ಪುಟ:ಜ್ವರ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ ೨೯ }~ ಈಗಿನ ಸಕ್ಷಜಂತುಗಳ ನಾಶವಾಗುತ್ತದೆ, ಹುಳಿ ಮಜ್ಜಿಗೆಯಿಂದ ಕರುಳು ಈಗಿನ ವಿಷಯುಕ್ತ ಜಂತುಗಳ ನಾಶವಾಗುತ್ತದೆ.

  • ಮಜ್ಜಿಗೆಯಲ್ಲಿ ಮ್ಯುರಿಟಿಕ್ ಆಸಿಡ್ಡಿರುವದರಿಂದ ಅದು ಅತ್ಯುಪಯು ಕ್ರವಾದ ಆಮ್ಲವಾಗಿದೆ ಅದರ ಸಹಾಯದಿಂದ ಯಕೃತ, ಉದುಕ (ನೀರುಗಡ್ಡೆ) ಇವುಗಳ ಕ್ರಿಯೆಗಳು ಸರಿಯಾಗಿ ಸಾಗುತ್ತವೆ. ಯಕೃತದೊಳಗಿಂದ ಪಿತ್ತಾಶಯ ದಳಗಾಗುವ ಸಾವವು ಚೆನ್ನಾಗಿ ಆಗುತ್ತದೆ; ಮತ್ತು ಅದು ಉದುಕ (ನೀರುಗಡ್ಡೆ) ದೆಳಗೆ ಪಿತ್ತ ವಾಹಿಯ ದ್ವಾರದಿಂದ ಸ್ರವಿಸುತ್ತದೆ. ಯಕೃತ ಪಿತ್ಥವು ಪಚನಕ್ರಿಯೆಗೆ ಅತ್ಯುಪಯುಕ್ತವಾದದ್ದು, ಅದರ ಮೇಲು ಮಜ್ಜಿಗೆ ಯಿಂದ ಸುಪರಿಣಾಮವಾಗುವದು,

ಮಜ್ಜಿಗೆಯು ಒಗರಾಗಿರುತ್ತದೆ; ಆದರೆ ತಾಚಾ ಮಜ್ಜಿಗೆಯು ಹುಳಿ ಮಧುರವೂ ಒಗರೂ ಆಗಿರುತ್ತದೆ. ಆ ಒಗರಿನ ಗುಣಧರ್ಮದ ವdಲಕವೇ ಮಜ್ಜಿಗೆಯ ಒಗರು ಹೆಚ್ಚಿದೆ. ಮಜ್ಜಿಗೆಯೊಳಗಿನ ಆವದ್ರವ್ಯಗಳು( ಹುಳಿಯು) ಹೆಚ್ಚಾದವೆಂದರೆ ವಿಸ್ಫೋಟಕವಾಗುತ್ತದಾದ್ದರಿಂದ ತಾಜಾ ಮಜ್ಜಿಗೆಯನ್ನೇ ಉಪಯೋಗಿಸತಕ್ಕದ್ದು. ಕೇವಲ ಆಹಾರವೆಂದೇ ಮಜ್ಜಿಗೆಯನ್ನು ಸೇವಿಸ ಬೇಕು, ಸಂಗ್ರಹಿಣಿ, ಮಲವ್ಯಾಧಿ ಮುಂತಾದ ರೋಗಗಳಲ್ಲಿ ಕೆನೆಮೊಸರಿ ನಲ್ಲಿ ಅದರ ಕಾಲುಪಾಲು ನೀರು ಬೆರೆಸಿ ಕಡೆದು, ಬೆಣ್ಣೆ ತೆಗೆಯದಂಥ ಮಜ್ಜಿಗೆ ಯನ್ನು ಕೊಡಬೇಕು; ಆದರೆ ಜ್ವರದಲ್ಲಿ ಮಾತ್ರ ಬೆಣ್ಣೆ ತೆಗೆದ ಮಜ್ಜಿಗೆಯನ್ನೇ ಕಡತಕ್ಕದ್ದು. ಯಾಕಂದರೆ ಬೆಣ್ಣೆಯು ಹಸನಕ್ಕೆ ಜಡವಾಗುವದು; ಜ್ವರ ದಲ್ಲಿ ಅಗ್ನಿ ಮಾಂದ್ಯವಾಗುವದರಿಂದ ಅದು ಜೀರ್ಣವಾಗುವದಿಲ್ಲ. ಎಷ್ಟೋ ಡಾಕ್ಟರರಂತ ಅಂತರ್ದಾಹಕ್ಕೆ ಮಜ್ಜಿಗೆಯಲ್ಲಿ ಬರ್ಫ ಹಾಕಿ ತೆಗೆದುಕೊಳ್ಳಹತ್ತು ವರು; ಆದರೆ ವಿಶೇಷ ಪ್ರಸಂಗಗಳಲ್ಲಿ ಮಾತ್ರ ಅದರ ಸದುಪಯೋಗವಾಗುತ್ತದೆ. ಇತರ ಕ್ರದಲ್ಲಿ ಆಗುವದಿಲ್ಲ. ಬರೇ ತಾಜಾ ಮಜ್ಜಿ ಗಯು ಮಾತ್ರ ನಿರ್ದೇಶಕರವಾದ ಆಹಾರವಾಗಿರುತ್ತದೆ, - ಡಾಕ್ಕ ಶಾಸ್ಟಸಬರಿಯು ಹೇಳುವದೇನಂದರೆ:-೪ ದುಡ್ಡಿನ ಮುದ್ದೆ ಗೆಯ ಸೇವನದಿಂದ ಎಷ್ಟು ಶಕ್ತಿ ಬರುವದೋ, ಅಷ್ಟು ಶಕ್ತಿಯು ೪ ರೂಪಾಯಿ ಗಳ ಮಾಂಸದಿಂದ ಬರಲಾರದು.” ಇರಲಿ. ಮಜ್ಜಿಗೆಯು ಶರೀರಸಂನ ರ್ಧಕವಾಗಿರುವದರಿಂದ, ದಿನಾಲು ಸೇವಿಸಲಿಕ್ಕೆ ಅತಿ ಅಗ್ಗವಾದಂಥ ಆ ಅನ್ನತ ರಸವನ್ನೇ ಬಡವರಾದ ನಮಗೆಲೀಸರ ನಿರ್ಮಿಸಿದ ಆ ದಯಾಘನ ಪರಮೇಶ್ವರ ನನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ ಸರಿ.