ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

110 ಪ್ರತ್ಯಕ್ಷಳಾಗಿ, ತನ್ನ ಅಮಾನುಷವಾದ ವಿಗ್ರಹವು ನನಗೆ ಕಾಣುವಂತೆ ಮಾಡಿದಳು. ವೀನಸ್ಸಿನ ಮುಖದಲ್ಲಿ ಕಾಣುತ್ತಿದ್ದ ಅಸಾಧಾರಣವಾದ ಮಾರ್ದವವೂ ಅನುರಾ ಗವೂ ಇವಳ ಮುಖದಲ್ಲಿ ಕಾಣುತ್ತಿರಲಿಲ್ಲ, ಮಿನರ್ವಳ ಸೌಂದರವು ಗರತಿಯರ ಸೌದರದಂತೆ ಸಾಮಾನ್ಯವಾಗಿಯೂ, ಅಕೃತ್ರಿಮವಾಗಿಯೂ, ಗಂಭೀರವಾ ಗಿಯ, ಧೈರಸ್ಟ್ರಗಳಿಂದಲೂ, ಸತ್ಯದಿಂದಲೂ, ಧರ್ಮದಿಂದಲೂ ಪ್ರಜ್ವ ಲಿಸತಕ್ಕದ್ದಾಗಿಯೂ ಇತ್ತು. ಇವಳನ್ನು ನೋಡಿದ ಕೂಡಲೇ ಮನ್ಮಧನ ಬಿಲ್ಲಿಗೆ ಏರಿಸಿದ್ದ ಬಾಣಗಳು ನೆಲಕ್ಕೆ ಬಿದ್ದವು. ಅವನು ನಿಟ್ಟುಸಿರನ್ನು ಬಿಟ್ಟನು. ಅವನನ್ನು ನೋಡಿ, ಮಿನರ್ವಳು ಹೇಳಿದ್ದೇನೆಂದರೆ :- - ( ಎಲೈ ದುರಾತ್ಮನಾದ ನನ್ನ ಧನೆ: - ನಿನ್ನ ದರ್ಪಕ್ಕೆ ಇದು ಸ್ಥಾನವಲ್ಲ. ನಿನ್ನ ಬಾಣಗಳು ಇಲ್ಲಿ ಅವುಗಳ ಶಕ್ತಿಯನ್ನು ತೋರಿಸಲಾರವು. ಅಜಿತೇಂ ದಿಯರ ಮೇಲೆ ಅವುಗಳನ್ನು ಪ್ರಯೋಗಿಸು, ವಿವೇಕವೂ, ಸತ್ಯವೂ, ಧರವೂ, ಘನತೆಯ ಸಾರಾಸಾರವಿಚಾರವೂ, ಇಂದ್ರಿಯನಿಗ್ರಹ ಶಕ್ತಿಯೂ, ಯಾರಿಗಿರು ವುದೋ ಅವರ ಮೇಲೆ ನೀನು ಬಾಣಗಳನ್ನು ಹಾಕಿದರೆ, ಅವುಗಳು ವೃರ್ಧವಾಗು ವುವುಮಹಾಮಹಿಮನಾದ ಈಶ್ವರನ ಮೇಲೆ ಹಾಕಲ್ಪಟ್ಟ ನಿನ್ನ ಬಾಣದ ದೆಸೆ ಯಿಂದ ಭಸ್ಮಿ ಭೂತನಾಗಿ ಅನಂಗನಾಗಿ ಪರಿಣಮಿಸಿರುತ್ತೀಯೆ. ಆದಾಗ್ಯೂ ನಿನಗೆ ವಿವೇಕವು ಬಂದಿಲ್ಲ. ದುರಾತ್ಮನೆ' ಹೊರಟು ಹೋಗು” ಎಂದು ಹೇಳಿ ದಳು. ಮಿನರ್ವಳನ್ನು ನೋಡಿದ ಕೂಡಲೆ, ವೀನಸ್ಸಳು ತನ್ನ ರಥವನ್ನು ಏರಿ» ಕೊಲಿಸ್ಸಸ್ ಪರ್ವತ ಶಿಖರಕ್ಕೆ ಹೊರಟು ಹೋದಳು, ಮಿನರ್ವಳೂ ಕೂಡ ಅದ್ರ ಶೃಳಾದಳು, ಅನಂತರ ನಾನು ಮನೋಹರವಾದ ತೋಟದಲ್ಲಿದ್ದಂತೆಯೂ, ಅದೇ ಸ್ವರ್ಗಕ್ಕೆ ಸೇರಿದ ನಂದನವನ ವಾಗಿತ್ತೆಂಬದಾಗಿಯೂ ನನಗೆ ತೋರಿತು. ಅಲ್ಲಿ ಮೆಂಟರನು ನನಗೆ ಉಪದೇಶ ಮಾಡಿದನು, ಅವನು ಹೇಳಿದ್ದೇನಂದರೆ :- « ಇದು ನರಕಕ್ಕೆ ಸಮಾನವಾದ ರಾಜ್ಯ, ಇದು ಅಂಟುರೋಗಗಳಿಗೆ ಪ್ರಸಿದ್ದವಾದ ದೀಪ, ಇಲ್ಲಿನ ವಾಯುವೂ ಕೂಡ ಎಷಯದ ಸೊಂಕಿನಿಂದ ದುಷ್ಟವಾಗಿರುವುದು ಸತ್ಯವೂ, ಧರ್ಮವೂ, ಇಂದ್ರಿಯನಿಗ್ರಹವೂ ಈ ಪ್ರಾಂ ತ್ಯವನ್ನು ಬಿಟ್ಟು ಹೊರಟು ಹೋಗಿರುವುವು, ಅಸತ್ಯಕ್ಕೂ, ಅಧರ್ಮಕ್ಕೂ, ವ್ಯಭಿಚಾರಕ್ಕೂ ಇದು ಜನ್ಮಸ್ಥಾನವಾಗಿರುವುದು.” - ಈ ರೀತಿಯಲ್ಲಿ ಪಿಂಟರನು ಹೇಳಿದಂತೆ ನನ್ನ ಕಿವಿಗೆ ಕೇಳಿತು. ಮೆಂಟರ ನನ್ನು ನೋಡಿದ ಕೂಡಲೆ, ಆನಂದಪರವಶನಾಗಿ, ಅವನನ್ನು ಆಲಿಂಗಿಸಿಕೊಳ್ಳುವು ದಕ್ಕೆ ನಾನು ಕೈಗಳನ್ನು ಚಾಚಿದೆನು. ಅಷ್ಟರಲ್ಲಿಯೇ ನನಗೆ ಎಣ್ಣೆರಿಕೆಯು ಆಯಿ