ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿಕಾರಿಯವರ ಏಟನ್ನು ತಿಂದು, ಓಡಿಹೋಗುವ ಜಿಂಕೆಯ ಅವಸ್ಸ ಯು ನನಗೆ ಉಂಟಾಯಿತು, ಈ ದ್ವೀಪದಿಂದ ಹೊರಟು ಹೋಗಬೇಕೆಂಬ ಸಂಕಲ್ಪ ವನ್ನು ಮಾಡುತ್ತಾ ತಿರುಗುತ್ತಿರುವಾಗ ಎದುರಿಗೆ ಮೆಂಟರನು ಬರುವಂತೆ ನನಗೆ ತೋರಿತು. ಅವನ ಮುಖವು ಬಿಳತುಕೊಂಡಿತ್ತು. ವ್ಯಸನವೂ, ಕೇಶವೂ ಅವ ನನ್ನು ಆವರಿಸಿಕೊಂಡಿದ್ದಂತೆ ಕಾಣಬಂತು. ಈ ಆಕೃತಿಯು ಮೆಂಟರನದೇ ? ಅಥವಾ ಅವನ ಲಿಂಗಶರೀರವಾಗಿರಬಹುದೇ ? ಎಂದು ಸಂದೇಹ ಉಂಟಾಯಿತು. * ಎಲೈ ಮಹಾತ್ಮನೇ, ನೀನು ಮೆಂಟರನೇ ಅಧವಾ ಅವನ ನೆರಳೇ ?, ನೀನು ಬದುಕಿದ್ದೀಯಾ ಅಥವಾ ದೇಹಾಂತರವನ್ನು ಹೊಂದಿರುವೆಯಾ ?” ಎಂದು ಕೇಳುತ್ತಾ, ಆತನ ಬಳಿಗೆ ನಾನು ಓಡಿದೆನು. ಆತನು ಮುಂದಕ್ಕೆ ಬರದೆ, ನಿಂತ ಕಡೆಯೇ ನಿಂತಿದ್ದನು, ಓಡಿ ಹೋಗಿ ; ಅವನನ್ನು ತಬ್ಬಿಕೊಂಡೆನು, ನನ್ನ ಕೈಗಳಿ ಗೂ, ಮೈಗಳಿಗೂ ಮೆಂಟರನ ಸ್ಪರ್ಶಸುಖವು ಉಂಟಾಯಿತು, ಇವನೇ ಮೆಂಟರ ನೆಂಬ ಜ್ಞಾನವು ಉಂಟಾಯಿತು. ಕಣ್ಣೀರುಗಳನ್ನು ನುರಿಸುತ್ತಾ, ಮಾತನಾಡು ವುದಕ್ಕೆ ಶಕ್ತಿಯಿಲ್ಲದೆ, ಅವನನ್ನು ತಬ್ಬಿ ಕೊಂಡಿದ್ದೆನು, ಸ್ವಲ್ಪ ಹೊತ್ತು ವ್ಯಸನ ದಿಂದಲೂ, ಕನಿಕರದಿಂದಲೂ, ಭೀತಿಯಿಂದ ಅವನು ನನ್ನನ್ನು ನೋಡುವಂತ ಕಾಣಬಂದಿತು. ಆಗ ಅವನನ್ನು ಕುರಿತು ನಾನು ಹೇಳಿದ್ದೇನೆಂದರೆ :- ( ಎಲೈ ಮೆಂಟರನೇ,-- ನೀನು ಎಲ್ಲಿಂದ ಬಂದಿರುವಿ? ನಿ॰ ನಿಲ್ಲದಿರುವಾಗ ನನಗೆ ಎಷ್ಟೋ ವಿಪತ್ತುಗಳು ಬಂದವು, ನಿನ್ನ ಸಹಾಯವು ಇದ್ದಿದ್ದರೆ, ಅವು ಗಳನ್ನೆಲ್ಲಾ ನಾನು ನಿಮಿಷಾರ್ಧದಲ್ಲಿ ಗೆಲ್ಲುತ್ತಿದ್ದೆನು. ಆ ಶಕ್ತಿಯು ನನಗೆ ತಪ್ಪಿತು. 'ಇಂದ್ರಿಯಪರವಶನಾಗುವ ಸ್ಥಿತಿಗೆ ನಾನು ಬಂದಿರುವೆನು ಸತ್ಯದ ಕ್ಲಯ, ಧರ್ಮದಲ್ಲಿಯೂ ನಿನ್ನ ಸಹವಾಸದಲ್ಲಿದ್ದಾಗ, ನನಗೆ ಎಷ್ಟು ಪ್ರೀತಿಯು ಇತ್ತೋ ಅಷ್ಟು ಪ್ರೀತಿಯು ಈಗ ಇರುವುದಿಲ್ಲ. ಕಡಮೆಯಾಗುವ ಸಂಭವವು ಬರುತ್ತಲಿರುವುದು, ಗೈವಯೋಗದಿಂದ ವಿಪತ್ಯ ಸನ್ನಿಹಿತವಾಗುವ ಕಾಲಕ್ಕೆ ಸರಿಯಾಗಿ ನೀನು ಬಂದಿರುವಿ, ನಾನು ಕೃತಾರ್ಧನಾದೆನು.” ಈ ರೀತಿಯಲ್ಲಿ ನಾನು ಹೇಳುವುದರೊಳಗಾಗಿ, ( ಈ ದ್ವೀಪದಲ್ಲಿ ಒಂದು ನಿಮಿಷವೂ ಇರಬೇಡ, ಇಲ್ಲಿಂದ ಪ್ರಯಾಣ ಮಾಡು, ಈ ದ್ವೀಪದ ಮಂಗಳೂ ಕೂಡ ವಿಷಭರಿತವಾಗಿರುವುವು. ಇಲ್ಲಿನ ವಾಯುವು ವಿಷದ ಹಬೆಯುಳ್ಳದ್ದು. ಜನಗಳು ವಿಷದ ಸೋಂಕುಳ್ಳವರು. ಇವರ ಸಹವಾಸದಿಂದ ಅಮ್ಮ ತವು ವಿಷವಾ ಗುವುದು, ಇವರು ತಿರಗ್ಟಂತುಗಳಿಗಿಂತಲೂ ಕರೆ, ಯಲಸೆಸ್ಸನ ಮಗನಿಗೆ ಇದು ಅನುಕೂಲವಾದ ಸ್ಥಳವಲ್ಲ, ಒಂದು ನಿಮಿಷವೂ ಇಲ್ಲಿ ಇರಬೇಡ, ಹಿಂತಿ ರುಗಿ ನೋಡಬೇಡ, ನಾಗಕ್ಕೆ ಮಾತ್ರ ಸ್ಥಾನವಾಗ ಈ ದ್ವೀತವನ್ನು ಒಟ್ಟು ಓಡು, ಎ೦ಬಾ ಮೆಂಟರನು ಹೇಳಿದನು.