ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅದ್ಭುತವಾದ ಆನಂದ ಅಳಿಸಿಯ ಮತ್ತೆ ಬರೆಯುತ್ತಲೂ ವಿದ್ಯೆಯನ್ನು ಬೆಳೆಸಿಕೊಂಡು ಆನಂದ ಪಡುವಂತೆ, ಮನುಷ್ಯನೂ ದಿನದಿನಕ್ಕೆ ಹೆಚ್ಚು ಹೆಚ್ಚಿಗೆ ಜ್ಞಾನವನ್ನು ಗಳಿಸಿ ಆನಂದಪಡುತ್ತಾನೆ. ಜ್ಞಾನವು ಎಷ್ಟು ಹೆಚೋ ಅಷ್ಟು ಆನಂದವೂ ಹೆಚ್ಚು. ಜ್ಯೋತಿಶ್ಯಾಸ್ತ್ರವೆಂದರೆ ಈ ನಭೋಮಂಡಲದ ಗೂಢವನ್ನು ಅರಿತು ಕೊಳ್ಳುವ ಶಾಸ್ತ್ರವು. ಇದು ನಮ್ಮ ವಿಶ್ವದ ಕಲ್ಪನೆಯನ್ನು ವಿಶಾಲವಾಗಿ ಮಾಡಿದೆ. ಸೃದ್ವಿಯೆಂದರೆ ದೊಡ್ಡದೊಂದು ಲೋಕ; ಅದರ ಸುತ್ತಲೂ ತಿರುಗುವ ಸೂರ್ಯಚಂದ್ರರೆಂದರೆ ತೇಜಃಪುಂಜವಾದ ಎರಡು ಚಿಕ್ಕ ಗೋಲಗಳು ; ತಾರಕೆಗಳೆಂದರೆ ಆಕಾಶದಲ್ಲಿ ಹೊನ್ನೆಯ ಹುಳಗಳಂತೆ ಮಿಣಿ ಮಿಣಿ ಮಿನುಗುವ ಚಿಕ್ಕ ಜ್ಯೋತಿಗಳು-ಎಂಬ ಕಲ್ಪನೆಯು ಈಗ ಹೋಗಿದೆ. ಜ್ಯೋತಿಶಾಸ್ತ್ರದ ಶೋಧಗಳಿಂದ ಈ ವಿಶ್ವವೆಂಬುದು ಅನಂತವಾದುದೂ ಅಪಾರವಾದುದೂ ಆಗಿರುತ್ತದೆಂಬ ಮಾತು ನಮಗೆ ಗೊತ್ತಾಗಿದೆ. ಮೊದಲು ವಾಮನಮೂರ್ತಿಯಾಗಿದ್ದು ಈಗ ಅದು ಬೆಳೆದು ಸೃದ್ಧಿ, ಅಂತರಿಕ್ಷ ಮತ್ತು ಆಕಾಶಗಳನ್ನು ಅಳೆಯುವ ತ್ರಿವಿಕ್ರಮಮೂರ್ತಿಯಾಗಿದೆ. ಹಿರಿಯರು ಮಕ್ಕಳಿಗೆ ದೊಡ್ಡವರಾಗಿರೆಂದೂ ಆಯುಷ್ಮಂತರಾಗಿರೆಂದೂ ಆಶೀರ್ವದಿ ಸುವುದಿಲ್ಲವೆ? ಹಾಗೆ ಜ್ಯೋತಿಶಾಸ್ತ್ರವು ನಮ್ಮ ವಿಶ್ವವನ್ನು ದೊಡ್ಡದಾಗ ಲೆಂದು ಹರಸಿರುವುದು. ಭೂಗರ್ಭಶಾಸ್ತ್ರವು ಅದಕ್ಕೆ ಆಯುಷ್ಯಂತ ವಾಗೆಂದು ಹರಸಿರುವುದು. ಎಂದರೆ ಜ್ಯೋತಿಶ್ಯಾಸ್ತ್ರದ ಶೋಧಗಳಿಂದ ನಮ್ಮ ವಿಶ್ವದ ಕಲ್ಪನೆಯು ಈಗ ಮಿತಿಮೀರಿ ಬೆಳೆದಿದೆ. ಭೂಮಿಯ ಹೊಟ್ಟೆ ಯೊಳಗಿರುವ ಪದಾರ್ಥಗಳ ಶೋಧಗಳಿಂದ ಪೃಥ್ವಿಯ ಆಯುಷ್ಯವು ಬೆಳೆದು, ಅದು ಹುಟ್ಟಿ ಲಕ್ಷಾವಧಿ ವರುಷಗಳಾಗಿರಬೇಕೆಂದು ಸಿದ್ದವಾಗಿದೆ. ಈ ಪ್ರಕಾರವಾಗಿ ನಮ್ಮ ವಿಶ್ವದ ಆಕಾರವನ್ನು ಅಸಂಖ್ಯವಾಗಿ ಬೆಳಿಸಿದ ಈ ಜ್ಯೋತಿಶ್ಯಾಸ್ತ್ರವನ್ನು ತಿಳಿದುಕೊಳ್ಳುವ ಇಚ್ಛೆಯು ಯಾರಿಗೆ ಉಂಟಾಗ ಲಿಕ್ಕಿಲ್ಲ ? ಒಟ್ಟಿಗೆ, ಈ ಶಾಸ್ತ್ರದಷ್ಟು ಆನಂದವನ್ನು ಕೊಡುವ ವಿಷಯವು ಬೇರೊಂದಿಲ್ಲ. ದೇವರ ಮಹಿಮೆಯು ಎಷ್ಟು ಅಗಾಧವಾಗಿರುತ್ತದೆಂಬು ದನ್ನು ಅರಿಯಬೇಕಾದರೆ, ನಾವು ಮುಗಿಲಿನೊಳಗಿನ ಈ ಅದ್ಭುತ