ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( ಇದು ಕಷ್ಟವಲ್ಲ, ದೇಶಾಟನವನ್ನು ಮಾಡು, ಯಾವ ಯಾವ ದೇಶ ಗಳಲ್ಲಿ ಸಂಪದಭಿವೃದ್ಧಿಯ ಕೆಲಸಗಳು ಹೇಗೆ ನಡೆಯುತ್ತವೆಯೋ ಅದನ್ನು ಖುದ್ದಾಗಿ ನೋಡು, ಯಾವ ಯಾವ ನವರಭಿವೃದ್ಧಿಯ ಕೆಲಸಗಳಲ್ಲಿ ಯಾವ್ಯಾರು ನಿಪುಣರೋ ಅದನ್ನು ಗೊತ್ತು ಮಾಡಿಕೊ, ಅವರನ್ನು ಚತುರೋಪಾಯಗಳಿಂದ ಲೂ ಸ್ವಾಧೀನಪಡಿಸಿಕೊ, ಅವರಿಗೆ ಪ್ರೋತ್ಸಾಹವನ್ನು ಕೊಟ್ಟು, ಇಥಾಕಾ ದ್ವೀಪಕ್ಕೆ ಬರಮಾಡಿಕೊ, ಅವರು ತಿದುಕೊಂಡಿರುವ ವಿದ್ಯೆಗಳನ್ನು ನಿನ್ನ ಪ್ರಜೆಗಳಿಗೆ ಮನಃ ಪೂರ್ವಕವಾಗಿ ಕಲಿಸುವಂತೆ ಮಾಡು, ಈ ಪ್ರಯತ್ನಗಳನ್ನು ಮಾಡುವುದರಲ್ಲಿ, ಅತಿ ಆಸೆಯಿಂದ ಲೋಭಿಯಾಗಬೇಡ, ತಮ್ಮ ದೇಶವನ್ನು ಬಿಟ್ಟು, ನಿನ್ನ ದೇಶಕ್ಕೆ ಬಂದು, ನಿನ್ನ ಹೆಗಳಿಗೆ ಸಂಪದಭಿವೃದ್ಧಿಯ ಕೆಲಸ ಗಳಲ್ಲಿ ಮಾರ್ಗದರ್ಶನವನ್ನು ಮಾಡಿದ್ದ ಕ್ಕೋಸ್ಕರ ಅವರಿಗೆ ಉದಾರವಾದ ಪ್ರತಿ ಫಲ ಉಂಟಾಗುವಂತೆ ಮಾಡು, ಹಾಗೆ ನೀನು ಮಾಡಿದೆಯೆಂಬ ಸಮಾಚಾರವು ಕ್ರಮಕ್ರಮವಾಗಿ ೧ಲ್ಲಾ ದೇಶಗಳಿಗೂ ಹರಡುತ್ತದೆ. ಕುಶಲ ವಿದ್ಯೆಗಳಲ್ಲಿ ನಿಪು ಣರಾದವರು ಅಪ್ರಾರ್ಥಿತವಾಗಿಯೆ " ನಿನ್ನಲ್ಲಿ ಬರುವಂತಾಗುತ್ತದೆ, ಅವರಿಗೆ ಪ್ರೋತ್ಸಾಹವನ್ನು ಕೊಟ್ಟ ಹಾಗೆಲ್ಲಾ ಸತ್ಯತೆ: ಮು: ವಾಗಿ ಕೈಗಾರಿಕೆಗಳೂ ಮತ್ತು ವ್ಯಾಪಾರವೂ ಹೆಚ್ಚು ವುವು, ಪರದೇಶೀಯರ ವಿಷಯದಲ್ಲಿಯೂ, ಸ್ವಜನಗಳ ವಿಷಯದಲ್ಲಿಯೂ ನೀನು ಹೇಗೆ ನಡೆದುಕೊಳ್ಳ ಬೇಕೋ ಅದನ್ನು ತಿಳಿದುಕೊಳ್ಳುವುದು ಆವಶ್ಯಕ, ಲೋಕವ್ಯವಹಾರ ಜ್ಞಾನಲ್ಲದವರು ಫರದಾ ಹೆಂಗಸರಂತೆ ಯಾರಿಗೂ ಭೇಟಿಯನ್ನು ಕೊಡುವುದಿಲ್ಲ, ಮೇಟಿಯನ್ನು ಕೊಟ್ಟರೆ ಅವರು ನಾನಾವಿಧವಾದ ಯಾಚನೆಗಳನ್ನು ಮಾಡುವುದಾಗಿಯೂ, ಅವರ ಇಷ್ಟಾರ್ಧವನ್ನು ನೆರವೇರಿಸುವುದು ಕಷ್ಟ ಎಂಬವಾಗಿಯ, ಯ .ತಕರಿಗೆ ಇಲ್ಲ ವೆಂದು ಹೇಳುವುದು ಇನ್ನೂ ಕಷ್ಟವೆಂಬದಾಗಿಯೂ ತಿಳಿದುಕೊಳ ವುದು ಶುದ್ಧ ತಪ್ಪ, ಪ್ರಭುಗಳಾದವರು ಎಲ್ಲರನ್ನೂ ನೋಡಬೇಕು, ಅಪ್ಪ, , ಹೇಳುವ ಮಾತುಗಳನ್ನು ಕೇಳಬೇಕು. ಅವರ ಪ್ರಾರ್ಥನೆಗಳನ: ೮ ಸಬೇಕು, ನ್ಯಾ ಯವಾದ ಪ್ರಾರ್ಥನೆಗಳು ನಡೆಸಲ್ಪಡಬೇಕು, ಅನ್ಯಾಯವಾದ ಪ್ರಾರ್ಧನೆಗಳು ನಡೆಸಲ್ಪಡಕೂಡದು, ಮನಸ್ಸಿಗೆ ವೃಧೆಯಾಗದಂತೆ ಅನಾ ಯವಾದ ಪ್ರ್ರಾಥನೆ ಗಳು ತಿರಸ್ಕರಿಸಲ್ಪಡಬೇಕಾಗುತ್ತದೆ. ಯಾಚಿಸಿದವರ ಮನಸ್ಸು ನೋಯದಂತ, ತನಗೂ ವಿವಾದವಾಗದಂತೆ ಇಲ್ಲವೆಂದು ಹೇಳುವ ರೀತಿಯು ಇರುವುದು, ಪ್ರಭುತ್ವ ಮಾಡತಕ್ಕವರು ಈ ರೀತಿಯನ್ನು ಚನ್ನಾಗಿ ತಿಳಿದುಕೊಳ್ಳ ಬೇಕು, ಇಲ್ಲ ವೆಂದು ಹೇಳುವುದಕ್ಕೆ ಮುಂಚೆ, ಅದಕ್ಕೆ ಕಾರಣವನ್ನು ತಪಶೀಲು ವಾರಾಗಿ ತಿಳಿ ಸಿದರೆ, ಪ್ರಾರ್ಥಿಸಿದವರು ತಪ್ತರಾಗಿ ಹೊರಟು ಹೊಗುವರು, ಈ ದೇಶವನ್ನು