ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ದ ಆ ದುರಾತ್ಮರು ಧರ್ಮವನ್ನು ಉಲ್ಲಂಘಿಸಿ ನಡೆದರೆ, ಅವರ ಅಪರಾಧಕ್ಕೆ ಅನು ರೂಪವಾದ ಶಿಕ್ಷೆಯು ಆಗುವಂತೆ ಏರ್ಪಾಡುಗಳನ್ನು ಮಾಡಿ, ಯಲಸಸ್ಸನನ್ನು ಕರೆದುಕೊಂಡು ಬರುವುದಕ್ಕೆ ಹೊರಟ ಟೆಲಿಮಾಕಸ್ಸಿನ ಜೊತೆಯಲ್ಲಿ ತಾನೂ ಹೊರ ಡುವುದಾಗಿಯೂ, ಅವನನ್ನು ರಕ್ಷಿಸುವುದಲ್ಲದೆ, ಯಲಸಸ್ಸನನ್ನೂ ವಾಪಸು ಕರೆ ದುಕೊಂಡು ಬಂದು, ಅವನಿಂದ ಈ ದುರಾತ್ಮರು ದತವಾಗುವಂತೆ ಮಾಡುವುದಾ ಗಿಯೂ, ವಾಗ್ದಾನ ಮಾಡಿ, ಪಾತಿವ್ರತ್ಸರಕ್ಷಣಕ್ಕೆ ಸಾಧಕವಾದ ಸಲಹೆಗಳನ್ನು ಆ ಪತಿವ್ರತಾ ಶಿರೋಮಣಿಗೆ ಉಪದೇಶಿಸಿ, ಅವಳ ಅಪ್ಪಣೆಯನ್ನು ತೆಗೆದುಕೊಂಡು, ಮೆಂಟರನು ಟೆಲಿಮಾಕಸ್ಸನ ಜತೆಯಲ್ಲಿ ಮೂಲಸೆಸ್‌ನನ್ನು ಹುಡುಕುವುದಕ್ಕೆ ಹೊರಟನು. ಮಗನಿಗೆ ದಿಗ್ವಿಜಯವಾಗಲೆಂದು ಹರಸಿ, ಮೆಂಟರಿಗೆ ಸಾ|| ನಮಸ್ಕಾರವನ್ನು ಮಾಡಿ ತನ್ನ ಗಂಡನೂ ಮಗನೂ ಶೀಘ್ರದಲ್ಲಿಯೇ ಬಂದು ತನ್ನ ಮಾನವನ್ನು ಉಳಿಸುವಂತೆ ಮಾಡಲೆಂದು, ಜಗಜೀಶ್ವರನ ಪೂಜೆಯನ್ನು ಮಾಡುತ್ತಾ, ನದಾ ದಾನಧರ್ಮಗಳನ್ನು ಮಾಡುತ್ತಾ, ತನ್ನ ವಾತಿವ್ರತ್ಯಕ್ಕೆ ಭಂಗ ವೇನಾದರೂ ಬರುವ ಪಕ್ಷದಲ್ಲಿ, ದೇಹವನ್ನು ಬಿಡುವೆನೆಂದು ನಿಷ್ಕರ್ಷೆ ಮಾಡಿ ಕೊಂಡು, ವಿಷದ ಗುಳಿಗೆಯನ್ನೂ, ಆತ್ಮರಕ್ಷಣೆಗೆ ಸಾಧಕವಾದ ಆಯುಧಗಳನ್ನೂ, ಇಟ್ಟು ಕೊಂಡು, ಒಂದು ವರ್ಷದವರೆಗೂ ತನಗೆ ವ್ರತವು ಇರುವುದಾಗಿಯೂ, ಅನಂತರ ದೈವಾಜ್ಞೆಯಂತೆ ನಡೆಯಬಹುದೆಂಬದಾಗಿಯು, ತನ್ನ ಮಾನಭಂಗ ವನ್ನು ಮಾಡಬೇಕೆಂದು ಬಂದಿದ್ದ ವರಿಗೆ ಹೇಳಿ, ದೇವತಾರಾಧನೆಯಲ್ಲಿ ನಿರತಳಾಗಿ ಆಹಾರವಿಹಾರಗಳಲ್ಲಿ ನಾಲ್ಕುಳಾಗಿ, ಜಗದೀಶ್ವರನ ದುಷ್ಟನಿಗ್ರಹ ಶಿಷ್ಟ ಪರಿಪಾ ಲನೆಯ ಕರ್ಮಗಳನ್ನು ಪರೀಕ್ಷಿಸುವುದರಲ್ಲಿ ಸರಾಯಣಳಾಗಿ, ಆಕೆಯು ಇದ್ದಳು. ಈ ಮಧ್ಯೆ ಕೆಲಪೈ ಎಂಬ ಕಿನ್ನರಿಯ ದ್ವಿವಕ್ಕೆ ಯಲಸೆಸ್ಸನು ಹೋಗಿ ರುವನೆಂದು ವರ್ತಮಾನವು ಬಂದಿತು, ಟೆಲಮಾಕನ್ಸನೂ ಮೆಂಟರೂ ಹಡಗನ್ನು ಏರಿ, ಆ ದ್ವೀಪದ ಕಡೆಗೆ ಹೊರಟರು. ಯೂಲಿಸನ್ನನ ರೂಪಲಾವಣ್ಯಗಳನ್ನು ನೋಡಿ, ಕೆಲಿಪ್ರೊ ಎಂಬ ಕಿನ್ನರಿಯು ಮೋಹಿತಳಾಗಿ, ಸೈರಿಣಿಯರಿಗೆ ಸಹಜ ವಾದ ಇಂದ್ರಜಾಲ ಮಹೇಂದ್ರಜಾಲ ವಿದೆ ಗಳಿ೦ದ ಆತನನ್ನು ಸ್ವಾಧೀನಪಡಿಸಿ ಕೊಳ್ಳಬೇಕೆಂದು, ಅಮಿಳು ಪ್ರಯತ್ನ ಮಾಡಿದಳು. ಜಿತೇಂದ್ರಿಯರಲ್ಲಿ ಅಗ್ರಗಣ್ಯ ನಾದ ಯೂಲಿಸೆಸ್ಸನು, ಅವಳ ಪಾಶಕ್ಕೆ ಒಳಗಾಗದೆ, ಅವಳನ್ನು ತಿರಸ್ಕರಿಸಿ ಆಗ ತಾನೇ ಹೊರಟು ಹೋಗಿದ್ದನು, ಮೋಹಪರವಶಳಾಗಿ ಅವಳು ಕೈಶಪಡುತ್ತಿ ದ್ದಳು. ಆ ಕಾಲಕ್ಕೆ ಸರಿಯಾಗಿ ಟೆಲಿಮಾಕನ್ಸನ ಹಡಗು ಆ ದ್ವೀಪದ ಸವಿಾಪದಲ್ಲ ಬಂಡೆಗೆ ತಗಲಿ ಮುಳುಗಿಹೋಯಿತು. ಟೆಲಿಮಾಕ ಸೃನೂ ಮತ್ತು ಮೆಂಟರೂ ಬಹಳ ಶ್ರಮಪಟ್ಟು ಈಜಿಕೊಂಡು ಹೋಗಿ ದ್ವೀಪವನ್ನು ಸೇರಿದರು, ಬಟ್ಟೆ