ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅವನು ಸೈಪ್ರಸ್ ದ್ವೀಪನಿವಾಸಿಯಲ್ಲವೆಂದು ವರ್ತಮಾನವಿರುವುದಾಗಿಯೂ, ಪರ ದೇಶೀಯನೆಂದು ಗೊತ್ತಾಗಿರುವುದೆಂಬದಾಗಿಯೂ ಪಿಗ್ಮೇಲಿಯನ್ನನಿಗೆ ರಿಪೋ ರ್ಚಾಗಿರುವುದು, ಆ ಮನುಷ್ಯನನ್ನು ದಸ್ತಗಿರಿ ಮಾಡಬೇಕು, ಅವನು ಯಾವ ದೇಶದವನೋ ಅದನ್ನು ಪತ್ತೆ ಮಾಡಬೇಕು, ಹಾಗೆ ಇಲ್ಲದಿದ್ದರೆ ನಿನಗೆ ಮರಣ ದಂಡನೆಯು ಆಗುವುದು, ಈ ರೀತಿಯಲ್ಲಿ ನಾರ್‌ಬಲ್ ನಿಗೆ ಅವನು ಹೇಳಿದಾಗ, ನಾನು ಸ್ವಲ್ಪ ದೂರ ದಲ್ಲಿ ಒಂದು ಫಿನೀಮಿರ್ಯ ಹಡಗನ್ನು ಪರೀಕ್ಷಿಸುತ್ತಿದ್ದೆನು. ಅದು ಬಹಳ ಲಕ್ಷಣವಾದ ಹಡಗಾಗಿತ್ತು, ಆ ಹಡಗನ್ನು ಕಟ್ಟಿದವನೊಡನೆ ನಾನು ಮಾತ ನಾಡುತ್ತಿದ್ದೆನು, ಈ ಅಧಿಕಾರಿಯು ಆಡಿದ ಮಾತನ್ನು ಕೇಳಿ, ನಾರ್‌ಬಲ್ನು ಭಯಭ್ರಾಂತನಾಗಿ, ಈ ಮನುಷ್ಯನು ಸೈಪ್ರಸ್ ದ್ವೀಪದ ನಿವಾಸಿ, ಅವನನ್ನು ತಕ್ಷಣದಲ್ಲಯೇ ಪತ್ತೆ ಮಾಡುವೆನು ಎಂದು ಹೇಳಿ, ಅವನನ್ನು ಕಳುಹಿಸಿ ಕೊಟ್ಟನು, ಅನಂತರ ನನ್ನ ಬಳಿಗೆ ಬಂದು ನಡೆದ ವಿದ್ಯಮಾನಗಳನ್ನು ತಿಳಿಸಿ ಹೇಳಿದ್ದೇನೆಂದರೆ :-

  • ನಮಗೇನೋ ವಿಪತ್ತು ಬರುವುದೆಂದು ನನಗೆ ಭಯವಾಗುತ್ತಿತ್ತು. ವಿಪತ್ತು ಬಂದಿತು. ನಾವಿಬ್ಬರೂ ಕೆಟ್ಟೆವು. ನೀನು ಸೈಪ್ರಸ್ ದ್ವೀಪ ನಿವಾಸಿ ಯಲ್ಲವೆಂದು ಪಿಗ್ಮೇಲಿಯನ್ನನು ತಿಳಿದುಕೊಂಡಿದ್ದಾನೆ. ನಿನ್ನನ್ನು ದಸ್ತಗಿರಿ ಮಾಡಿ ಕರೆದುಕೊಂಡು ಬರದಿದ್ದರೆ, ನನಗೆ ಮರಣದಂಡನೆಯನ್ನು ಮಾಡುವುದಾ ಗಿಯೂ ಹೇಳಿ ಕಳುಹಿಸಿ ಇದ್ದಾನೆ. ಈಗ ಮಾಡತಕ್ಕದ್ದೇನು ? ದೇವರ ಸಹಾ ಯವಿಲ್ಲದಿದ್ದರೆ, ನಾವಿಬ್ಬರೂ ನಾಶವಾಗುವುದು ಸಿದ್ದವು, ಪಿಗ್ಮೇಲಿಯನ್ನನ ಬಳಿಗೆ ನಿನ್ನನ್ನು ಕರೆದುಕೊಂಡು ಹೋಗಬೇಕು. ನೀನು ಸೈಪ್ರಸ್ ದ್ವೀಪ ನಿವಾಸಿಯೆಂದು ಪ್ರಮಾಣಪೂರ್ವಕವಾಗಿ ಹೇಳಿದರೆ, ಅದನ್ನು ಅವನು ನಂಬು ವಂತೆ ನಾನು ಮಾಡುವೆನು, ನಿಮ್ಮ ತಂದೆಯನ್ನು ನಾನು ಬಲ್ಲೆನೆಂದು ಹೇಳು ವೆನು, ನಮ್ಮ ಮಾತುಗಳನ್ನು ನಂಬಿ, ಸೈಪ್ರಸ್ ದ್ವೀಪಕ್ಕೆ ಹೋಗುವುದಕ್ಕೆ ಪಿಗ್ಮೇಲಿಯನ್ನನು ನಿನಗೆ ಆಜ್ಞೆಯನ್ನು ಕೊಡುವನು, ವಿಪತ್ತು ಬಂದ ಕಾಲ ದಲ್ಲಿ ಪ್ರಾಣವನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಸುಳ್ಳನ್ನು ಹೇಳುವುದು ಪಾತಕ ನಲ್ಲ.” ಹೀಗೆ ನಾರ್‌ಬಲ್‌ನು ಹೇಳಲು, ಅದಕ್ಕೆ ನಾನು ಹೇಳಿದ್ದೆ ನೆಂದರೆ :-

- “ ನೀನು ನಿರಪರಾಧಿ, ನಿನಗೆ ಶಿಕ್ಷೆಯಾಗುವುದು ನನಗೆ ಸಮ್ಮತವಲ್ಲ ನಿನ್ನ ಪ್ರಾಣವನ್ನು ಉಳಿಸಿಕೊಳ್ಳುವುದಕ್ಕೆ ನೀನು ಪ್ರಯತ್ನ ಮಾಡು. ಬಂದ ಎಸತ್ತನ್ನು ಅನುಭವಿಸುವುದಕ್ಕೆ ನಾನು ಸಿದ್ಧನಾಗಿರುವೆನು, ನಿರ್ಭಯವಾಗಿ ನಾನು ಸಾಯಬಲ್ಲೆನು, ನನ್ನಿಂದ ನಿನಗೆ ಯಾವ ಕಷ್ಟವೂ ಬರದಂತೆ ಮಾಡು