ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

103 ರವು ಅದ್ರ ಶ್ರವಾಗುವುದು. ಆಗ ನಿನ್ನ ಚರಿತ್ರೆಯನ್ನು ಕೇಳುವುದಕ್ಕೆ ನಾವೆಲ್ಲರೂ ಸಿದ್ದರಾಗಿರುತ್ತೇವೆ, .ವೇಕಶಾಲಿಗಳಲ್ಲಿ ನಿನ್ನ ತಂದೆಯ ಅದ್ವಿತೀಯನೆಂದು ತಿಳಿದುಕೊಂಡಿದ್ದೆನು, ನೀನು ಅವನಿಗಿಂತ ಲೇಶವೂ ಕಡಮೆಯಲ್ಲವೆಂದು ಗೊತ್ತಾಗುತ್ತದೆ. ಪರಾಕ್ರಮದಲ್ಲಿ ನಿನ್ನ ತಂದೆಯನ್ನು ವಿಾರಿಸಿರುವೆ. ಹೆಕ್ಕರ ನನ್ನು ಜಯಿಸಿದ ಎಕಿಲೀಸನು ನಿನಗೆ ನನ್ನಲ್ಲ, ನರಕದಿಂದ ಹಿಂತಿರುಗಿದ ಥೆಸಿ ಯಸ್ಸನಿಗಿಂತಲೂ ನೀನು ಅಧಿಕನು, ಜಗತ್ತಿಗೆ ಕ್ಷೇತವನ್ನುಂಟುಮಾಡುತ್ತಿದ್ದ ಅನೇಕ ರಾಕ್ಷನರಿಂದ ಭೂಮಿಯನ್ನು ರಕ್ಷಿಸಿದ ಆಲ್‌ಸೈಡೀಸನೂ ಕೂಡ ಸಾಹ ಸದಲ್ಲಿಯೂ, ಸದ್ಗುಣಗಳಲ್ಲಿಯೂ ನಿನಗೆ ನನಾನನಲ್ಲವೆಂದು ನನಗೆ ತೋರುತ್ತದೆ. ಈ ರಾತ್ರಿಯೆಲ್ಲಾ ನಿನಗೆ ಒಂದು ನಿಮಿಷವಾಗಿ ಪರಿಣಮಿಸುವಂತೆ ಜಗದೀಶ್ವರನು ಅನುಗ್ರಹಿಸಲಿ, ನಿನ್ನ ಮನೋಹರವಾದ ಮಾತುಗಳನ್ನು ಕೇಳುವುದಕ್ಕೆ ನನ್ನ ಕಿವಿಗಳು ಅತ್ಯಂತ ಆಸಕ್ತಿಯುಳ್ಳವುಗಳಾಗಿರುವುವು. ನಿನ್ನ ರೂಪಲಾವಣ್ಯಗ ಳನ್ನು ನೋಡಿ, ಸಂತೋಷಪಡುವುದಕ್ಕೆ ನನ್ನ ಕಣ್ಣುಗಳೂ ಕೂಡ ವಿಶೇಷ ಆಸ ಕಿಯುಳ್ಳವುಗಳಾಗಿರುವುವು. ನೀನು ಹೇಳಿದ ಮನೋಹರವಾದ ಕಥೆಗಳನ್ನು ಎಷ್ಟು ಕೇಳಿದರೂ, ಪುನಃ ಪುನಃ ಕೇಳಬೇಕೆಂಬ ಆಸೆಯು ನನಗೆ ಉಂಟಾಗುತ್ತ ಇದೆ. ಆದರೆ, ಮುಂದಿನ ವೃ೦ತಾ೦ವನ್ನು ತಿಳಿಯಬೇಕೆಂಬ ಅಭಿಲಾಷೆಯು ಇನ್ನೂ ಹೆಚ್ಚಾಗಿರುವುದು, ಎಲೈ ಮನೋವೆರನಾದ ಟೆಲಿಮಾಕಸ್ಸನೇ, ದೇವರ ಪ್ರೀತಿಯು ನಿನ್ನಲ್ಲಿ ಅಪರಿಮಿತವಾಗಿರುವುದು, ಮೆಂಟರನು ನಿನಗೆ ಮೂರ್ತಿಮ ತಾದ ಜಗದೀಶ್ವರನ ಅನುಗ್ರಹವಾಗಿ ಪರಿಣಮಿಸಿರುವನು. ಅವನೊಡನೆ ಛೋ ?ಜನ ಸುಖವನ್ನು ಅನುಭವಿಸಿ, ವಿಶ್ರಾಂತಿಯನ್ನು ಹೊಂದು, ನಿದ್ದೆಯ ಅಧಿದೇವತೆಯು ನಿನ್ನಲ್ಲಿ ಪರಿರ್ಣಾವಾದ ಅನುಗ್ರಹವನ್ನು ಮಾಡಲಿ, ನಾನಾ ವಿಧವಾದ ಕ್ಷೇಶಗಳಿಂದ, ಸಾಹಸಕೃತ್ಯಗಳಿಂದ ನಿನಗೆ ಉಂಟಾದ ಬೇಚಾರು ಪರಿಹರಿಸಲ್ಪಡಲಿ, ಮನೋಹರವಾದ ಸ್ವಪ್ನಗಳು ನಿನಗೆ ಸ್ವರ್ಗಸು ಖವನ್ನು ಕೊಡ, ಸದಾ ಸುತೋಷಚಿತ್ತರಾದವರಿಗೆ ಮುಖಪರಂಪರೆಗಳು ಅಟ್ಟಾಂಟಿಕ್ ಸಾಗರದ ಮಾಡಿ ಕೊಲ್ಲಿಯಲ್ಲಿ ವನತಾಕಾರವಾಗಿ ಅಲೆಗಳು ಒಂದಾಗುತ್ತಲೂ ಒಂದು ಬರುವಂತೆ ಒರುವುವು. ೩೦ಧಾ ನ.ಪರಂಪರೆಗಳು ನಿನಗೆ ಲಭ್ಯವಾಗು, ಮಲಿನಚಿತ್ತರಾದವರಿಗೆ ಸ್ವಪ್ನದಲ್ಲಿಯ ಸುಖವು ದುರ್ಲ ಭವಾಗುವುದು, ವಿಪತ್ಕಾಲದಲ್ಲಿ ಧೈರವು ನಿನಗೆ ನಿಸರ್ಗವಾಗಿ ಬರುತ್ತಲಿರು ವುದು. ಆದುದರಿಂದ ನಿನಗೆ ಕೇಶದ ಸಂಪರ್ಕವೇ ಇರುವುದಿಲ್ಲ ಇದುವರೆಗೂ ನಿನಗೆ ಬಂದ ಕ್ಷೇಶಗಳಲ್ಲಾ ಪ್ರಳಯ ಕಾಲದ ನೂರನ ಎದುರಿಗೆ ನೀರಿನ ಗಡ್ಡೆ ಗಳು ಕರಗಿಹೋಗುವಂತೆ ಕರಗಿಹೋಗಿದೆ ನೀನೇ ಕೃತಾರ್ಧನು, ದೇವರು ನಿನಗೆ ಮಂಗಳವನ್ನು ಮಾಡಲು.