ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

金參条參条參条參条条參条染条条餘 ಟೆಲಿಮಾಕಪ್ಪನ ಚರಿತೆ •••0-- ಗ್ರೀಸ್ ದೇಶದ ಬಳಿಯಲ್ಲಿ ಅಯೋನಿರ್ಯ ದ್ವೀಪಗಳೆಂದು ೭ ದ್ವೀಪಗಳಿ ರುವುವು, ಅವುಗಳಲ್ಲಿ ಇಧಾಕಾ ಎಂಬ ದ್ವೀಪವು ಒಂದಾಗಿರುವುದು, ಈ ದ್ವೀಪ ದಲ್ಲಿ ಯೂಲಿಸೆಸ' ಎಂಬ ಒಬ್ಬ ಪ್ರಭುವು ಇದ್ದನು. ಅವನು ಬುದ್ದಿಯಲ್ಲಿ ಬೃಹ ಸ್ಪತಿಗೆ ಸಮಾನನಾಗಿದ್ದನು. ಲೋಕದಲ್ಲಿ ಎಲ್ಲಾ ಬಲಗಳಿಗಿಂತಲೂ ಬುದ್ದಿ ಬ ಅವು ದೊಡ್ಡದೆಂಬುದಕ್ಕೆ ಈತನೇ ದೃಷ್ಟಾಂತವಾಗಿದ್ದನು. ಟ್ರಾಯ ದೇಶದ ಯುದ್ದದಲ್ಲಿ ಇವನ ಬುದ್ದಿ ಬಲದಿಂದ ದುಷ್ಟನಿಗ್ರಹವು ಸಂಪೂರ್ಣವಾಗಿ ಮಾಡಲ್ಪ ಟ್ವಿತು. ಟ್ರಾಯ ದೇಶವು ನಾಶವಾದ ಮೇಲೆ, ಯಸಸ್ಸನು ಈ ಪ್ರಪಂ ಚದ ಎಲ್ಲಾ ಭಾಗಗಳನ್ನೂ ನುಚಾರ ಮಾಡಿಕೊಂಡು ಬರಬೇಕೆಂದು ಪ್ರಯಾಣ ಮಾಡಿದನು. ಯೂಲಸೆಸ್ಸನ ಹೆಂಡತಿಯ ಲೋಕೋತ್ತರವಾದ ರೂಪಲಾವ ಫ್ಲ್ಯಗಳುಳ್ಳವಳಾಗಿದ್ದಳು, ಅವನು ದೇಶಸಂಚಾರಕ್ಕೆ ಹೋಗಿರುವುದನ್ನು ತಿಳಿದು, ಕೆಲವು ಜನ ಪ್ರಭುಗಳು ಅವಳ ಪಾತಿವ್ರತಭಂಗವನ್ನು ಮಾಡಬೇಕೆಂದು ಇಧಾಕಾ ಪಟ್ಟಣಕ್ಕೆ ಹೋದರು. ಬಾಲನಾಗಿದ್ದ ತನ್ನ ಮಗನಾದ ಟೆಲಿಮಾಕಸ್ಸನನ್ನು ಕುರಿ ತು, ಆಕೆಯು ಹೇಳಿದ್ದೆನೆಂದರ- ನಮ್ಮ ಅತಿಥಿಗಳಾಗಿ ನಮ್ಮ ಅರಮನೆಯಲ್ಲಿರ ತಕ್ಕ ದುರಾತ್ಮರಿಂದ ನನ್ನ ಪಾತಿವ್ರತ್ಯಕ್ಕೆ ಭಂಗವು ಸನ್ನಿಹಿತವಾಗಿರುವುದು ನನ್ನ ಮಾನವನ್ನೂ ಮತ್ತು ಪ್ರಾಣವನ್ನೂ ಕಾಪಾಡುವ ಶಕ್ತಿಯು ಇರತಕ್ಕವರು ಇಲ್ಲಿ ಯಾರೂ ಇಲ್ಲ, ನಿಮ್ಮ ತಂದೆಯನ್ನು ಹುಡುಕಿ, ಒಂದು ವರ್ಷ ದೊಳಗಾಗಿ ನೀನು ಕರೆದುಕೊಂಡು ಬರಬೇಕು, ಅದುವರೆಗೂ ಈ ದುರಾತ್ಮರಿಗೆ ಅಧೀನ ಳಾಗದೆ, ಪ್ರಾಣಧಾರಣೆಯನ್ನು ಮಾಡಿಕೊಂಡಿರುವೆನು. ವರ್ಷದೊಳಗಾಗಿ ನಿಮ್ಮ ತಂದೆಯನ್ನು ಕರೆದುಕೊಂಡು ಬಂದು ಇವರನ್ನು ಸುಹರಿಸದಿದ್ದರೆ, ನಾನು ವಿಷವನ್ನು ತೆಗೆದುಕೊಂಡು, ಪ್ರಾಣವನ್ನು ಬಿಡುವೆನು.” ಹೀಗೆ ಹೇಳಿ ಪೂರಯಿಸುವುದರೊಳಗಾಗಿ ದೈವಯೋಗದಿಂದ ಸಕಲ ರಾಜ ತಂತ್ರ ವಿಶಾರದನಾದ ಮೆಂಟರನೆಂಬ ಮಹಾತ್ಮನು ಅಲ್ಲಿಗೆ ಬಂದನು. ಇಂದ್ರಿಯಸ ರವಶರಾಗಿ, ಟೆಲಿಮಾಕಸ್ಸನ ತಾಯಿಯ ಪಾತಿವ್ರತ್ಯವನ್ನು ಕೆಡಿಸಬೇಕೆಂದು ಬಂದಿ