ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜ್ಯೋತಿಶ್ಯಾಸ್ತ್ರ ನಿಜವಾಗಿಯೆ ಇಂತಹ ರೂಪಾಂತರವು ಶಕ್ಯವಿರುತ್ತದೆ. ಅಲ್ಲಿ ಹುಟ್ಟುವ ಉಷ್ಣತೆಯು ನಮ್ಮಲ್ಲಿಯಂತೆ ಉರಿಯುವುದರಿಂದಲ್ಲ; ಆದರೆ ಅಲ್ಲಿಯ ಪದಾರ್ಥಗಳು ಒಡೆಯುವುದರಿಂದ ಉಂಟಾಗುತ್ತಿರುವುದು. ನಾವು ಕಟ್ಟಿಗೆ ಯನ್ನು ಸುಟ್ಟರೆ ತುಸು ಉಷ್ಣತೆಯೇನೊ ಹೊರಡುವುದು. ಆದರೆ ಕಟ್ಟಿಗೆಯು ನಾಶವಾಗುವುದಿಲ್ಲ. ಬೂದಿಯಾಗಿಯ ಬೇರೆ ಕೆಲವು ವಾಯುಗಳಾಗಿಯೂ ಪರಿಣಮಿಸುವುದು. ಸೂರ್ಯನಮೇಲೆ ಇಂಧ ಕಟ್ಟಿಗೆಯಿದ್ದರೆ ಅದು ನಿಜವಾಗಿಯೂ ನಾಶವಾಗುವುದು. ಮತ್ತು ಈ ನಾಶದಿಂದ ನಾವು ಇಲ್ಲಿ ಅದರೊಳಗಿಂದ ದೊರಕಿಸಬಹುದಾದ ಉಷ್ಣತೆಯ ಲಕ್ಷಾವಧಿಪಟ್ಟು ಉಷ್ಣತೆಯು ದೊರಕುವುದು. ಇಂಧ ದ್ರವ್ಯನಾಶವು ಎಲ್ಲ ನಕ್ಷತ್ರಗಳಲ್ಲಿಯೂ ನಡೆದಿರುತ್ತದೆ. ಇದರಿಂದ ಹುಟ್ಟುವ ಬೆಳಕು-ಶಕೆಗಳ ಕಿರಣರೂಪವಾಗಿ ವಿಶ್ವದಲ್ಲಿ ಸಂಚರಿಸುತ್ತವೆ. ವಿಶ್ವದ ತುದಿಗೆ ಹೋಗಿ ಸುತ್ತಲು ತಿರುಗಹತ್ತುತ್ತವೆ! ಆದರೆ ಅವು ಪುನಃ ದ್ರವ್ಯಗಳಾಗಲಾರವು. ಹೀಗೆ ವಿಶ್ವವು ದಿನಾಲು ಸವೆಯುತ್ತ ನಡೆದಿದೆ. ಹೀಗೆ ಸವೆದ ಬಳಿಕ ಒಂದು ದಿವಸ ಇಲ್ಲದಂತಾಗ ಬೇಕಲ್ಲವೆ? ಒಮ್ಮೆ ಕೀಲಿಕೊಟ್ಟ ಗಡಿಯಾಳವು ಅದರೊಳಗಿನ ಕೀಲಿಯು ತೀರಿದಮೇಲೆ ನಿಲ್ಲಲೇ ಬೇಕಲ್ಲವೆ? ಹೀಗೆ ವಿಶ್ವಕ್ಕೆ ದೇವರು ಒಂದಾನೊಂದು ಕಾಲದಲ್ಲಿ ಕೀಲಿ ಕೊಟ್ಟಿರಲಿಕ್ಕೆ ಸಾಕು, ಈ ಕೀಲಿಯೆಲ್ಲ ತೀರಿದವೆ ಲೆ ಎಲ್ಲ ನಕ್ಷತ್ರಗಳೂ ಗ್ರಹಗಳೂ ತೇಜೋಮೇಘಗಳೂ ಇಲ್ಲದಂತಾಗುವವು ! ವಿಶ್ವದ ತುಂಬೆಲ್ಲ ಪ್ರಕಾಶದ ಕಿರಣಗಳೂ ಉಷ್ಣತೆಯ ಕಿರಣಗಳೂ ಮಾತ್ರ ವ್ಯಾಪಿಸುವವು | ವಿಶ್ವವು ಅಪಾರವಾಗಿರುವುದರಿಂದ ಇಷ್ಟು ದ್ರವ್ಯದ ನಾಶದಿಂದ ಹೊರಡುವ ಕಿರಣಗಳೆಲ್ಲವೂ ಎಲ್ಲಿಯೊ ಅಡಗುವವು. ವಿಶ್ವವು ಇತ್ತೊ ಇಲ್ಲವೊ ಎನಿಸುವದು. ಆಮೇಲೆ ಏನಾಗಬಹುದು ? ಎಂಬುದನ್ನು ಯಾರೂ ಹೇಳಲಾರರು. ಒಮ್ಮೆ ಇಂಧ ಕಿರಣಗಳಿಂದಲೇ ಸೃದ್ಧಿಯು ಹುಟ್ಟಿರುವುದೆಂದ ಬಳಿಕ ಪುನಃ ಏಕೆ ಹುಟ್ಟಲಿಕ್ಕಿಲ್ಲ? ಹೀಗೆ ಹಿಂದೆ ಎಷ್ಟೋ ಸಾರಿ ಹುಟ್ಟಿರಬಹುದು, ಅಧವಾ ದೇವರ ಮನಸ್ಸಿಗೆ ಬಂದರೆ ಆತನು ಈ ವಿಶ್ವವನ್ನು ಹಾಗೆಯೇ