ಪುಟ:ಜೀವಂಧರ ಚರಿತೆ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಸ್ಕರನವಿರಚಿತ ೧೦ ವರವಣಿಗೈರನಿಂತು ಬೋಧಿಸು | ತಿರಲು ಹಡಗೊಡೆದದ್ದಿ ಮಧ್ಯದೊ | ಳಿರದೆ ಮುಜುಗಲು ಮುರಿದ ಕೂಪಸ್ತಂಭವನು ಸಾರಿ | ಭರದೊಳಾಶ್ರೀದತ್ತ ದ್ವೀಪಾಂ | ತರವನೈದಿರಲಾಪ್ರದೇಶದಿ | ನರನದೊರ್ವನು ಬಂದಿರಲು ಕಂಗೆಟ್ಟು ತಾ ನುಡಿದ || ೯ - ಅರಸ ಕೇಳ್‌ ಶ್ರೀದತ್ತ ತನ್ನ ಯ | ತೆಹನನಾತಂಗಲುಹಿ ಶೋಕಿಸು | ತಿರಲವನು ಮಾತಾಡಿಸುತಲಾಬಳಿಕ ವಿಜಯಾರ್ಧ | ಗಿರಿಗೆ ಕೊಂಡುಯೊಂದು ಠಾವಿನೊ | ಳುರುತರದಿ ಕುಳ್ಳಿರಿಸಿ ಸುಪ್ರಿಯ | ತರದೊಳಾತಗೆ ಕಥೆಯ ಸೇತ್ತಿರ್ದನೊಲವಿನಲಿ || ಪ್ರಣುತವಿಜಯಾಚಳದಿ ವರದ | ಕ್ಷಿಣದೊಳುರುಗಾಂಧಾರವಿಷಯಾಂ | ಗಣದಿ ನಿತ್ಸಾಲೋಕ ಪ್ರರವುಂಟಲ್ಲಿ ಭೂಪಾಲ | ಮಣಿ ಗರುಡವೇಗಾಖ್ಯನೃಪ ಧಾ | ರಿಣಿಯೆನಿಪ ಸತಿಸಹಿತಲಿಹನಾ || ರೆಣೆ ಧರಿತ್ರಿಯೊಳಾನೈಪಗೆ ವೈಶ್ಯಂದ್ರ ಕೇಳೆಂದ || ಉರ್ವರೆಯೊಳನುನಯದೊಳಿರಲವ | ರಿರ್ವರಿಗೆ ಜನಿಸಿದ ಅಸದ್ದಂ || ಧರ್ವದತ್ತೆಯೆನಿಪ್ಪ ಸುತೆಗೆ ಎಲೋಲಯಯೌವನವು || ಪಾರ್ವರೀಕ್ಷಿಸಿ ಕೋಮಲೆಯ ನೀ ! ನೋರ್ವಗೀಯದೊಡಕು ಪಟವೆನ | ಲುರ್ವಿಪತಿ ತನ್ನರಸಿ ಧಾರಿಣಿಗೆಂದನೊಲವಿನಲಿ || - ವರಕುಮಾರಿಗೆ ರಾಜಪರಿಯೊಳು | ಮೆರೆವ ವೀಣೆಯೊಳೊಲಿಸಿದಾತನು | ಪುರುಷನೆನೆ ಮೌಹೂರ್ತಿಕರು ಬೆಸಸಿರಲು ತಾನಾವ | ಪರಿಯೊಳದು ಘಟಿಸುವದು ನಾವಾ | ಪುರಿಗೆ ಹೋಹುದಲ್ಲ ವೆಂದೆದೆ | ಜರಿದು ನೃಪ ಬಣಕೊಂದುಪಾಯವ ಕಂಡು ಸತಿಗೆಂದ || ೧೩ ಗಿಗೆ ೧೨