ಪುಟ:ಜೀವಂಧರ ಚರಿತೆ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೯-ವೈವಾಹಪ್ರವರ್ಣನೆ-(ಪುಟ ೧೦೭-೧೧೬) ಸಮಸ್ತರಾಜರನ್ನು ಜರೆದುಳಿಕ ಗಂಥರ್ವದತ್ತಯನ್ನು ಜೀವಂಧರನು ಗಾಂಧರ್ವ ವಿದ್ಯೆಯಲ್ಲಿ ಮೆಚ್ಚಿಸಿ, ವರಿಸಿ, ಪುತಿಭಟಿಸಿದ ನೃಪಾಲರನ್ನು ಗೆಲ್ಲುದು, ಸಂಧಿ ೧೦-ಗುಣಮಾಲೆಯ ವಿವಾಹ-(ಪುಟ ೧೧೬-೧೨೬) ಜೀವಂಧರನು ಒಂದು ಶನಕಗೆ ಸದ್ಧತಿಯನ್ನು ವಿರಚಿಸಿದುದು ; ಮತ್ತು ಗುಣಮಾಲೆ ಯನ್ನು ಪರಿಣಯವಾದುದು. ಸಂಧಿ ೧೦-ಪದ್ಯಾ ಸಂಗವರ್ಣನೆ-(ಪುಟ ೧೨೬–೧೩೨) ಮರಣಭಯವನ್ನು ಯಕ್ಷನಿಂದ ಪರಿಹರಿಸಿಕೊಂಡು, ಸಂಚಾರಹೊರಟು, ಪದ್ಮ ಯೆಂಬವಳನ್ನು ಮದುವೆಯಾದುದು, ಸಂಧಿ ೧೨-ಕನಕಮಾಲೆಯ ವಿವಾಹ-(ಪುಟ ೧೩೨-೧೪೨) ಅರಣ್ಯದಲ್ಲಿ ಮಿಥ್ಯಾ ತಪಸ್ವಿಗಳಿಗೆ ಧರ್ಮಬೋಧನೆಮಾಡಿ, ಬಳಿಕ ವಿವಳಪುರಕ್ಕೆ ಬಂದು ಅಲ್ಲಿ ಚೈತ್ಯಾಲಯದ ಕವಾಟಗಳ ತೆಗೆಯಿಸಿ, ಕ್ಷೇಮಲಕ್ಷ್ಮಿಯನ್ನು ವಿವಾಹ ವಾಗಿ, ಮುಂದೆ ಬರುತ್ತ ಕೈ ಮಪುರದಲ್ಲಿ ಕನಕಮಾಲೆಯನ್ನು ವಿವಾಹವಾದುದು, ಸಂಧಿ ೧೩-ಕುಮಾರಪುರಪ್ರವೇಶ- (ಪುಟ ೧೪೨-೧೪೭) ಜೀವಂಧರನು ತನ್ನ ಜನನಿಯ ಇರುವಿಕೆಯನ್ನು ಸಖರಿಂದ ತಿಳಿದು, ಆಕೆಯನ್ನು ಗೋವಿಂದನಲ್ಲಿರಿಸಿ, ಸಖರು ಸಹ ರಾಜಪುರಿಗೆ ಬಂದುದು, ಸಂಧಿ ೧೪-ಸುರಮಂಜರಿಯ ಪರಿಣಯ-(ಪುಟ ೦೪೮-೧೫೪) ರಾಜಪುರಿಯಲ್ಲಿ ವಿಮಲೆಯನ್ನೂ ಸುಂದರಿಯಾದ ಸುರಮಂಜರಿಯನ್ನ ವಿವಾಹ ವಾದುದು. ಸಂಧಿ ೧೫-ಪಟ್ರೋತ್ಸಾಹವರ್ಣನೆ-- (ಪುಟ ೧೫೫-೧೬೬) ಜೀವಂಧರನು ಚಾಪದೊಳತುಳಯಂತ್ರವನ್ನು ಮುರಿದು, ಲಕ್ಷ್ಮಿ ಯನ್ನು ಪಡೆದು, ಪ್ರತಿಭಟಿಸಿದ ಕಾಷ್ಠಾಂಗಾರನನ್ನು ಯುದ್ಧದಲ್ಲಿ ಕೊಂದು, ರಾಜ್ಯವನ್ನು ಪರಿ ಪಾಲಿಸಿದುದು, ಸಂಧಿ ೧೬-ನಂದನವನವಿಹಾರಣ-(ಪುಟ ೧೬೬-೧೮೧) | ಲಲನೆಯರು ಸಹಿತ ಜೀವಂಧರನು ನಂದನವನದೊಳಗೆ ಎರಡುಮಾಸ ವಿಹಾರದಲ್ಲಿ ಕಳೆದುದು ; ರಾಜಧಾನಿಗೆ ಆಗಮನ. ಸಂಧಿ ೧೭-ಪುರರಾತ್ರೀವಿಹಾರ- (ಪುಟ ೧೮೧-೧೯೮) ಜೀವಂಧರನು ರಾತ್ರಿಯಲ್ಲಿ ಪುರವನ್ನು ಸಂಚರಿಸಿದುದ್ದು, ಸಂಧಿ ೧೮-ನಿರ್ವಾಣಾದಿವರ್ಣನೆ..- (ಪುಟ ೧೯೯-೨೦೩) ಜೀವಂಧರನು ವೈರಾಗ್ಯಹೊಂದಿ, ರಾಜ್ಯಭಾರವನ್ನು ತನ್ನ ಸುತ ವಸುಂಧರಗಿತ್ತು, ತಪದುನ್ನತಿಯಿಂದ ಮೋಕ್ಷಸಂಪದವನ್ನು ಪಡೆದುದು,