ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

112 ಸ್ಥಳಕ್ಕೆ ಹೋಗಿ, ಅವನ ಕೆಲಸವನ್ನು ನಾನು ಮಾಡುವುದಕ್ಕೆ ಉಪಕ್ರಮಿಸಿದೆನು. ಪ್ರಜ್ಞೆಯಿರತಕ್ಕ ಜನಗಳನ್ನೆಲ್ಲಾ ಸೇರಿಸಿ, ಬಾವುಟಗಳನ್ನು ಇಳಿಸಿದೆನು, ಅವರಿಗೆ ಉತ್ಸಾಹವನ್ನು ಮಾಡಿ, ಹುಟ್ಟುಗಳನ್ನು ಹಾಕುವುದಕ್ಕೆ ಉಪಕ್ರಮಿಸಿದೆವು. ಧೈರವು ಸರೈತ ಸಾಧನವೆಂಬುದು ಈಗ ನಿಜವಾಯಿತು. ಬಂದೆಗಳ ಕಡೆಗೆ ಈ ಹಡಗು ಹೋಗುವುದನ್ನು ನಾವು ತಪ್ಪಿಸಿದೆವು, ಕ್ರಮಕ್ರಮವಾಗಿ ನಾವಿಕ ರಿಗೆ ಪ್ರಜ್ಞೆಯು ಬಂದಿತು, ನನ್ನ ಸಾಹಸವನ್ನು ನೋಡಿ, ಅವರು ತುಂಬಾ ಆಶ್ಚರ ಪಟ್ಟರು. ಹಡಗನ್ನು ರಕ್ಷಿಸುವುದಕ್ಕೆ ನಾನು ಪ್ರಯತ್ನ ಮಾಡದಿದ್ದರೆ, ಸದರಿ ಬಂಡೆಗೆ ತಗುಲಿ ಹಡಗು ಛಿದ್ರವಾಗುತ್ತಿತ್ತೆಂಬದಾಗಿಯೂ, ತಾವೆಲ್ಲರೂ ಸಾಯಬೇಕಾಗುತ್ತಿತ್ತೆಂಬದಾಗಿಯೂ ಅವರು ತಿಳಿದುಕೊಂಡರು, ಅವರೆಲ್ಲರಿಗೂ ನನ್ನಲ್ಲಿ ವಿಶೇಷ ಗೌರವವೂ, ಪ್ರೀತಿಯ ಉ೦ಟಾಯಿತು, ಸ್ವಲ್ಪ ಹೊತ್ತಿನಲ್ಲಿ ಅಲೆಗಳ ರಭಸವು ಕಡಮೆಯಾಯಿತು. ಸೈಪ್ರಸ್ ದ್ವೀಪದ ಬಳಿಗೆ ಹಡಗನ್ನು ನಡೆಸಿಕೊಂಡು ಹೋದೆವು. ಅದು ರೇವು ಪಟ್ಟಣವನ್ನು ಸೇರಿತು. ಹಡಗಿ ನಿಂದ ಆ ದ್ವೀಪಕ್ಕೆ ಇಳಿದೆವು, ನಾವು ಇಳಿದ ದಿವಸ ಅಲ್ಲಿ ನನ್ನ ಧೋತ್ಸವವು ನಡೆಯುತ್ತಿತ್ತು, ಎಲ್ಲಿ ನೋಡಿದಾಗ್ಯೂ ಸ್ತ್ರೀಯರು ಹಬ್ಬದ ಉಡಿಗೆಗಳನ್ನು ಹಾಕಿಕೊಂಡು, ರತಿದೇವಿಯ ಪೂಜೆಯನ್ನು ಮಾಡುತ್ತಿದ್ದರು, ಗುಂಪುಗುಂಪಾಗಿ ಜನಗಳು ಆಕೆಯ ದೇವಸ್ಥಾನಕ್ಕೆ ಹೋಗುತ್ತಿದ್ದರು, ಅವರ ಮುಖದಲ್ಲಿ ಆನಂ ದಪರವಶತೆಯು ಕಾಣುತ್ತಿತ್ತು. ಸಾಧ್ಯ °ಗಳಿಗೆ ಸಹಜವಾದ ನೋಟವು ಅವರಲ್ಲಿ ಇರಲಿಲ್ಲ, ಸೈರಿಣಿಯರ ವಿಲಾಸಗಳು ವಿಶೇಷವಾಗಿ ಕಾಣುತ್ತಿದ್ದವು. ತಮ್ಮ ವಿಲಾಸಗಳಿಂದ ಇರುಷರನ್ನು ಮರುಳು ಮಾಡುವುದರಲ್ಲಿ ನಾನು ಮೊದಲು, ತಾನು ಮೊದಲು ಎಂದು ಪೊ ಟಾವೋಟಗಳು ನಡಯುತ್ತಿದ್ದವು ಇದನ್ನು ನೋಡಿದ ಕೂಡಲೇ, ನನಗೆ ತಿರಸ್ಕಾರವು ಹುಟ್ಟಿತು. ಅನಹ್ಯವು ಉಂಟಾ ಮಿತು. ಈ ದ್ವೀಪದಲ್ಲಿ ಅನೇಕ ದೇವಸ್ಥಾನಗಳು ಇರುತ್ತವೆ. ಸಿವಿರಾ ಎಂಬ ದೇವಸ್ಥಾನಕ್ಕೆ ನಾನು ಕರೆದುಕೊಂಡು ಹೋಗಲ್ಪಟ್ಟೆನು, ಈ ದೇವಸ್ಥಾನದ ಕಂಭಗಳು ಉನ್ನತವಾಗಿಯೂ, ಬಹಳ ದೊಡ್ಡವಾಗಿಯ ಅಮೃತಶಿಲೆಯಲ್ಲಿ ಮಾಡಲ್ಪಟ್ಟಿದ್ದವು, ಈ ಕಟ್ಟಡವು ಬಹಳ ಲಕ್ಷಣವಾಗಿತ್ತು, ಅನೆಕ ದೆವತೆ ಗಳ ಎಗ್ರಹಗಳು ಕೆತ್ತಲ್ಪಟ್ಟಿದ್ದ ವು, ತಲೆಬಾಗಿಲಲ್ಲಿಯೆ ಕಾಣಿಕೆಗಳು ಒಪ್ಪಿಸಲ್ಪ ಡುತ್ತಿದ್ದವು, ಅಲ್ಲಿನ ಅನೇಕ ದೇವಸ್ಥಾನಗಳಲ್ಲಿ ಅನೇಕ ವಿಧವಾದ ಪ್ರಾಣಿಗ ಳನ್ನು ಬಲಿಕೊಡುವ ಸಂಪ್ರದಾಯವಿರುವುದು, ಈ ದೇವಸ್ಥಾನದಲ್ಲಿ ಈ ಏರ್ಪಾ ಡು ಇರಲಿಲ್ಲ, ವಾಸನೆಯು ಕಟ್ಟಲ್ಪಟ್ಟ ಸಾರಾಯಿಗಳನ್ನು ಮಾತ್ರ ದೇವರ ನೈವೇದ್ಯಕ್ಕೋಸ್ಕರ ತಂದಿಟ್ಟಿದ್ದ ರು. ಅಗ್ಗಿಷ್ಟಿಕೆಗಳಲ್ಲಿ ಬೆಂಕಿಯು ಪ್ರಜ್ವಲಿಸು