ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜ್ಯೋತಿಶ್ಯಾಸ್ತ್ರ ಈ ಹೊತ್ತು ನಮಗೆ ಕಾಣದಿದ್ದರೂ ನಮ್ಮ ಯಂತ್ರಗಳ ಶಕ್ತಿಯು ಬೆಳೆದಂತೆ ಇಂದಿಲ್ಲ ನಾಳೆ ಅವು ಕಾಣಬಹುದಾಗಿತ್ತು. ಆದರೆ ಈಗ ೧೦-೮ ವರುಷ ಗಳಲ್ಲಿ ಐನ್ಸ್ಟೆನ್ ಎಂಬ ಜರ್ಮನ್ ಶಾಸ್ತ್ರಜ್ಞನು ಈ ಆಶೆಯ ಮೂಲವನ್ನೆ ಕಡಿದಿರುವನು, ಪ್ರಕಾಶಕಿರಣಗಳೂ ಪರಮಾಣುಗಳೇ ಇರುವುದರಿಂದ ಅವುಗಳ ಮೇಲೆಯ ಹಾದಿಯಲ್ಲಿಯ ನಕ್ಷತ್ರಗಳ ಆಕರ್ಷಣವಾಗು ವುದರಿಂದ ಅವು ಮಣಿಯುತ್ತ ಹೋಗುವವೆಂದೂ, ಹೀಗೆ ಮಣಿದು ಮಣಿದು ವರ್ತುಳಾಕಾರವಾಗಿ ಸಾಗಿ ಮತ್ತೆ ಅವು ಮೊದಲು ಹೊರಟ ನಕ್ಷತ್ರಕ್ಕೆ ತಟ್ಟುವವೆಂದೂ ಅವನು ಪ್ರತಿಪಾದಿಸಿರುವನು. ಹೀಗಿದ್ದರೆ ಕೆಲವೊಂದು ಅಂತರದ ಆಚೆಗಿರುವ ನಕ್ಷತ್ರಗಳ ಕಿರಣಗಳು ನಮಗೆ ತಲುಪುವುದು ಶಕ್ಯವೆ ಇಲ್ಲ. ಆದುದರಿಂದ ಮೇಲೆ ಹೇಳಿದ ಕ್ಷೇತ್ರದ ಹೊರಗಿನ ನಕ್ಷತ್ರಗಳು ನಮಗೆ ಕಾಣಿಸುವುದೆ ಶಕ್ಯವಿಲ್ಲೆಂದು ನಾವು ಭವಿಷ್ಯ ಹೇಳಬಹುದು. ಈಗ ನಮಗೆ ಕಾಣುವ ನಕ್ಷತ್ರಗಳಲ್ಲಿ ಎಲ್ಲಕ್ಕೂ ದೂರದ ನಕ್ಷತ್ರದಿಂದ ನಮಗೆ ಬರುವ ಪ್ರಕಾಶಕಿರಣಗಳಿಗೆ ೧೪ ಕೋಟಿ ವರುಷಗಳು ಬೇಕಾಗುವವು. ಬಹಳವಾದರೆ ಇದರ ೧ ಸಾವಿರಪಟ್ಟು ಅಂತರದಮೇಲಿನ ನಕ್ಷತ್ರಗಳು ನಮಗೆ ಕಾಣಿಸಬಹುದು. ಅದರ ಹೊರಗಿನವು ಎಂದೂ ಕಾಣಲಾರವು. ಹೀಗೆ ನಮ್ಮ ಹಾರಿಕೆಗೆ ತುದಿಯುಂಟೆಂದು ತಿಳಿದರೂ ಈ ಹಾರಿಕೆ ಯೇನೂ ಸಣ್ಣದಲ್ಲ. ಸೂರ್ಯನಿಂದ ನಾವು ಇಷ್ಟುದೂರ ಇದ್ದರೂ ನಮ್ಮ ಕೆಲವು ಅಣ್ಣಂದಿರು ಅವನಿಂದ ನಮ್ಮ ನಾಲ್ವತ್ತು ಪಟ್ಟು ದೂದಲ್ಲಿರುವರು. ಈ ಸೂರ್ಯಮಾಲೆಯೊಂದು ವರ್ತುಲಾಕಾರದ ಗಾಲಿಯಂತಿರುವುದು. ಈ ಗಾಲಿಯ ಸುತ್ತಳತೆಯು ೧೮,೦೦೦,೦೦೦,೦೦೦ ಮೈಲುಗಳಾಗುವವು. ಇದನ್ನು ಸುತ್ತು ಹಾಕಲಿಕ್ಕೆ ಬೆಳಕಿಗೇ ಒಂದ ದಿವಸ ಹತ್ತುವುದು, ಸೂರ್ಯಮಾಲೆಯು ಇಷ್ಟು ದೊಡ್ಡದಿದ್ದರೂ ಇಡೀ ಆಕಾಶದಲ್ಲಿ ಅದು ಒಂದು ಕಣ ಮಾತ್ರವಾಗಿರುವುದು. ಇಂಧ ಕಣಗಳು ಆಕಾಶದಲ್ಲಿ ಅನೇಕ ವಿರುವವು. ಒಟ್ಟಿಗೆ ಇಂಧ ಸೂರ್ಯರು ೩,೦೦೦ ಕೋಟಿ ಇರುವರೆಂದು ಡಾ|| ಸಿಯರ್ಸ ಎಂಬವರು ತರ್ಕಿಸಿರುವರು ! ಆಕಾಶಗಂಗೆಯೆ ಈ ಕ್ಷೇತ್ರದ ಮೇರೆಯಾಗಿರುವುದು.