ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

115 ಈ ಮಾತುಗಳನ್ನು ಕೇಳಿದ ಕೂಡಲೇ, ವಿಚಿತ್ರವಾದ ಮನಸ್ಸೇಠ್ಯವು ನನಗೆ ಉಂಟಾಯಿತು. ನನ್ನ ಕಣ್ಣುಗಳಲ್ಲಿ ಒಂದು ಕಾಂತಿಯು ಹುಟ್ಟಿತು. ಈ ದ್ವೀಪ ನಿವಾಸಿಗಳಲ್ಲಿ ತಿರಸ್ಕಾರವು ಹುಟ್ಟಿತು. ಈ ದ್ವೀಪಕ್ಕೆ ಬಂದೆನಲ್ಲಾ ಎಂಬ ವ್ಯಸ ನವು ಹುಟ್ಟಿತು. ಈಶ್ವರನ ಅನುಗ್ರಹವೇ ಮೆಂಟರನ ರೂಪವಾಗಿ ಬಂದಿರುವು ದೆಂಬದಾಗಿಯೂ, ಈ ಅನುಗ್ರಹಕ್ಕೆ ಅನುಸಾರವಾಗಿ ನಡೆಯುವುದೇ ನನ್ನ ಕರ್ತ ವ್ಯವೆಂಬದಾಗಿಯೂ ನನಗೆ ತೋರಿತು. ಆಗ ಮೆಂಟರನು ಪುನಃ ಹೇಳಿದ್ದೆ ನೆದರೆ :- ( ಎಲೈ ಟೆಲಿಮಾಕಸ್ಸನೇ-ಸಾವಕಾಶ ಮಾಡದೆ ಈ ಸ್ಥಳವನ್ನು ಬಿಟ್ಟು ಹೊರಡು, ನಾನು ಹೊರಡಬೇಕಾಗಿದೆ, ಅನುಲ್ಲಂಘನೀಯವಾದ ಕೆಲಸಗಳು ನನಗೆ ಬೇಕಾದ ಹಾಗಿರುವುವು, ನಾನು ಹೋಗುತ್ತೇನೆ. ಈ ರೀತಿಯಲ್ಲಿ ಮೆಂಟರನು ಹೇಳಿದ್ದನ್ನು ಕೇಳಿ, ನಾನು ಹೇಳಿದ್ದೇನೆಂದರೆ :- “ ನೀನು ಎಲ್ಲಿಗೆ ಹೋಗುತ್ತೀಯೆ ? ನೀನು ಹೋದ ಕಡೆಗೆ ನಿನ್ನ ನೆರಳಂತೆ ನಾನೂ ಅನುಸರಿಸಿ ಬರುವೆನು, ನನ್ನನ್ನು ಬಿಟ್ಟು ಹೋಗಬೇಡ, ಹಾಗೆ ಹೋಗುವ ಪಕ್ಷದಲ್ಲಿ, ನಿನ್ನ ಬಳಿಯಲ್ಲಿ ನನ್ನ ದೇಹವನ್ನು ಬಿಡುವೆನು.” ಎಂದು ಹೇಳಿ, ಅವನ ಕಾಲನ್ನು ಹಿಡಿದುಕೊಂಡೆನು. ಅದಕ್ಕೆ ಮೆಂಟರನು ಹೇಳಿದ್ದೆ ! ನೆಂದರೆ ; “ ನಿನ್ನ ಪ್ರಯತ್ನಗಳೆಲ್ಲಾ ವೈರ್ಧ, ನಾನು ನಿನ್ನ ಬಳಿಯಲ್ಲಿ ಇರುವುದಕ್ಕೆ ಆಗುವುದಿಲ್ಲ. ಮೆಟೋಫಿಸ್ಸನು ನನ್ನನ್ನು ಹೇಜಲ್ ಎಂಬ ಅರಬ್ಬಿಯವನಿಗೆ ಮಾರಿರುವನು. ಅವನು ಡಮಾಸ್ಕಸ್ ದೇಶಕ್ಕೆ ಹೊರಟಿರುವನು. ಈ ಪೇಜಲ್ ಎಂಬುವನು ನಾನು ಗ್ರೀಸ್ ದೇಶದವನೆಂದು ತಿಳಿದುಕೊಂಡು, ನನ್ನನ್ನು ಕೊಂಡು ಕೊಂಡಿರುವನು. ಅವನು ಆ ದೇಶದ ಚರಿತ್ರೆಯನ್ನೂ, ಶಾಸ್ತ್ರಗಳನ್ನೂ ತಿಳಿದು ಕೊಳ್ಳಬೇಕೆಂಬ ಅಭಿಲಾಷೆಯುಳ್ಳವನಾಗಿರುವನು, ಬಹು ದ್ರವ್ಯವನ್ನು ಕೊಟ್ಟು, ನನ್ನನ್ನು ಕೊಂಡುಕೊಂಡಿರುವನ್ನು ನಾನು ಗ್ರೀಸ್ ದೇಶದ ರಾಜತಂತ್ರಗಳನ್ನ ಲ್ಲಾ ಅವನಿಗೆ ಉಪದೇಶ ಮಾಡಿರುವೆನು, ಈಗ ಮಹಾತ್ಮನಾದ ಮೈನಾಸಿನ ಧರ್ಮ ಶಾಸ್ತ್ರಗಳನ್ನು ವ್ಯಾಸಂಗ ಮಾಡುವುದಕ್ಕೋಸ್ಕರ ಅವನು ಉಪಕ್ರಮ ಮಾಡಿರು ವನು, ಕ್ರೀಟ್ ದ್ವೀಪಕ್ಕೆ ನಾವು ಹೋಗುತ್ತಿದ್ದೇವೆ, ಪ್ರತಿಕೂಲವಾದ ವಾಯು ವಿನ ದೆಸೆಯಿಂದ ಈ ದ್ವೀಪಕ್ಕೆ ಬಂದೆವು. ಈ ದೇವಸ್ಥಾನಕ್ಕೂ ಪೂಜಾರ್ಥವಾಗಿ ಅವನು ಬರುತ್ತಲಿದ್ದಾನೆ, ಇಲ್ಲಿನ ಪೂಜೆಯನ್ನು ತೀರಿಸಿಕೊಂಡು, ನಾವು ಹೊರ ಡುವೆವು, ಅನುಕೂಲವಾದ ಗಾಳಿಯು ಬೀಸುವುದಕ್ಕೆ ಉಪಕ್ರಮವಾಗಿರು ವುದು, ಟೆಲಿಮಾಕಸ್ಸನೇ ನಿನಗೆ ಮಂಗಳವಾಗಲಿ, ನಾನು ಈಗ ಹೇಜಲ್‌ನ