ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

123 | ವತೆಯು ಬಂದಳು. ಸ್ವಲ್ಪ ಹೊತ್ತಿನಲ್ಲಿಯೇ ಮಾಯವಾದಳು. ಅವಳ ಕಣ್ಣು ಗಳಲ್ಲಿ ಬೆಂಕಿಯ ಜ್ವಾಲೆಯು ಪ್ರಜ್ವಲಿಸುತ್ತಿತ್ತು. ಅವಳ ಮೂಗಿನಿಂದ ನಿಬಿಡ ವಾದ ಹೊಗೆಯು ಹೊರಡುತ್ತಿತ್ತು, ಈ ಸಮುದ್ರದ ಅಧಿದೇವತೆಗೆ ಅವಳ ರಥವು ದಂತದ ರಥವಾಗಿತ್ತು. ಅದು ಬಹಳ ಮನೋರಂಜಕವಾಗಿತ್ತು, ಇದರ ಗಾಲಿಗಳು ಕಾಂಚನಮಯವಾಗಿದ್ದವು, ಮೊಟಾರು ಗಾಲಿಗಳು ಹೋಗುವಷ್ಟು ವೇಗವಾಗಿ ಸದರಿ ಗಾಲಿಗಳು ಹೊರಡುತ್ತಿದ್ದವು ಈ ರಧದ ಹಿಂದೆ ಅನೇಕ ನಾಗಕನ್ನಿಕೆಯರು ಬರುತ್ತಿದ್ದರು, ನಾನಾ ವಿಧವಾದ ಪುಷ್ಪಗಳಿಂದ ಪರಿಶೋಭಿತವಾದ ಅವರ ಕೂದಲುಗಳು ಮಂದಮಾರುತದಿಂದ ನರ್ತಿಸುತ್ತಿದ್ದವು, ಈ ದೇವತೆಯ ಕೈಯಲ್ಲಿ ಒಂದು ಚಿನ್ನದ ರಾಜದಂಡವು ಇತ್ತು, ಈ ರಾಜದಂಡಕ್ಕೆ ಸಮುದ್ರದ ಅಲೆಗಳು ವಿಧೇಯವಾಗಿದ್ದವು, ತೊಡೆಯ ಮೇಲೆ ತನ್ನ ಮಗುವನ್ನು ಕೂರಿಸಿಕೊಂಡು ಹಾಲನ್ನು ಕೊಡುತ್ತಿದ್ದಳು, ಅವಳ ಮುಖದಲ್ಲಿ ಗಾಂಭೀರವೂ, ಮನೋಹರ ತೆಯ ಮೂರ್ತಿಭವಿಸಿದ್ದವು. ಮಾರುತವು ಅತ್ಯಂತ ಭೀತಿಯಿಂದ ಸಂಕುಚಿತ ವಾಗಿ ಏಳುತ್ತಿದ್ದವು. ರಧವನ್ನು ನಡೆಸತಕ್ಕವಳು ಚಿನ್ನದ ಲಗಾಮುಗಳಿಂದ ಕುದುರೆಗಳನ್ನು ನಡೆಸುತ್ತಿದ್ದಳು, ಕೆಂಪು ಬಣ್ಣವುಳ್ಳ ಧ್ವಜವು ಎತ್ತಿಕಟ್ಟಲ್ಪ ಟ್ಟಿತ್ತು, ಮಂದಮಾರುತವು ಅದಕ್ಕೆ ತಗಲಿ, ರಥವು ಅಲ್ಲಾಡದೆ, ಆಕಾಶ ಮಾರ್ಗ ದಲ್ಲಿ ವಿಮಾನಗಳು ಹೇಗೆ ಹೊಗುತ್ತವೋ ಹಾಗೆ ಹೋಗುತ್ತಿತ್ತು, ರಥದ ಕುದುರೆಗಳು ಸೈಕ್ಷೆಯಾಗಿ ಹೋಗುವುದಕ್ಕೆ ಲಗಾಮಿನಿಂದ ನಿರ್ಬಂಧ ಉಂಟಾ ಗಿರುವುದೆಂದು ಅಸಮಾಧಾನದಿಂದ ಹೇವಾಕಾರವನ್ನು ಮಾಡಿಕೊಂಡು ಮುಂದು ವರಿಯುವುದನ್ನೂ, ಪ್ರಜ್ವಲಿಸುತ್ತಲಿರುವ ಅವುಗಳ ಕಣ್ಣುಗಳ ಕಾಂತಿಯನ್ನೂ ನೋಡಿ, ಜಲಚರಗಳೆಲ್ಲಾ ಭಯಭ್ರಾಂತವಾದವು. ತಿಮಿತಿಮಿಂಗಿಲಗಳೇ ಮೊದ ಲಾದವುಗಳೆಲ್ಲಾ ತಮ್ಮ ಪಾತಾಳ ಪ್ರದೇಶದಿಂದ ಮೇಲಕ್ಕೆ ಎದ್ದು, ಈ ಸಮು ದ್ರದ ಚಕ್ರವರ್ತಿನಿಯ ಸಂದರ್ಶನ ಸುಖವನ್ನು ಅನುಭವಿಸುವುದಕ್ಕೆ ಗುಂಡ ಗುಂಪಾಗಿ ಬಂದು, ಸಾಷ್ಟಾಂಗ ಪ್ರಣಾಮವನ್ನು ಮಾಡಿದವು. ಐದನೆಯ ಅಧ್ಯಾಯ. ಈ ಸಮುದ್ರದ ಅಧಿದೇವತೆಯು ಸ್ವಲ್ಪ ಹೊತ್ತಿನಲ್ಲೇ ಅದೃಶ್ಯವಾದಳು. ಕ್ರೀದ್‌ ದ್ವೀಪದ ಪರ್ವತಗಳೂ, ಸಮುದ್ರವೂ, ಆಕಾಶವೂ ಇವುಗಳೆಲ್ಲಾ ಏಕಾ ಕಾರವಾಗಿ ಕಾಣುತ್ತಿದ್ದವು, ಸ್ವಲ್ಪ ಹೊತ್ತಿನಲ್ಲಿ ಐಡಾ ಪರ್ವತದ ಶಿಖರವು ದೃಷ್ಟಿ