ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

116 ದಾಸನಾಗಿರುತ್ತೇನೆ, ನನ್ನ ಯಜಮಾನನ ಆಜ್ಞೆಗನುಸಾರವಾಗಿ ನಾನು ನಡೆಯ ಬೇಕಾಗಿರುವುದು, ಹೀಗಾಗುವದು ದೇವರ ಸಂಕಲ್ಪ, ನಾನು ಸ್ವತಂತ್ರನಾ ಗಿದ್ದರೆ, ನಿನ್ನ ಯೋಗಕ್ಷೇವು ಚಿಂತೆಯನ್ನು ಮಾಡಬಹುದಾಗಿತ್ತು. ನಾನು ಈಗ ಸ್ವತಂತ್ರನಲ್ಲ. ಪರತಂತ್ರನಾಗಿರುತ್ತೇನೆ. ನಿಮ್ಮ ಅಪ್ಪನ ಯಶಸ್ಸನ್ನು ಸ್ಮರಿಸಿಕೊ, ನಿಮ್ಮ ತಾಯಿಗೆ ಉಂಟಾಗಿರತಕ್ಕ ದುರದೃಷ್ಟವನ್ನು ಸ್ಮರಿಸಿಕೊ. ದೇವರು ಧರ್ಮಿಷ್ಟರಲ್ಲಿ ಅನುರಕ್ತನಾಗಿರುವನು. ಇದನ್ನು ಮರೆಯಬೇಡ. ಇನ್ನು ಹೋಗಿಬರುವೆನು.”

  • ಎಲೈ ಜಗದೀಶ್ವರನೇ-ನಿರಪರಾಧಿಗಳನ್ನು ರಕ್ಷಿಸುವುದು ನಿನ್ನ ಬಿರು ದಾಗಿರುವುದು, ಈ ಟೆಲಿಮಾಕಸ್ಸನು ನಿರಪರಾಧಿಯು, ನತ್ರ ನಂಧನು, ಧರಾ ತನು, ಮನಸ್ಸಾಕ್ಷಿಗನುಸಾರವಾಗಿ ನಡೆಯುವುದರಲ್ಲಿ ಬಗ್ದಾದರನು, ಇವನು ನಿನ್ನ ರಕ್ಷಣೆಗೆ ಪಾತ್ರನು, ಇವನನ್ನು ನಿನಗೆ ಒಪ್ಪಿಸಿರುತ್ತೇನೆ, ನೀನು ಕಾಪಾ ಡುತ್ತೀ ಎಂಬದಾಗಿ ನಂಬಿರುತ್ತೇನೆ.” ಎಂದು ಹೇಳಿ, ಮೆಂಟರನು ಹೇಜಲ್ ನ ಬಳಿಗೆ ಹೊರಟನು. ಆಗ ಮೆಂಟಗನಿಗೆ ನಾನು ಹೇಳಿದ್ದೇನೆಂದರೆ :-

« ಎಲೈ ಮೆಂಟರನೇ, ನನ್ನನ್ನು ಬಿಟ್ಟು ನೀನು ಹೋಗಕೂಡದು. ಹಾಗೆ ಹೋಗುವ ಪಕ್ಷದಲ್ಲಿ, ನಾನು ಕೂಡಲೇ ದೇಹವನ್ನು ಬಿಡುವೆನು, ಪೇಜ ಲ್‌ನು ಮನುಷ್ಯ ಮಾತ್ರದವನಾಗಿರಬೇಕು. ಅವನು ಸಿನEಣನಾಗಿರಲಾರನು. ನನಗೂ, ನಿನಗೂ ವಿಯೋಗವನ್ನು ಅವನು ಎಂದಿಗೂ ಮಾಡಲಾರನು. ನಿನ್ನ ಜೊತೆಯಲ್ಲಿ ದಾಸನಾಗಿರುವುದಕ್ಕೆ ನನಗೂ ಅವಕಾಶವನ್ನು ಕೊಡಲ ಈ ದ್ವೀಪವನ್ನು ಬಿಟ್ಟು ಹೊರಡಬೇಕೆಂದು ನೀನು ಅಪ್ಪಣೆಯನ್ನು ಕೊಟ್ಟಿರುವಿ. ನಿನ್ನ ಜೊತೆಯಲ್ಲಿಯೇ ನಾನೂ ಏತಕ್ಕೆ ಹೋಗಕೂಡದು ? ನನ್ನನ್ನು ದಾಸನ ಸ್ನಾಗಿ ಪರಿಗ್ರಹಿಸೆಂದು ನಾನು ಹೇಜಲ್‌ನನ್ನು ಪ್ರಾರ್ಥಿಸುವೆನು ನನ್ನಲ್ಲಿ ಅವನಿಗೆ ಪ್ರೀತಿಯು ಹುಟ್ಟಬಹುದು. ಕನಿಕರವೂ ಹುಟ್ಟಬಹುದು, ದೆ"ಶಾಟನಗಳನ್ನು ಮಾಡಿ, ಧರ್ಮದಸ್ವರೂಪವನ್ನು ತಿಳಿದುಕೊಳ್ಳಬೇಕೆಂಬ ಅಭಿಲಾಷೆಯುಳ್ಳವನು ನನ್ನ ಪ್ರಾರ್ಥನೆಯನ್ನು ಎಂದಿಗೂ ತಿರಸ್ಕರಿಸನು, ಅವನ ಕಾಲಿಗೆ ಬಿದ್ದು, ನನ್ನ ದಾಸತ್ವವನ್ನೂ, ನಾನು ಮಾಡುವ ಸೇವೆಯನ್ನೂ ಪರಿಗ್ರಹಿಸಬೇಕೆಂದು ಪ್ರಾರ್ಥಿ ಸುವೆನು. ಅವನ ಸಮ್ಮತಿಯಿಂದ ನಾನು ನಿನ್ನ ಜೊತೆಯಲ್ಲಿ ಬರುವೆನು, ಎಲೈ ಪರಮ ಆಸ್ತನಾದ ಮೆಂಟರನೇ, ನಿನಗೆ ಬಂದ ಬಂಧವು ನನಗೆ ಏತಕ್ಕೆ ಬರಕೂ ಡದು ? ನನ್ನ ಪ್ರಾರ್ಥನೆಯನ್ನು ಅವನು ತಿರಸ್ಕರಿಸಿದರೆ, ಮುಂದಿನ ಗತಿಯನ್ನು ನೋಡುವೆನು, ನಿನ್ನನ್ನು ಬಿಟ್ಟು, ಈ ಲೋಕದಲ್ಲಿರುವುದಕ್ಕಿಂತಲೂ ಲೋಕಾಂ ಕರವೇ ಉತ್ತಮ”