ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

99 ವೆನು. ಆದರೆ, ಆತ್ಮರಕ್ಷಣೆಗೋಸ್ಕರವೂ ಕೂಡ ನಾನು ಸುಳ್ಳು ಹೇಳತಕ್ಕನ ನಲ್ಲ. ನಾನು ಗ್ರೀಸ್ ದೇಶಸ್ಥನು, ಸೈಪ್ರಸ್ ದ್ವೀಪ ನಿವಾಸಿಯೆಂದು ನಾನು ಹೇಳಿದರೆ, ದೇವರು ಮೆಚ್ಚುವನೇ ? ಮನುಷ್ಯರು ಮೆಚ್ಚುವರೇ ? ಸುಳ್ಳು ಹೇಳಿ ಎಷ್ಟು ದಿವಸ ಬದುಕಬೇಕು ? ಹುಟ್ಟಿದವರು ಸತ್ತೇ ಸಾಯಬೇಕು, ಇದು ಎಂದಿಗಾದರೂ ತಪ್ಪುವುದೇ ? ನಾನು ಎಂದಿಗೂ ಅವ್ರತವನ್ನು ನುಡಿಯುವುದಿಲ್ಲ. ಸುಳ್ಳು ಹೇಳುವುದು ಮಹಾಪಾತಕವು, ಅದರಿಂದ ಇಹಪರಗಳೆರಡೂ ನಷ್ಟವಾ ಗುವುವು, ನಮ್ಮ ಸತ್ಯಕ್ಕೋಸ್ಕರ ನನ್ನನ್ನು ದೇವರು ರಕ್ಷಿಸಿದರೆ ರಕ್ಷಿಸಲಿ; ಹಾಗಿಲ್ಲದಿದ್ದರೆ, ದೇಹವನ್ನು ಬಿಡುವುಕ್ಕೆ ಸಿದ್ದವಾಗೋಣ. ಅನೇಕ ವಿಪತ್ನರಂ ಪರೆಗಳನ್ನು ಅನುಭವಿಸಿ, ನನಗೂ ಬೇಜಾರಾಗಿರುವುದು, ಅದರಿಂದ ವ್ಯಸನವಿ ಇದೆ, ಸಾಯುವದಕ್ಕೆ ಸಿದ್ಧನಾಗಿರುವೆನು, ಅನಿರ್ವಚನೀಯವಾದ ಕೃ ಸೆಯಿಂದ ನನಲ್ಲಿ ಪುತ್ರನಿರ್ವಿಶೇಷವಾದ ಪ್ರೀತಿಯನ್ನು ಇಟ್ಟಿರುವ ನಿನಗೆ ಈ ವಿಪತ್ತು ಬಂದಿ ತಲ್ಲಾ ಎಂದು ನಾನು ತುಂಬಾ ವಿಷಾದಿಸುತ್ತೇನೆ.” ಎಂದು ನಾನು ನಾರ್‌ಬಲ್ ನಿಗೆ ಹೇಳುತ್ತಿದ್ದಾಗ, ಒಬ್ಬ ಮನುಷ್ಯನು ಬಹಳ ವೇಗವಾಗಿ ನಮ್ಮ ಬಳಿಗೆ ಬಂದನು, ನಾರ್‌ಬಲ್‌ನೊಡನೆ ಇವನು ಏಕಾಂತವಾಗಿ ಮಾತನಾಡಿ ಹೊರಟು ಹೋದನು. ಇದರಿಂದ ಜಗದೀಶ್ವರನ ಮಹಿಮೆಯು ನನಗೆ ಚೆನ್ನಾಗಿ ಗೊತ್ತಾ ಯಿತು. ಧರ್ಮಿಷ್ಟರಿಗೆ ಉಂಟಾಗತಕ್ಕ ಭಯವು ಎಷ್ಟು ಹಠಾತ್ತಾಗಿರುವುದೋ ಅಷ್ಟು ಹಠಾತ್ತಾಗಿಯೇ ಅದರ ನಿವಾರಣೆಯೂ ಆಗುವುದು, ದೇವರಿಗೆ “ ಧಯ ಕೃದ್ಭಯನಾಶನಃ ” ಎಂಬದಾಗಿ ಹೇಳುವುದುಂಟು. ಅದಕ್ಕೆ ಈಗ ದೃಷ್ಟಾಂತ ಉಂಟಾಯಿತು. - ಪಿಗ್ಮೇಲಿಯನ್ನನಿಗೆ ಟೋಫಾ ಎಂಬ ಒಬ್ಬ ಪಟ್ಟ ಮಹಿಷಿಯು ಇದ್ದಳು. ಆಸ್ಟಾರ್ಬ್ ಎಂಬ ಒಬ್ಬ ರಖಾವುದಾರಳೂ ಇದಳು, ಈ ರಖಾವದಾರಳು ಬಹಳ ಸುಂದರಿಯಾಗಿಯೂ, ಬುದ್ಧಿಶಾಲಿನಿಯಾಗಿಯೂ ಇದ್ದಳು. ಇವಳ ನಡೆನುಡಿಗಳು ಅತ್ಯಂತ ರಮಣೀಯಗಳಾಗಿದ್ದವು. ಇವಳು ಬಹಳ ದುರಾತ್ರಳು. ತನ್ನ ದೌರಾತ್ಮವನ್ನು ಅನೇಕ ವಿಧವಾದ ಇಂದ್ರಜಾಲ ಮಹೇಂದ್ರಜಾಲ ವಿದ್ಯೆ ಗಳಿಂದ ಆಚ್ಛಾದಿಸಿ, ಹಸನ್ಮುಖಿಯಾಗಿರುವ ಶಕ್ತಿಯು ಇವಳಿಗೆ ಇದ್ದಿತು. ತನ್ನ ಸೌಂದಠ್ಯದಿಂದಲೂ, ತನ್ನ ಹಾವಭಾವಗಳಿಂದಲೂ, ತನ್ನ ಮನೋಹರವಾದ ಗಾನದಿಂದಲೂ ಪಿಗ್ಮೇಲಿರ್ಯನನ್ನು ತನಗೆ ದಾಸಾನುದಾಸನಾಗಿರುವಂತ ಇವಳು ಮಾಡಿಕೊಂಡಿದ್ದಳು, ಈ ಧೋರೆಗೂ, ಇವನ ಹೆಂಡತಿಗೂ ಇವಳು ಮನಸ್ತಾಪವನ್ನು ತಂದುಹಾಕಿದ್ದಳು, ಈ ಪಿಗ್ಮೇಲಿಯನ್ನನು ಮೋಹಪರವ ಶನಾಗಿ, ಅವಳು ಹೇಳುವ ಮಾತುಗಳನ್ನು ವೇದವಾಕ್ಕಿನಂತೆ ಗಣಿಸ್ತುದನು,