮ ಜನ ಸಂಗಡ ಬಳೆಯಬೇಕೆನಲು || ಜನಪನಾಜ್ಞೆಯೊಳಂದು ಪುರದಲಿ | ಜನಿಸಿದ್ದೆನೂರ್ವರು ಕುಮಾರಕ | ರಬರಾತನ ಮನೆಯೊಳೆಸೆದರು ಭೂಪ ಕೇಳೆಂದ || ೫೧