ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

100 ಹೀಗಿರುವಾಗೋ, ಟೈರ್ ಪಟ್ಟಣದಲ್ಲಿ ಮೆಲಾಂರ್ಕ ಎಂಬ ಒಬ್ಬ ಯುವಕನು ಇದ್ದನು. ಇವನು ಸೌಂದರದಲ್ಲಿ ಮನ್ಮಧನಿಗೆ ಸದೃಶನಾಗಿದ್ದನು. ಈ ಆಸ್ಟಾ ರ್ಬ್ ಎಂಬುವಳು ಅವನಲ್ಲಿ ಅನುರಕ್ತಳಾದಳು. ಅವನು ಇವಳಲ್ಲಿ ಉದಾಸೀನ ನಾದನು, ಈ ಆಸ್ಟಾರ್ಬ್ ಎಂಬುವಳು ತನ್ನ ಪ್ರಾರ್ಥನೆಗಳನ್ನು ನಿರಾಕರಿಸಿದ ನೆಂಬ ಕೋಪದಿಂದ ಅವನಿಗೆ ಶಿಕ್ಷೆಯನ್ನು ಮಾಡಬೇಕೆಂದು ಈಜಿಪ್ಟ್ ದೇಶದಿಂದ ನಾರ್‌ಬಲ್ ನೊಡನೆ ಟೈರ್‌ ಪಟ್ಟಣಕ್ಕೆ ಬಂದ ಪರಬೇತಿಯು ಮೆಲಾಂರ್ಕ ಎಂದು ಪಿn*ಮೇಲಿಯನ್ನ ನಿಗೆ ಹೇಳಿ, ಅವನಿಗೆ ನಂಬಿಕೆಯನ್ನು ಉಂಟುಮಾಡಿ, ಅವನನ್ನು ಕಾರಾಗೃಹಕ್ಕೆ ಹಾಕಿಸಿ, ತಾನು ಹೀಗೆ ಮಾಡಿರುವುದಾಗಿಯೂ, ' ನಿನ್ನ ಜೊತೆಯಲ್ಲಿ ಬಂದ ಪರದೇಶೀಯನನ್ನು ಸೈಪ್ರಸ್ ದ್ವೀಪಕ್ಕೆ ಕಳುಹಿಸಿ ಬಿಡು - ಇದನ್ನು ಏಕಾಂತ ವಾಗಿ ಇಟ್ಟುಕೊ ಎಂಬದಾಗಿಯೂ ನಾರ್‌ಬಲ್‌ನಿಗೆ ಹೆ~ಳಿ ಕಳುಹಿಸಿದಳು. ಈ ವರ್ತಮಾನವನ್ನು ಕೇಳಿದ ಕೂಡಲೆ, ನಾರೇಬಲ್ಸಿಗೆ ಪರಮ ಸಂತೋ ಷವಾಯಿತು, ಅದೆ ರೀತಿಯಲ್ಲಿ ಮಾಡುತ್ತೇನೆಂದು ಹೇಳಿ, ಆಸ್ಥಾ ರ್ಬಳ ದೂತ ರನ್ನು ವಾಪಸು ಕಳುಹಿಸಿ, ಈ ವಿದ್ಯಮಾನಗಳನ್ನು ನನಗೆ ತಿಳಿಸಿದನು. ಭಯಂಕ ರವಾದ ವಿಪತ್ತು ಬಂದದ್ದನ್ನೂ, ಅದು ಹಾಗೆಯೇ ಮಾಯವಾದದ್ದನ್ನೂ ನೋಡಿ, ನನಗೆ ತುಂಬಾ ಆಶ್ಚರವಾಯಿತು, ನಿರಪರಾಧಿಗಳನ್ನು ರಕ್ಷಿಸದೆ ಜಗದೀಶ್ವರನು ಎಂದಿಗೂ ಬಿಡುವುದಿಲ್ಲವೆಂಬ ನಂಬಿಕೆಯು ನನಗೆ ಉಂಟಾಯಿತು, ಆದರೆ, ಪಿಗ್ ಮೇಲಿಯನ್ನನ ಅವಸ್ಥೆಯನ್ನು ಕೇಳಿ, ನನಗೆ ತುಂಬಾ ವಿಷಾದವಾಯಿತು, ಮನು ವ್ಯನಿಗೆ ದುರಾಸೆಯು ಅನೇಕ ಅನರ್ಧಗಳನ್ನು ತರುವುದು, ಈ ಅನರ್ಧಗಳ ಜೊ ತಗೆ ಜನಗಳು ದುರ್ವಿಷಯಗಳಿಗೆ ಮನಸ್ಸನ್ನು ಕೊಟ್ಟರೆ, ಅದರಿಂದ ವಿಸತ್ವ -೦ಪ ರೆಗಳು ಬರುವುವು, ಧರ್ಮಕ್ಕೆ ಧರ್ಮವೇ ಫಲವೆಂದೂ, ಅಧರ್ಮಕ್ಕೆ ಅಧರ್ಮ ವೇ ಶಿಕ್ಷೆಯೆಂದೂ ಹೇಳುವುದುಂಟು, ಪಿಗ್ಮೇಲಿಯನ್ನನು ಪಟ್ಟಿ ಮಹಿಷಿ ಯನ್ನು ಬಿಟ್ಟು ದುರಾತ್ಮಳಾದ ಆಸ್ಟಾರ್ಬಳ ವಂಚನೆಗೆ ಮನಃ ಪೂರ್ವಕವಾಗಿ ಗುರಿ ಯಾದನು. ಅದರ ಫಲವನ್ನು ಅನುಭವಿಸದೆ ಇರುವುದಕ್ಕೆ ಆಗುವುದೇ ? ಪತಿವ್ರತೆ ಯರ ಕಣ್ಣೀರು ಅಪ್ರತಿಹತವಾದ ದಾವಾಗ್ನಿಯಂತೆ ಪಾಪಿಷ್ಠರನ್ನು ಸುಡದೆ ಹೋ ಗುವುದಿಲ್ಲ, ಪ್ರಭುಗಳಲ್ಲಿ ಪ್ರಸಿದ್ಧನಾದ ಈ ಪಿಗ್ಮೇಲಿಯನ್ನನು ರಾವ್ದಾರಳ ದಾಸನಾಗಿ ಪರಿಣಮಿಸಿದನು. ಇದಕ್ಕಿಂತಲೂ ಹೇಳುವಾದ ಸ್ಥಿತಿ ಯಾವು ದುಂಟು ? ಇದಕ್ಕಿಂತಲೂ ದೊಡ್ಡ ಶಿಕ್ಷೆಯು ಬೇರೆ ಇರುವುದೇ ?" ಹೀಗೆ ಪರಾಲೋಚಿಸುತ್ತಲಿರುವಾಗ, ಟೈರ್ ಪಟ್ಟಣದಿಂದ ಸೈಪ್ರಸ್ ತೀರ ದವರೆಗೆ ಅನುಕೂಲವಾದ ಗಾಳಿಯು ಬೀಸುವುದಕ್ಕೆ ಉಪಕ್ರಮವಾಯಿತು. ಅದನ್ನು ನೋಡಿ, ನಾರ್‌ಬಲ್‌ನು ಹೇಳಿದ್ದೇನೆಂದರೆ :-