ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

109 ವುದು ಉತ್ತಮ ?” ಎಂದು ಇವಸಿಗೆ ತೋರಿತು, ಆದರೆ ಆ ರೀತಿಯಲ್ಲಿ ನಡೆಯು ವುದಕ್ಕೆ ಭಯ ಉಂಟಾಯಿತು. ಮೆಂಟರನ ಶಕ್ತಿಯು ಅಪ್ರತಿಹತವಾದದ್ದೆಂಬ ದಾಗಿಯೂ, ಅವನ ಉಪದೇಶಕ್ಕೆ ವಿರೋ ಧವಾಗಿ ನಡೆದರೆ, ತನ್ನನ್ನೂ , ಆ ಕಿನ್ನರಿ ಯನ್ನೂ ಇಬ್ಬರನ್ನೂ ಗ್ರಹಿಸುವ ಶಕ್ತಿಯ ಅವನಿಗೆ ಇರುವುದೆಂಬದಾಗಿಯ ಇವನಿಗೆ ಭಯ ಉಂಟಾಯಿತು. ಮೆಂಟರ:.ಗೆ ಅಸಮಾಧಾನವಾಗದಂತೆಯೂ, ಕೆಪ್ಪಳಿಗೆ ಮನೋಹರವಾಗಿರುವಂತೆಯೂ ಹೇಳಬೇಕೆಂದು ಮನಸ್ಸಿನಲ್ಲಿ ಸಂಕ ಲ್ಪವನ್ನು ಮಾಡಿಕೊಂಡು, ಟೆಲಿಮಾಕಸ್ಸನು ತನ್ನ ವೃತ್ತಾಂತವನ್ನು ಹೇಳವುದಕ್ಕೆ ಉಪಕ್ರಮಿಸಿದನು. ಅವನು ಹೇಳಿದ್ದೇ ನಂದರೆ :- “ ಎಲೈ ಪ್ರಾಣಕಾಂತೆಯಾದ ಕೆಲಿಸ್ಕತಿ :-ನಿಸಿಪಿಯಾ ರಾಜ್ಯದ ತೀರ ವನ್ನು ಬಿಟ್ಟು, ನಮ್ಮ ಹಡಗು ಮುಂದಕ್ಕೆ ಹೊರಟಿತು. ಅನುಕೂಲವಾದ ಗಾ ಳಿಯು ಬೀಸುತ್ತಿತ್ತು. ಸೈಪ್ರಸ್ ದ್ವೀಪದ ನಿವಾಸಿಗಳು ನನ್ನ ಸುತ್ತಲೂ ಇದ್ದರು. ಅವರ ನಡೆನುಡಿಗಳು ನನಗೆ ತಿಳಿದಿರಲಿಲ್ಲ. ಮೌನವನ್ನು ನಾನು ಅವ ಲ೦ಬಿಸಿದ್ದೆನು. ಅವರು ಹೇಳಿದ ನ್ನೆಲ್ಲಾ ಕೇಳುತ್ತಾ ಇರಬೇಕೆಂದು ಸಂಕಲ್ಪ ಮಾಡಿದೆನು. ಸ್ವಲ್ಪ ಹೊತ್ತಿನಲ್ಲಿ ಬಲವಾದ ನಿದ್ದೆಯು ನನಗೆ ಬಂದಿತು, ಮೈಮ ರೆತು ನಿದ್ರೆ ಮಾಡುವಾಗ, ಆಕಾಶದಲ್ಲಿ ಮೇಘವು ಎರಡು ಭಾಗವಾದಂತೆಯೂ, ರತಿದೇವಿಯು ಎರಡು ಪಾರಿವಾಳಗಳಿಂದ ಎಳೆಯಲ್ಪಟ್ಟ ರಥದಲ್ಲಿ ಸಂಚಾರ ಮಾ ಡುತ್ತಿದ್ದ ಹಾಗೆಯೂ, ಅವಳ ರೂಮಲಾವಣ್ಯಗಳೂ, ಅವಳ ಮಂದಹಾಸವೂ, ಅವಳ ಯೌವನವೂ ಅತ್ಯಂತ ಚಾಜ್ವಲ್ಯಮಾನವಾಗಿದ್ದಂತೆಯೂ, ಆಕಾಶಮಾರ್ಗ ದಿಂದ ಬಂದು, ನನ್ನ ಬಳಿಯಲ್ಲಿ ನಿಂತು ನನ್ನ ಭುಜದ ಮೇಲೆ ಕೈಯನ್ನು ಹಾಕಿ, - ಎಲೈ ಟೆಲಿಮಾಕಸ್ಸನೆ, ನೀನು ನನ್ನ ರಾಜ್ಯವನ್ನು ಪ್ರವೇಶಿಸು - ಸಂಭವವು ಬಂದು ಇದೆ. ಈ ದ್ವೀಪದಲ್ಲಿ ನಿನ್ನ ಇಷ್ಟಾರ್ಧಸಿದ್ಧಿಗೆ ಬೇಕಾದವುಗ- ೪ಾ ಇರು ತವೆ. ಸ್ವರ್ಗಭೋಗವು ನಿನ್ನ ಹಸ್ತಗತವಾಗಿರುವುದು, ಈ ಗವನ್ನು ತಿರಸ್ಕರಿಸಬೇಡ' ಎಂದು ಹೇಳಿದ ಹಾಗೆಯೂ ಸ್ವಷ್ಟವಾಯಿತು ಮನ್ಮಥನು ಇವಳ ಬಳಿಯಲ್ಲಿ ಆಡುತ್ತಿದ್ದ ಹಾಗೆ ಕಾಣಬಂದಿತು. ಅವನು ವೀನಸ್ಸ ಳಂತೆ ಬಹಳ ಮನೋಹರವಾದ ಆಕೃತಿಯುಳ್ಳವನಾಗಿದ್ದನು, ಅವನ ಕಣ್ಣುಗಳಲ್ಲಿ ಒಂದು ವಿಜಾತೀಯವಾದ ಪ್ರಕಾಶವು ಕಾಣುತ್ತಿತ್ತು, ಅದು ನನಗೆ ಭಯವನ್ನುಂ ಟುಮಾಡಿತು. ಅವನು ಮಂದಹಾಸ ಪೂರೈಕವಾಗಿ ನನ್ನನ್ನು ನೋಡಿದನು ಈ ಮಂದಹಾಸದಲ್ಲಿ ಪರಿಹಾಸವೂ, ಕೌರವೂ ಕಾಣಬರುತ್ತಿದ್ದವು. ಅವನು ಕೆಯಿಂದ ಅತ್ಯಂತ ತೀಕ್ಷ್ಮವಾದ ಅಂಬುಗಳನ್ನು ತೆಗೆದು ಕೊಂಡು ಬಿಲ್ಲಿಗೆ ಹಗ್ಗ ವನ್ನು ಕಟ್ಟಿ, ಬಾಣವನ್ನು ಏರಿಸಿದನು, ಆಗ ಮಿನರ್ವಳು ತನ್ನ ಚಿ