ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತಪಶ್ಚರ್ಯ ಹುಡುಕಿ ತೆಗೆದಿದ್ದನು. ಆದರೆ ತಾನು ಮಾಡಿದ ಶೋಧನೆಗಳನ್ನು ಪ್ರಸಿದ್ದಿ ಸ ಲಿಕ್ಕೆ ಕೂಡ ಅವನಲ್ಲಿ ಹಣವಿರಲಿಲ್ಲ. ಇಪ್ಪತ್ತು ವರುಷಗಳವರೆಗೆ ಅವು ಹಾಗೆಯೇ ಉಳಿದವು. ೧೬೧೦ರಲ್ಲಿ ಅವನ ದುಃಖಕ್ಕೆ ಪರಮಾವಧಿ ಯಾಯಿತು. ತೀಕ್ಷ್ಮವಾದ ಬಡತನ; ಯುದ್ದದಲ್ಲಿ ಆ ವರ್ಷ ಆತನ ಊರು ಶತ್ರುಗಳ ವಶವಾಯಿತು ; ಆತನ ಹೆಂಡತಿ ಸತ್ತಳು ; ಪ್ರೀತಿಯ ಮಗನೂ ಸತ್ತುಹೋದನು. ಆಗ ಕೆಪ್ಲರನು ಹೊಟ್ಟೆ ಹೊರೆಯುವುದಕ್ಕೆ ಆಸ್ಪಿಯಾಕ್ಕೆ ಹೋದನು. ಮುಂದೆ ಆತನು ಪ್ರೊಟೆಸ್ಟಂಟ ಧರ್ಮದವನಾದುದರಿಂದ ಲಿಂಝ ಎಂಬ ಪಟ್ಟಣದಿಂದ ಹೊರಗೆ ಹಾಕಲ್ಪಟ್ಟನು. ಆತನು ಕೋಪ ರ್ನಿಕಸನ ಸಿದ್ದಾಂತದ ವಿಷಯವಾಗಿ ಒಂದು ಪುಸ್ತಕವನ್ನು ಬರೆದನು. ಅದನ್ನು ಯಾರೂ ಓದಕೂಡದೆಂದು ಪೋಪನ ಅಪ್ಪಣೆಯಾಯಿತು! ಹೀಗೆ ಆತನು ಅನೇಕ ಕಷ್ಟಗಳಿಗೆ ಗುರಿಯಾದುದರಿಂದ ಆತನ ಪ್ರಕೃತಿಯು ಕ್ಷೀಣ ವಾಯಿತು; ಮತ್ತು ಆತನು ೧೬೩೦ರಲ್ಲಿ ಸತ್ತುಹೋದನು. ಆತನ ತರುವಾಯದಲ್ಲಾದ ಪ್ರಸಿದ್ಧ ಜ್ಯೋತಿಷಿಯೆಂದರೆ ಡಚ್ಚ ದೇಶದವನಾದ ಹಾಯಘನ್ನು ಆತನು ೧೬೨೯ರಲ್ಲಿ ಹುಟ್ಟಿದನು. ಈತನು ಜ್ಯೋತಿಶಾಸ್ತ್ರದಲ್ಲಿ ಹೊಸ ಹೊಸ ಯಂತ್ರಗಳನ್ನು ಶೋಧಿ ಸಿದನು. ಮಾಯಕೊನಂತೆ ಈತನೂ ವಕೀಲಿಗೆ ಹೋಗತಕ್ಕವನು. ಆದರೆ ಅದನ್ನು ಬಿಟ್ಟು ಜ್ಯೋತಿಶಾಸ್ತ್ರದ ಶೋಧದ ಕಡೆಗೆ ತಿರುಗಿದನು. ೧೬೮೧ ನೆಯ ಇಸವಿಯಲ್ಲಿ ಪ್ಯಾರಿಸ ಪಟ್ಟಣದಲ್ಲಿ ಇವನು ಜ್ಯೋತಿಶೋಧಗಳನ್ನು ಮಾಡುವುದರಲ್ಲಿ ತೊಡಗಿದಾಗ ಪ್ರೊಟೆಸ್ಟಂಟ ಜನರು ಬಹಳ ಪೀಡಿಸಲ್ಪಟ್ಟು ರಿಂದ ಈತನಿಗೆ ಹಾಲಂಡಕ್ಕೆ ಓಡಿಹೋಗಬೇಕಾಯಿತು. * ಈತನ ತರುವಾಯದಲ್ಲಾದ ಹೆಸರಾದ ಜ್ಯೋತಿಷಿಯೆಂದರೆ ಇಂಗ್ಲಂಡದ ಟನ್‌ನು. ೧೬೬೦ರಲ್ಲಿ ಈತನ ಜನನವಾಯಿತು. ಇದುವರೆಗಾದ ಜ್ಯೋತಿಶ್ಯಾಸ್ತ್ರದ ಶೋಧಗಳ ಕೀರ್ತಿಯಲ್ಲಿ ಅರ್ಧ ಪಾಲು ಈತನಿಗೇ ಸಲ್ಲ ತಕ್ಕದ್ದು. ಇಷ್ಟು ಪ್ರಸಿದ್ಧನೀತನು. ಗುರುತ್ವಾಕರ್ಷಣವನ್ನು ಶೋಧಿಸಿ ದವನು ಇವನೇ, ಈತನು ಹೆಚ್ಚು ಸುದೈವಿಯು. ಹಿಂದಿನವರಂತೆ ಈತನಿಗೆ ಪರಿಪರಿಯ ಕಷ್ಟಗಳನ್ನನುಭವಿಸಬೇಕಾಗಲಿಲ್ಲ. ಆದರೆ ಆತನ ತಪಶ್ಚರ್ಯ ವೇನೂ ಕಡಿಮೆಯಲ್ಲ. ಆತನು ಸಾಯುವವರೆಗೆ ಈ ಶಾಸ್ತ್ರದ ಶೋಧ