ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

107 ವುವೆಂಬದಾಗಿಯೂ ತೋರುವಂತೆ ನಿನ್ನ ಕಥೆಯನ್ನು ಹೇಳು, ಅವಳಿಗೆ ನಿನ್ನಲ್ಲಿ ಹುಟ್ಟಿರತಕ್ಕ ವ್ಯಾಮೊಹವು ಕನಿರವಾಗಿ ಪರಿಣಮಿಸುವಂತೆ ಮಾಡು, ಹಾಗೆ ಮಾಡದಿದ್ದರೆ, ಅವಳ ಮೋಹವು ಹೆಚ್ಚುವುದು, ಅವಳ ಬಲೆಗೆ ಬಿದ್ದು, ಪತಂಗದ ಹುಳುವು ಬೆಂಕಿಯ ಜ್ವಾಲೆಯಲ್ಲಿ ಬಿದ್ದು ನಾಶವಾಗುವಂತೆ ನೀನೂ ನಾಶವಾಗು ಶ್ರೀಯೆ. ಪರಿಣಾಮ ಫಲವನ್ನು ಪಾಲೋಚಿಸಿ, ಎಚ್ಚರಿಕೆಯಿಂದ ನಡೆ ದುಕೊ.” ಈ ರೀತಿಯಲ್ಲಿ ಮೆಂಟರನು ಹಿತೋಪದೇಶವನ್ನು ಮಾಡಿದ ಮೇಲೆ, ಹಾಗೆ ಯೇ ಸರಿಯೆಂದು ಟೆಲಿಮಾಕಸ್ಸನು ಒಪ್ಪಿದನು. ಅನಂತರ ಇಬ್ಬರೂ ಬೆಳಗಾ ಗುವವರೆಗೂ ವಿಶ್ರಾಂತಿಸುಖವನ್ನು ಅನುವಿಭಸಿದರು, ಸದ್ರೋದಯವಾದ ಕೂಡಲೆ, ಕೆಲಪ್ಪೋ ಎಂಬ ಕಿನ್ನರಿಯು ಅವಳ ದೂತಿಯೊಡನೆ ಈ ಬಿಡಾರಕ್ಕೆ ಸೇರಿದ ಉಪವನದಲ್ಲಿ ಗಾನವನ್ನು ಮಾಡುತ್ತಾ, ಅಲ್ಲಿ ಫಲಪುಷ್ಪಗಳನ್ನು ಬಿಡತಕ್ಕ ವೃಕ್ಷಗಳಿಗೆ ನೀರನ್ನು ಹಾಕುತ್ತಾ ಇದ್ದಳು. ಇವರ ಮನೋಹರವಾದ ಗಾನ ದಿಂದ ಮೆಂಟರಿಗೂ, ಟೆಲಿಮಾಕಸ್ಸಿಗೂ ಎಚ್ಚರವಾಯಿತು. ಆಗ ಮೆಂಟರನು ಹೇಳಿದ್ದೇನೆಂದರೆ :- - (* ಎಲೈ ಟೆಲಿಮಾಕಸ್ಸನೇ-ಈ ಕಿನ್ನರಿಯ ಮನೋಹರವಾದ ಗಾನವು ಕಿವಿಗಳ ಮೂಲಕವಾಗಿ ಮನಸ್ಸನ್ನು ಆಕರ್ಷಿಸುತ್ತಲಿದೆ, ಈ ಗಾನವು ನಿನ್ನನ್ನು ಆಕರ್ಷಿಸುವುದಕ್ಕೆ ಹಾಕಲ್ಪಟ್ಟಿರತಕ್ಕ ಮಹಾ ಪಾಶವೆಂದು ತಿಳಿದುಕೊ, ಈಗ ಧೈರವೂ, ಸೈರವೂ ನಿನ್ನ ಸಹಾಯಕ್ಕೆ ಬರಬೇಕು, ಇವಳ ಸ್ತುತಿಪಾಠಗಳಿಗೆ ಮರುಳಾಗಬೇಡ, ಇವಳು ಮಾಡತಕ್ಕ ಸ್ತುತಿಯು ಬಲವಾದ ವಿಷವೆಂದು ಭಾವಿಸು, ಯೂಲಿಸಿಸ್, ಎಕಿಲೀಸ್, ಥಿಸಿಯಸ್, ಹರ್ಕುಲಿಸ್ ಮೊದಲಾದ ಮಹಾಮಹಿಮರಿಗಿಂತ ನೀನು ಅಧಿಕನೆಂದು ಇವಳು ಹೇಳಿದಳು, ಇದು ನಿಜ ವೆಂದು ನೀನು ತಿಳಿದುಕೊಂಡಿರುವೆಯಾ? ಅವಳು ಇದನ್ನು ನಿಜವೆಂದು ತಿಳಿದುಕೊಂಡಿರುವಳೇ ? ನೀನು ಹಾಗೆ ತಿಳಿದುಕೊಂಡಿರಬಹುದು, ಅವಳು ಮಾತ್ರ ನಿನ್ನನ್ನು ನಿಗಳಬಂಧ ಮಾಡುವುದಕ್ಕೆ ಇದು ಅಭೇದ್ಯವಾದ ಸರಸ ಣಿಯೆಂದು ತಿಳಿದುಕೊಂಡಿರುವಳು, ಮೋಸ ಹೋಗಬೇಡ, ಈ ಮಹಾತ್ಮ ರಲ್ಲಿ ಇರತಕ್ಕೆ ಶಕ್ತಿಯನ್ನು ನೀನು ಪಡೆದಿರುವುದಿಲ್ಲ. ಜಿತೇಂದ್ರಿಯನಾಗಿ ಅರಿ ಷಡ್ವರ್ಗಗಳನ್ನು ಗೆದ್ದು , ಇವರ ಶಕ್ತಿಯನ್ನು ನೀನು ಸಂಪಾದಿಸಿಕೊಳ್ಳಬೇಕಾಗಿರು ತದೆ, ಇವಳು ನಿನ್ನನ್ನು ಮಂದಹಾಸ ಪೂರ್ವಕವಾಗಿ ಸ್ತುತಿಸುತ್ತಿದ್ದಳು, ತನ್ನ ಸ್ತುತಿಗಳಿಂದ ನಿನ್ನನ್ನು ಮರಳು ಮಾಡಿರುವುದಾಗಿ ಅವಳು ತಿಳಿದುಕೊಂಡಿರುವಳು. ನೀನು ಯೂಲಿಸಿಸ್ಸನಂತ ಅವಳ ಮಾಯೆಗೆ ಒಳಗಾಗದೆ, ಹೊರಟು ಹೋಗುವೆ