ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

92 ಇವರು ದೇಶಾಟನವನ್ನು ಮಾಡಿ, ವಿಶಾಲವಾದ ಮನೋವೃತ್ತಿಯನ್ನು ಸಂಪಾದಿ ಸಿಕೊಂಡಿರುವರು, ಜಗದೀಶ್ವರನೇ ತಂದೆಯೆಂಬದಾಗಿಯೂ, ಲೋಕದಲ್ಲಿ ಇರ ತಕ್ಕ ಸಮಸ್ತ ಜನಗಳೂ ಸಹೋದರರೆಂಬದಾಗಿಯೂ, ಎಲ್ಲರೂ ಕ್ಷೇಮವಾಗಿ ದ್ದರೆ ನಾವೂ ಕೈ ಮವಾಗಿರುವೆವೆಂಬದಾಗಿಯೂ, ಯಾರಿಗೆ ಕಷ್ಟ ಬಂದಾಗ್ಯೂ, ಅದು ನಮ್ಮ ಕಷ್ಟವೆಂಬದಾಗಿಯೂ, ಸರ್ವರೂ ಅರೋಗದೃಢಕಾಯರಾಗಿ, ಈತಿಬಾಧೆಗಳಿಗೆ ಗುರಿಯಾಗದೆ ಇದ್ದ ಹೊರತು, ಜನಗಳು ತಮ್ಮ ತಮ್ಮ ಕೆಲಸಗ ಳನ್ನು ಸರಿಯಾಗಿ ಮಾಡಿ, ಭೋ ಗ್ಯವಸ್ತುಗಳನ್ನು ನಿರ್ಮಿಸುವುದಕ್ಕಾಗುವುದಿಲ್ಲ ವೆಂಬದಾಗಿಯೂ, ಭೇದಭಾವಗಳಿಂದ ಇಂಧಾ ನ್ಯೂನತೆಗಳಿಗೆ ಅವಕಾಶವನ್ನು ಕೊಟ್ಟರೆ, ಪ್ರಪಂಚದ ಹುಟ್ಟುವಳಿಯು ಕಡಮೆಯಾಗಿ, ತಿನ್ನ ತಕ್ಕವರು ಹೆಚ್ಚಾಗಿ, ಧಾರಣವಾಸಿಗಳು ಚಡಾವಾಗಿ, ಸಕಲ ಜನಗಳಿಗೂ ಕಷ್ಟ ಉಂಟಾಗುವುದೆಂಬದಾ ಗಿಯೂ ಇವರು ತಿಳಿದುಕೊಂಡಿರುವರು, ಸರ್ವ ಜನಗಳ ಹಿತದಲ್ಲಿಯೂ ಇವರು ನಿಸರ್ಗವಾಗಿ ಆಸಕ್ತಿಯುಳ್ಳವರಾಗುವುದಕ್ಕೆ ಈ ವಿಶಾಲವಾದ ಬುದ್ದಿಯೇ ಮುಖ್ಯ ಕಾರಣ, ಇಂಥಾ ಬುದ್ದಿಯು ದೇಶಾಟನದಿಂದಲೂ, ಪಂಡಿತಭಾಷಣ ದಿಂದಲೂ ಅಲ್ಲದೆ, ಬೇರೆ ಯಾವುದರಿಂದಲೂ ಲಭ್ಯವಾಗುವುದಿಲ್ಲ. ಇವರಿಗೆ ಈ ಎರಡೂ ಲಭ್ಯವಾದವು, ಇದರಿಂದಲೇ ಫಿನಿಷಿರ್ಯರ ಇತರ ಎಲ್ಲಾ ಜನಗಳಿಗಿಂತಲೂ ಮುಂದಾಳುಗಳಾಗಿರುವರು.” - ಈ ರೀತಿಯಲ್ಲಿ ನಾರ್‌ಬಲ್‌'ನು ಹೇಳಿದನು. ಇದನ್ನು ಕೇಳಿ, ನನಗೆ ಪರ ಮಾನಂದವಾಯಿತು, ನನ್ನ ತಂದೆಯು ಸಮಸ್ತ ದೇಶಗಳನ್ನೂ ನೋಡುವು ದಕ್ಕೆ ಹೊರಡುವ ಸಂಭವ ಉಂಟಾದರೂ , ಅವನನ್ನು ಹುಡಕೊಂಡು ಹೊರ ಡುವ ಸಂಭವವು ನನಗೆ ಲಭ್ಯವಾದದ್ದೂ, ಈ ದೇಶಾಟನದಲ್ಲಿ ವಿಸತ್ಪರಂಪರೆ ಗಳು ಬಂದದ್ದೂ, ಅವುಗಳನ್ನೆಲ್ಲಾ ಜಯಿಸುವ ಶಕ್ತಿಯು ಲಭ್ಯವಾದದ್ದೂ , ಇವೆಲ್ಲಾ ನನ್ನ ಕ್ಷೇಮಾರ್ಧವಾಗಿ ಆಗಿರುವುವೆಂಬ ಭಾವನೆಯು ನನಗೆ ಉಂಟಾ ಯಿತು, ಆಗ ನಾರ್‌ಬಲ್‌ನನ್ನು ಕುರಿತು ನಾನು ಹೇಳಿದ್ದೇನೆಂದರೆ :- “ ಎಲೈ ನಾರ್‌ಬಲ್‌ನೇ-ಟೈರ್ ಪಟ್ಟಣವು ಹೇಗೆ : ೦ಪದಭಿವೃದ್ಧಿಗೆ ಮಾತೃಸ್ಥಾನವಾಗಿರುವುದೋ ಹಾಗೆಯೇ ಇಥಾಕಾ ದ್ವೀಪವೂ ಆಗುವಂತೆ ಮಾಡ ಬೇಕೆಂದು ನನಗೆ ಬಹಳ ಕುತೂಹಲ ಉಂಟಾಗಿದೆ, ಇದಕ್ಕೆ ಏನು ಮಾಡ ಬೇಕು ? ನೀನು ಅನೇಕ ದೇಶಗಳನ್ನು ನೋಡಿದ್ದೀಯೆ, ಈ ವಿಷಯದಲ್ಲಿ ಫಿನಿ ಏರ್ಯರು ಮಾಡಿದ ಕ್ರಷಿಗಳೆಲ್ಲಾ ನಿನಗೆ ಚನ್ನಾಗಿ ತಿಳಿದು ಇದೆ. ಈ ವಿಷಯ ದಲ್ಲಿ ನಿನ್ನ ಅಭಿಪ್ರಾಯವನ್ನು ಹೇಳು ?” ಎಂದು ಕೇಳಿದೆನು. ಅದಕ್ಕೆ ನಾರ್‌ಬ ಆನು ಹೇಳಿದ್ದೇನೆಂದರೆ :