ಪುಟ:ಜೀವಂಧರ ಚರಿತೆ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ೮೭ ಧರೆಯೊಳಬ್ಬಿಯ ಘೋಷವಖಿಳಾ೦ | ಬರದಿ ಮೇಘನಾದ ವಿಪಿನಾಂ | ತರದಿ ಸಿಂಹಾರಾವ ದಿಗ್ವಲಯದಲಿ ದಿಗಿಭರವ || ಗಿರಿಗಳಲಿ ನಿರ್ಝರವಿನದ ಎ | ಸ್ವರದೊಳುದಿಸಿತೆನಲ್ಕೆ ಭೂಮಿ || ಶ್ವರರ ಪಯಣದ ಭೇರಿಭಾಂಕೃತಿ ತುಂಬಿದುದು ಜಗವ || ೩೪ * ಧರಣಿಯೆಲ್ಲ ರಥಾಶ್ವಭಟಕುಂ || ಜರದ ಮಯವಂಬರ ಚಳಚ್ಛಾ | ಮರಪತಾಕಾಛತ್ರ ಸೀಗುರಿ ಸಿಂಧ ವಸ್ಯಮಯ || ವರದಿಶಾವಳಿಯಶ್ವಹೇಷಾ || ಸ್ವರದ ಬೃಂಹಿತಸಂಚವಾದ್ಯೋ | ತರದ ಮಯ ತಾನಾಗೆ ನಡೆದುದು ಸಕಲಭೂಮಿಪರು | ೩೫

  • ತ್ವರಿತದಲಿ ಬರ್ಪಖಿಳಭೂಮಿ | ಶ್ವರರ ಚಾತುರ್ಬಲದ ಭಾರಕೆ ||

ಧರೆ ರಸಾತಲಕದ್ದು ದಾಶಾಕರಿಗಳೊಳಗಿದುವು || ಉರಗಪತಿ ತಲೆವಾಗಿದನು ತ | ದೃರದೊಳಾಕಮಠೇಂದ್ರನೆಡೆ ನೆರೆ | ಬಿದುದೆನಲುಗ್ಗಡದಿ ನಡೆದುದು ಸಕಲನೃಪಕಟಕ | ೩೬ ವರಮಹೀಪಾಲಕರು ಘನ ಸೀ | ಗುರಿ ಚಮರ ವಿವಿಧಾತಪತ್ರೋ | ತರದಿ ನೆಗಪಿದ ಶಸ್ತ್ರಸಮಿತಿಯ ಸಂದಣಿಗಳಿಂದ | ತರಣಿ ಚಂದ್ರ ಸಮಿಾರ ವಿದ್ಯಾ | .ಧರ ಸುರಾವಳಿ ಪಕ್ಷಿಜಾತಿಗೆ | ಚರಿಸಲೆಡೆಯಿಲ್ಲ ಂಬರದೊಳವನೀಶ ಕೇಳೆಂದ || ಧರಣಿ ಹೇಷಾರವವು ಗಜವಿ | ಸ್ತರದ ಬೃಂಹಿತನಾದ ಭಟರ | ಬೃರಣೆ ರಥಕೀತ್ಕಾರ ವರವಾದ್ಯಗಳ ಭಾಂಕೃತಿಯು | ವರಸುವನ್ನಾಭರಣರವವಾ | ವಸೆ ವಾರಿಧಿ ಮೇರೆದಪ್ಪಿದ | ಪರಿಯೊಳಗಳನೃಪಾಲಕರು ಬರುತ್ತಿರ್ದರೊಗ್ಗಿನಲಿ || ೩೮ ೩೭