ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಳು ಒದ್ದೆಯಾಗಿದ್ದವು, ಈಜುವುದರಲ್ಲಿ ಬೇಜಾರಾಗಿ, ಅನ್ನೊದಕಗಳಲ್ಲಿ ಆಸ ಕಿಯು ವಿಶೇಷವಾಗಿ ಉಂಟಾಗಿತ್ತು, ಯಲಿಸೆಸ್ಸನು ಆ ದ್ವೀಪಕ್ಕೆ ಪ್ರಭು ವಾದ ಈಕೆಯ ಅತಿಥಿಯಾಗಿದ್ದು ಆಗತಾನೇ ಹೊರಟು ಹೋದನೆಂದು ತಿಳಿಯಬಂ ದಿತು. ಇವರಿಬ್ಬರೂ ಆ ಅವಸ್ಥೆಯಲ್ಲಿ ಆಕೆಯ ಸವಿಾಪಕ್ಕೆ ಹೋಗಿ, ತಾವು ಬಂದ ಉದ್ದೇಶವನ್ನೂ, ತನಗೆ ಉಂಟಾದ ಕಷ್ಟವನ್ನೂ ಶೃತಪಡಿಸಿ, ಒಣಗಿದ ಬಟ್ಟೆಗಳನ್ನೂ , ಅನ್ನೊ ಇದಕಗಳನ್ನೂ, ವಾಸಕ್ಕೆ ಸ್ವಲ್ಪ ಅವಕಾಶವನ್ನೂ ಪ್ರಾರ್ಥಿ ಸಿದರು, ಟೆಲಮಾಕಸ್ಸನನ್ನು ನೋಡಿದ ಕೂಡಲೇ, ತನ್ನ ಅನುರಾಗಕ್ಕೆ ಪಾತ್ರ ನಾಗಿದ್ದ ಯಲಸೆಸ್ಸನೇ ಬಂದನೆಂದು ಅವಳು ಭ್ರಮೆ ಪಟ್ಟಳು, ಟೆಲಿಮಾಕಸ್ಸನು ಅವನ ಮಗನೆಂದು ತಿಳಿದ ಕೂಡಲೆ, ಅವನ ಅಸಾಧಾರಣವಾದ ರೂಪಲಾವಣ್ಣಗ ಳನ್ನು ನೋಡಿ, ಅವನಲ್ಲಿ ವಿಶೇಷ ಅನುರಕ್ತಳಾದಳು. ಅವರಿಗೆ ಬೇಕಾದ ಉಪಚಾ ರಗಳಿಗೆಲ್ಲಾ ಏರ್ಪಾಡನ್ನು ಮಾಡಿ, ತನ್ನ ಮನೋರಥವು ಕೈಗೂಡುವ ಕಾಲವು ಬಂದಿತೆಂದು ತಿಳಿದುಕೊಂಡಳು, ಟೆಲಿಮಾಕಸ್‌ನ ಜೊತೆಯಲ್ಲಿದ್ದ ಮೆಂಟರಿನ ತೇಜ ಸನ್ನು ನೋಡಿದ ಕೂಡಲೆ ಈಕೆಗೆ ತುಂಬಾ ಭಯವಾಯಿತು, ಈಕೆಯು ಹಾಕಿದ ಪ್ರಶ್ನೆಗಳಿಗೆ ಟೆಲಮಾಕಸ್ಸನು ಧಾರಾಳವಾಗಿಯೂ, ಆದರವಾಗಿಯೂ, ಸಂತೋ। ಷದಿಂದಲೂ, ಉತ್ತರಗಳನ್ನು ಕೊಟ್ಟನು. ಈ ಸಂಭಾಷಣದಲ್ಲಿ ಆತನು ತುಂಬಾ ಪ್ರೀತಿಯನ್ನೂ, ಆನುರಾಗವನ್ನೂ ತೋರಿಸಿದನು. ಮೆಂಟರನ ಸಂಭಾಷಣವು ಹಾಗಿರಲಿಲ್ಲ. ಪ್ರಶ್ನೆಗೆ ತಕ್ಕ ಉತ್ತರಗಳನ್ನು ಸಂಕ್ಷೇಪವಾಗಿ ಕೊಟ್ಟು, ತನ್ನ ಮನೋಭಾವವು ಅಭೇದ್ಯವಾಗಿರುವಂತೆ ಅವನು ನಡೆದುಕೊಂಡನು. “ ನಾನು ಹಾಕತಕ್ಕ ಮಂಕುಬೂದಿಗೆ ಸ್ವಾಧೀನರಾಗದೇ ಇರತಕ್ಕ ವರೇ ಅಪೂರ್ವ ಯಲಿಸೆಸ್ಸನು ನನ್ನ ಮರುಳಿಗೆ ಸಿಕ್ಕಲಿಲ್ಲ. ಈ ಮೆಂಟರನು ಅವ ನಿಗಿಂತಲೂ ಅಸಾಧ್ಯವಾಗಿರುವಂತೆ ತೋರುತ್ತದೆ. ಈ ಟೆಲಿಮಾಕಸ್ಸನು ನನಗೆ ಅನುರೂಪನಾದ ನಾಯಕನಾಗಿರುವನು. ಸರ್ವಪ್ರಯತ್ನದಿಂದಲೂ ಇವನನ್ನು ವಶಮಾಡಿಕೊಂಡು, ಈ ಲೋಕವನ್ನೇ ಸ್ವರ್ಗಪ್ರಾಯವನ್ನಾಗಿ ಮಾಡಿಕೊಳ್ಳ ಬೇಕು” ಎಂದು ಪರ್ಯಾಲೋಚಿಸಿ, ಈ ಕಿನ್ನರಿಯು ಅವರಿಬ್ಬರಿಗೂ ಸಕಲ ಶೈತ್ಯೋಪಚಾರಗಳನ್ನು ಮಾಡುವುದಕ್ಕೆ ಆಜ್ಞೆಯನ್ನು ಮಾಡಿದಳು.

  • ಜಗದೀಶ್ವರನು ತನ್ನ ಕ್ಷೇಮಾರ್ಥವಾಗಿ ಇವರ ಹಡಗು ಮುಳುಗು ವಂತೆ ಮಾಡಿ, ಅವರನ್ನು ತನ್ನ ಅಧೀನರಾಗುವಂತೆ ಮಾಡಿರುವನು ” ಎಂದು ಅವಳು ತಿಳಿದುಕೊಂಡಳು. ಇವರನ್ನು ನೋಡಿ, ಅವಳಿಗೆ ಪರಮಾನಂದವಾ ಯಿತು. ಈ ಆನಂದಸಾಗರದಲ್ಲಿ ಈಜುತ್ತಿದ್ದಳು, ಅವರು ಹೊಸ ಉಡಿಗರ ಳನ್ನು ಹಾಕಿಕೊಂಡು, ಭೋಜನಾದಿಗಳನ್ನು ಮಾಡಿಕೊಂಡು, ವಿಶ್ರಮಿಸಿಕೊಂಡ -