ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

105 ಅದು ಮುಂದೆ ನಡೆಯುವಂತೆ ತೋರುವುದಿಲ್ಲ, ನಿನ್ನ ವಾಗೈಖರಿಯಿಂದ ಅವ ಇನ್ನು ನೀನು ಮರಳು ಮಾಡಿರುವಿ, ಅವಳ ಇಂದ್ರಜಾಲ ಮಹೇಂದ್ರಜಾಲ ವಿದ್ಯೆಗಳೆಂಬ ಪಾಶದಿಂದ ನೀನು ತಪ್ಪಿಸಿಕೊಳ್ಳುವುದು ಅಸಾಧ್ಯ, ನಿಮ್ಮ ತಂದೆ ಯ ವೃತ್ತಾಂತವನ್ನು ನಿನಗೆ ಹೇಳುವುದಾಗಿ ಅವಳು ಸೂಚಿಸಿರುವಳು. ನಿನ್ನನ್ನು ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ಇವಳಿಗೆ ಅದೇ ಸಮ್ಮೋಹನಾಸ್ತ್ರವಾಗುವುದು. ಸೈರಿಣಿಯರ ಮಾತುಗಳಲ್ಲಿ ಅಮೃತವು ಧಾರಾಳವಾಗಿ ಸುರಿಯುವುದು, ಸ್ತುತಿ ಪಾಠಕರು ಮನೋಹರವಾಗಿ ಸ್ತೋತ್ರಮಾಡುವುದನ್ನು ಇವರಿಂದ ಕಲಿಯ ಬೇಕು, ಇಂಥಾ ಅವಸ್ಥೆಗೆ ನೀನು ಬಂದದ್ದನ್ನು ನೋಡಿದರೆ, ನನಗೆ ತುಂಬಾ ವಿಷಾದವಾಗುತ್ತದೆ, ಸ್ತ್ರೀಯರಿಂದ ಹೊಗಳಿಸಿಕೊಳ್ಳಬೇಕೆಂಬ ಈ ಆಸೆಯು ನಿನಗೆ ಎಲ್ಲಿಂದ ಬಂತು ? ನಿನ್ನ ತಾಯಿಯ ಎದುರಿಗೆ ನೀನು ಮಾಡಿದ ಪ್ರತಿಜ್ಞೆ ಯು ಸ್ಮರಣೆಯಲ್ಲಿರುವುದೇ ? ಆಕೆಗೆ ಬಂದಿರತಕ್ಕ ವಿಪತ್ತನ್ನು ತಪ್ಪಿಸುವುದು ನಿನಗೆ ಮುಖ್ಯ ಕರ್ತವ್ಯವಲ್ಲವೇ ? ಈ ಹೆಂಗಸಿನ ಪಾಶಕ್ಕೆ ಬಿದ್ದು, ನಿನ್ನ ಕರ್ತವ್ಯವನ್ನು ಮರೆಯುವ ಸ್ಥಿತಿಗೆ ನೀನು ಬರಬಹುದೆ ? ಹಾಗೆ ಬಂದರೆ, ಯೂಲಿಸಿಸ್ಸನ ಮಗ ನೆನ್ನಿಸಿಕೊಳ್ಳುವುದಕ್ಕೆ ನೀನು ಅರ್ಹನಾಗಿರುವೆಯಾ ? ಈ ಹೆಂಗಸಿನ ಮರುಳಿಗೆ ನೀನು ವಶನಾದರೆ, ತಿರಗ್ತಂತುಗಳಿಗೂ, ನಿನಗೂ ವೈಲಕ್ಷಣ್ಯವೇನು ಉಂಟಾ ಯಿತು ? ನೀನು ವಿಷಯಾಸಕ್ತಿ ಎಂಬ ಪರ್ವತದ ಶಿಖರಕ್ಕೆ ಹತ್ತಿರುವಿ. ಅಲ್ಲಿಂದ ಅಗಾಧವಾದ ಪಾತಾಳಕ್ಕೆ ನಿನಗೆ ಸತನವು ಸಿದ್ದವಾಗಿರುವುದು, ಈ ಕಿನ್ನರಿಯು ಸಕಲ ವಿಷಯಗಳಲ್ಲಿಯೂ ನಿನ್ನ ತಂದೆಗಿಂತ ನೀನು ಹೆಣ್ಣೆಂದು ನಿನ್ನನ್ನು ಸ್ತುತಿಸಿ ದಳು. ಇದನ್ನು ಕೇಳಿ ನಿನಗೆ ಚತುರ್ಭುಜವಾಯಿತು. ಇವಳ ಪಾಶಕ್ಕೆ ನಿನ್ನ ತಂದೆಯು ಬೀಳಲಿಲ್ಲ, ನೀನು ಬೀಳುವ ಸ್ಥಿತಿಯಲ್ಲಿರುವಿ, ಜಿತೇಂದ್ರಿಯನಾದ ನಿನ್ನ ತಂದೆಯೆಲ್ಲಿ ? ಮೋಹಪರವಶನಾದ ನೀನೆಲ್ಲಿ ? ಇಂಥಾ ಮೋಹಪರವಶತೆಯನ್ನು ನೀನು ಹೊಂದಿದ್ದ ಕ್ಕಾಗಿ ನಾನು ತುಂಬಾ ವಿಷಾದಿಸುತ್ತೇನೆ.” ಈ ರೀತಿಯಲ್ಲಿ ಹೇಳಿದ ಮೆಂಟರನ ಮಾತುಗಳು ಟೆಲಮಾಕಸ್ಸನಿಗೆ ವಜ್ರಾ ಯು ಧದ ಏಟಿನಂತೆ ಪರಿಣಮಿಸಿದವು. “ ನನ್ನ ದುರದೃಷ್ಟದ ವರ್ತಮಾನಗಳನ್ನು ಕೇಳಬೇಕೆಂದು ಈಕೆಯು ಪ್ರಾರ್ಥಿಸಿದ್ದರಿಂದ, “ ನಾನು ನನ್ನ ವೃತ್ತಾಂತವನ್ನು ಹೇಳಿದೆನು. ಇದರಲ್ಲಿ ತಪ್ಪೇನು ? " ಎಂದು ಟೆಲಿಮಾಕಸ್ಸನು ಮೆಂಟರನನ್ನು ಕೇಳಿದನು. ಅದಕ್ಕೆ ಮೆಂಟರನು ಹೇಳಿದ್ದೇನೆಂದರೆ :- “ ನಿನ್ನ ವೃತ್ತಾಂತವನ್ನು ಹೇಳುವುದರಲ್ಲಿ ಬಾಧಕವೇನೂ ಇರಲಿಲ್ಲ. ನಿನ್ನಲ್ಲಿ ಅನುತಾಪ ಉಂಟಾಗುವಂತೆ ನಿನ್ನ ವಿದ್ಯಮಾನಗಳನ್ನು ನೀನು ಹೇಳಬೇಕಾಗಿತ್ತು, 14