ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಕಾಶರಾಜ ಪಟ್ಟಣ ಅಥವಾ ಖಗೋಳ ೩೧ ಆಕಾಶಗಂಗೆ ಎನ್ನುವೆವು. ಇಂಗ್ಲಿಷಿನಲ್ಲಿ ಹಾಲಿನ ಹರಿ (Milky Way) ಎನ್ನುವರು. ಬರಿಗಣ್ಣಿಗೆ ಇದು ಹೀಗೆ ಕಂಡರೂ ದೂರದರ್ಶಕ ಯಂತ್ರ ಗಳಲ್ಲಿ ಇದರಲ್ಲಿ ಅಸಂಖ್ಯ ನಕ್ಷತ್ರಗಳಿರುವವೆಂದೂ, ಇವು ಬಹಳ ದಟ್ಟವಾಗಿರು ವುದರಿಂದ ಬರಿಯ ಕಣ್ಣಿಗೆ ಒಂದಾಗಿ ಕಾಣುವವೆಂದೂ ತಿಳಿದುಬಂದಿದೆ. ಆಕಾಶದಲ್ಲಿಯ ದೊಡ್ಡ ನಕ್ಷತ್ರಗಳೆಲ್ಲ ಈ ಆಕಾಶಗಂಗೆಯ ಹತ್ತಿರವೆ ಇರುತ್ತವೆ. ಇದರಿಂದ ದೂರಹೋದಂತೆ ನಕ್ಷತ್ರಗಳ ದಟ್ಟಣೆಯು ಕಡಿಮೆ ಯಾಗುತ್ತ ಹೋಗುತ್ತದೆ. ಆಕಾಶಗಂಗೆಯಂತೆಯೆ ಕೆಲವು ಸ್ಥಳಗಳಲ್ಲಿ ಮಂಜಿನಂಧ ಸಣ್ಣ ಪ್ರದೇಶ ಗಳನ್ನು ಕಾಣುವೆವು. ಇವುಗಳಲ್ಲಿ ಅನೇಕಗಳು ದೂರದರ್ಶಕ ಯಂತ್ರ ದೊಳಗಿಂದ ನಕ್ಷತ್ರಗಳ ಗುಂಪುಗಳಾಗಿ ಕಾಣುತ್ತವೆ. ಆದರೆ ಕೆಲವು ಮಾತ್ರ ಮಂಜಿನಂತೆಯೆ ಉಳಿಯುತ್ತವೆ. ಧೂಮಕೇತು ಅಧವಾ ಬಾಲಚುಕ್ಕೆಗಳು ಯಾವಾಗಲಾದರೊಮ್ಮೆ ಆಕಾಶದಲ್ಲಿ ಮೂಡಿ ನಾಲ್ಕಾರು ತಿಂಗಳು ಕಾಣುವವು. ಇನ್ನು ಉಳಿದ ವೆಂದರೆ ಉಿಗಳು. ಇವು ಕೆಲವು ಸೆಕೆಂಡುಗಳವರೆಗೆ ಮಾತ್ರ ಹೊಳೆಯು ವವು. ಜನರು ನಕ್ಷತ್ರಗಳು ಬೀಳುತ್ತವೆಂದು ಹೇಳುವರಷ್ಟೆ. ಅವು ನಿಜವಾಗಿ ನಕ್ಷತ್ರಗಳಲ್ಲ; ಅವು ಈ ಉಿ ಗಳು. ಇವು ಏನಿರಬಹುದೆಂಬುದು ಬಹಳ ದಿವಸಗಳವರೆಗೆ ಗೊತ್ತಿರಲಿಲ್ಲ. ವಿಶ್ವದಲ್ಲಿ ಅತ್ತಿತ್ತ ಚಲಿಸುತ್ತಿರುವ ಕೋಟ್ಯವಧಿ ಬಂಡೆಗಳಲ್ಲಿ ಇವು ಕೆಲವಿರಬೇಕೆಂದು ತಿಳಿದಿದೆ. ಇವುಗಳಿಗೆ ಪ್ರಕಾಶವಿರುವುದಿಲ್ಲ. ಆದರೆ ಹೀಗೆ ಚಲಿಸುತ್ತ ಭೂಮಿಯ ಸುತ್ತಲಿನ ವಾತಾವರಣದಲ್ಲಿ ಸೇರಿದ ಕೂಡಲೆ, ಹವೆಯ ಘರ್ಷಣದಿಂದ ಕಾದು ಸುಡ ಹತ್ತುವವು. ಪೂರ್ಣವಾಗಿ ಸುಟ್ಟಕೂಡಲೆ ಕಾಣದಾಗುವವು, ಆಕಸ್ಮಿಕ ವಾಗಿ ಸುಡದೆ ಭೂಮಿಯವರೆಗೆ ತಲುಪುವುದೂ ಉಂಟು. ವಿಜಾಪುರದ ಗೋಳಗುಮುಟದ ಮುಂದೆ ತೂಗುಬಿಟ್ಟಿರುವ ಕಲ್ಲು ಇಂಧ ಉಿಯ ದೆಂದು ಹೇಳುತ್ತಾರೆ. ಈ ಪ್ರಕಾರವಾಗಿ ಆಕಾಶದಲ್ಲಿ ಅನೇಕ ಪದಾರ್ಥಗಳಿರುವವು.