ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಕ್ಷತ್ರಗಳು ೭೭ ಕೊಡಲ್ಪಟ್ಟಿವೆ. ಇವುಗಳಲ್ಲಿ ಎಷ್ಟೋ ಆಕೃತಿಗಳು ಒಡೆದುಕಾಣುವಂತಹ ವಿರುತ್ತವೆ. ಆದುದರಿಂದಲೆ ಎಲ್ಲ ರಾಷ್ಟ್ರಗಳಲ್ಲಿಯೂ ಇಂಧ ಗುಂಪುಗಳಿಗೆ ಅವೇ ಇಲ್ಲವೆ ಅಂತಹವೇ ಹೆಸರುಗಳು ಇಡಲ್ಪಟ್ಟಿವೆ. ಆಕಾಶದಲ್ಲಿ ಮೊದಲು ಗೊತ್ತುಮಾಡಿಕೊಳ್ಳಬೇಕಾದ ತಾರೆಯೆಂದರೆ ಉತ್ತರ ಧ್ರುವನಕ್ಷತ್ರವು. ನಾವು ಉತ್ತರಕ್ಕೆ ಮೋರೆಮಾಡಿ ನಿಂತರೆ ಕ್ಷಿತಿಜದಮೇಲೆ ಸುಮಾರು ೧೫ ಅಂಶಗಳಿಗೆ ಇದು ಕಾಣುವುದು, ಉಳಿದೆಲ್ಲ ನಕ್ಷತ್ರಗಳೂ ಚಲಿಸುವವು. ಇದು ಇದ್ದಲ್ಲಿಯೇ ಇರುವುದರಿಂದ ಸ್ವಲ್ಪ ಹೊತ್ತಿನಲ್ಲಿಯೆ ನಾವು ಇದನ್ನು ಗುರುತಿಸಬಹುದು. ಒಮ್ಮೆ ಗುರುತಿಸಿ ಯಾವುದೊಂದು ಗಿಡ ಮನೆ ಮುಂತಾದ್ದರಿಂದ ಇದರ ಸ್ಥಾನವನ್ನು ನಿರ್ಣಯಿಸಿದರೆ ಮುಂದೆ ಬೇಕಾದಾಗ ಇದನ್ನು ಕಂಡುಹಿಡಿಯಬಹುದು. ಇದು ಅಷ್ಟು ಹೊಳೆಯುವುದಿಲ್ಲ. ಇದಕ್ಕೆ ೩ನೆಯ ಪ್ರತಿಯ ತಾರೆ ಯೆನ್ನುವರು. - ಸೂರ್ಯನೂ ಚಂದ್ರರೂ ಗ್ರಹಗಳೂ ನಕ್ಷತ್ರ ಗಳೊಳಗಿಂದ ಹಾಯುವ ಮಾರ್ಗವು ಆಕಾಶದ ಬಹುಮಹತ್ವದ ಭಾಗವಾಗಿರುವುದು. ಇದಕ್ಕೆ ರಾಶಿಚಕ್ರ(Belt of the Zodiac)ವೆನ್ನಬಹುದು. ಇದು ಕ್ರಾಂತಿ ವೃತ್ತದ ಎರಡೂ ಬದಿಗೆ ೮ ಅಂಶ ಹಬ್ಬಿರುವುದು. ಇದರಲ್ಲಿ ಹನ್ನೆರಡು ಭಾಗಗಳನ್ನು ಕಲ್ಪಿಸಿ ಅವುಗಳಿಗೆ ರಾಶಿಗಳೆನ್ನುವರು. ಸೂರ್ಯನು ತಿಂಗಳಿಗೊಂದು ರಾಶಿಯನ್ನು ಕ್ರಮಿಸುವನು. ರಾಶಿಗಳ ಹೆಸರುಗಳು ಅನುಕ್ರಮವಾಗಿ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯ, ತುಲ, ವೃಶ್ಚಿಕ, ಮಕರ, ಕುಂಭ, ಮಾನ-ಎಂದಿರುವುದು. ಪಾಶ್ಚಾತ್ಯರಲ್ಲಿಯೂ ಸಾಮಾನ್ಯವಾಗಿ ಇವೇ ಹೆಸರುಗಳ ಇರುವವು. (೧ನೆಯ ಪರಿಶಿಷ್ಟ ನೋಡಿರಿ.) ಸೂರ್ಯ ಚಂದ್ರರೂ ಗ್ರಹಗಳೂ ಯಾವಾಗಲೂ ಈ ಪಟ್ಟಿ ಯಲ್ಲಿಯೇ ಇರುವುದರಿಂದ ಚಂದ್ರನನ್ನೂ ಯಾವುದೊಂದ ಗ್ರಹವನ್ನೂ ನೋಡಿ ನಾವು ಈ ಪಟ್ಟಿಯನ್ನು ಗೊತ್ತುಮಾಡಿಕೊಳ್ಳಬಹುದು. ನಮ್ಮ ದೇಶದಲ್ಲಿ ಇದೇ ಪಟ್ಟಿಯು ೨೭ ಭಾಗಗಳಾಗಿಯ ವಿಭಾಗಿಸ ಲ್ಪಟ್ಟಿದೆ. ಇವುಗಳಿಗೆ ( ನಕ್ಷತ್ರ'ಗಳೆನ್ನುವರು. ಚಂದ್ರನು ೨೭ ದಿವಸ