ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

130 ಇವನು ಸದಾ ಪರೀಕ್ಷಿಸಿ, ನಿವಾರಣೆ ಮಾಡುತ್ತಲಿರಬೇಕು, ಪ್ರಜೆಗಳ ಕಷ್ಟ ವನ್ನು ತಪ್ಪಿಸುವುದೇ ತನ್ನ ಮುಖ್ಯ ಸುಖವೆಂದು ಇವನು ಭಾವಿಸಬೇಕು, ಯಾವ ಪ್ರಭುವು ತನ್ನ ಸುಖವನ್ನು ಪರಿತ್ಯಾಗ ಮಾಡಿ, ಜನಗಳ ಸುಖವೇ ತನ್ನ ಸುಖ ವೆಂದು ಭಾವಿಸುವನೋ ಅವನು ಜಗದೀಶ್ವರನ ಪ್ರತಿನಿಧಿಯಾಗುವನು, ಈ ರೀತಿಯಲ್ಲಿ ಧರ್ಮಶಾಸ್ತ್ರವನ್ನು ವಿಧಿಸಿ, ಮೈನಾಸನು ಈ ಧರ್ಮಗಳಿಗೆ ಅನುಸಾರ ವಾಗಿ ನಡೆಯದಿದ್ದರೆ, ತನ್ನ ಮಕ್ಕಳಿಗೆ ಪ್ರಭುತ್ವವನ್ನು ಕೊಡಕೂಡದೆಂದು ವಿಧಾ ಯಕ ಮಾಡಿರುವನು, ತನ್ನ ಕುಟುಂಬದವರ ಮೇಲೆ ಇವನಿಗೆ ಎಷ್ಟು ವಿಶ್ವಾಸ ವಿತ್ತೊ ಅದಕ್ಕಿಂತಲೂ ತನ್ನ ಪ್ರಜೆಗಳ ಮೇಲೆ ಇವನಿಗೆ ವಿಶ್ವಾಸವು ಹೆಚ್ಚಾ ಗಿತ್ತು, ಹೀಗೆ ಇದ್ದು ದರಿಂದಲೇ ಮೈನಾಸನು ಜಗದೀಶ್ವರನ ಅವತಾರವೆಂದು ಭಾವಿಸಲ್ಪಟ್ಟನು. ಇವನ ಧರ್ಮವು ಎಲ್ಲಿ ಅನುಷ್ಠಾನದಲ್ಲಿರುತ್ತದೋ ಅಲ್ಲಿ ಸತ್ಯವೂ, ಧರ್ಮವೂ ರೂಢಮೂಲವಾಗಿರುವುವು. ಅಲ್ಲಿ ಲಕ್ಷ್ಮಿಯು ತಾಂಡ ವಾಡುವಳು, ಅಲ್ಲಿ ಜಗದೀಶ್ವರನು ವಾಸವಾಗಿರುವನು ಅಲ್ಲಿ ದುಷ್ಟರು ಇರು ವುದಿಲ್ಲ. ಶಿಷ್ಟರು ಸಕಲ ಸಾಮ್ರಾಜ್ಯವನ್ನೂ ಅನುಭವಿಸುತ್ತಲಿರುವರು. - ಈ ರೀತಿಯಲ್ಲಿ ಮೆಂಟರನು ಹೇಳಿದ ಮೈನಾಸನ ಧರ್ನುಗಳನ್ನು ಕೇಳುತ್ತಾ, ನಾವು ಈ ಕ್ರೀಟ್ ದ್ವೀಪದ ತೀರಕ್ಕೆ ಬಂದೆವು. ಈ ವೃತ್ತಾಂತವನ್ನು ಕೇಳು ವಾಗ್ಗೆ, ನಮ್ಮ ಮನಸ್ಸೆಲ್ಲಾ ಈ ಧರ್ಮಗಳಲ್ಲಿ ಲೀನವಾಗಿತ್ತು, ಈ ವೃತ್ತಾಂತವು ಮುಗಿಯುವುದರೊಳಗಾಗಿ ಕ್ರೀಟ್ ದ್ವೀಪದ ತೀರಕ್ಕೆ ನಾವು ಬಂದೆವು, ನದರಿ ತೀರದಲ್ಲಿ ಡೀಡಲಸ್‌ನಿಂದ ರಚಿಸಲ್ಪಟ್ಟ ಯಾವ ದಿಕ್ಕಿಗೆ ಹೋದಾಗ್ಯೂ, ಮಾರ್ಗ ವನ್ನು ತಪ್ಪಿಸುವ ಶಕ್ರಬಿಂಬವು ನಮ್ಮ ದೃಷ್ಟಿ ಪದಕ್ಕೆ ಬಿದ್ದಿ ತು, ಈಜಿಪ್ಟ್ ದೇಶ ದಲ್ಲಿ ನಾವು ನೋಡಿದ ಚಕ್ರಬಿಂಬಕ್ಕಿಂತಲೂ ಇದು ದೊಡ್ಡದಾಗಿತ್ತು, ಈ ವಿಚಿತ್ರವಾದ ಕಟ್ಟಡವನ್ನು ನಾವು ನೋಡುತ್ತಿದ್ದಾಗ, ಬಹು ಜನಗಳು ಗುಂಪುಕಟ್ಟಿ ಕೊಂಡು, ನಮ್ಮ ಹಡಗಿನ ಬಳಿಗೆ ಬಂದರು. ಇಷ್ಟು ಗುಂಪು ಸೇರುವುದಕ್ಕೆ ಕಾರಣವೇನೆಂದು ನಾನು ಕೇಳಿದೆನು, ಆ ಗುಂಪಿನಲ್ಲಿ ಮುಖಂಡನಾಗಿದ್ದ ನಾಸಿ ಕೇಟೀಸ್ ಎಂಬುವನು ಹೇಳಿದ್ದೇನೆಂದರೆ :- « ಮೈನಾಸ್ ಎಂಬುವನ ಮರಿಮಗನಾದ ಇಡೂಮಿನಿಯಸ್ ಎಂಬು ವನು ಟ್ರಾಯ್ ದೇಶಕ್ಕೆ ಗ್ರೀಸ್ ದೇಶದಿಂದ ಪ್ರಯಾಣ ಮಾಡಿದ ಪ್ರಭುಗಳ ಜೊತೆಯಲ್ಲಿ ಹೋಗಿದ್ದನು, ಸದರಿ ಪಟ್ಟಣವು ನಾಶವಾದ ಮೇಲೆ, ಅವನು ಕ್ರೀಟ್ .ದೇಶಕ್ಕೆ ಹೊರಟನು. ದಾರಿಯಲ್ಲಿ ಬಲವಾದ ಬಿರುಗಾಳಿಯು ಉಂಟಾ ಯಿತು, ಅಥವ ಹಡಗಿನಲ್ಲಿದ್ದವರೆಲ್ಲಾ ಹಡಗನ್ನು ನಡೆಸುವುದರಲ್ಲಿ ಬಹಳ ನಿಪುಣ ರಾಗಿದ್ದಾಗ್ಯೂ, ಹಡಗು ಮುಳುಗಿ ಹೋಗುವುದೆಂಬ ಭಯವು ಅವರಿಗೆ ಉಂಟಾ