ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

131 ಯಿತು. ಮರಣವು ತಪ್ಪುವುದಿಲ್ಲವೆಂದು ಎಲ್ಲರೂ ತಿಳಿದುಕೊಂಡರು, ಸಮು ದ್ರವು ತಮ್ಮನ್ನು ನುಂಗಿಬಿಡುವುದೆಂದು ಎಲ್ಲರಿಗೂ ತೋರಿತು, ಎಲ್ಲರೂ ಬಹಳ ವ್ಯಸನವುಳ್ಳವರಾದರು, ಅಪಮೃತ್ಯುವಿನಿಂದ ಮರಣ ಉಂಟಾದರೆ, ಅಂಥಾನ ರಿಗೆ ಸದ್ದತಿಯುಂಟಾಗುವುದಿಲ್ಲವೆಂದು ಅವರ ಧರ್ಮಶಾಸ್ತ್ರದಲ್ಲಿ ಹೇಳಲ್ಪಟ್ಟಿರು ವುದು, ಇಂಥಾ ಅಪಮೃತ್ಯುವಿಗೆ ಗುರಿಯಾದೆವೆಲ್ಲಾ ಎಂದು ಅವರು ವಿವಾದ ವನ್ನು ಪಡುತ್ತಿದಾಗ, ಇಡುಮಿನಿಯಸ್‌ನು ಕೈಗಳನ್ನು ಆಕಾಶಕ್ಕೆ ಎತ್ತಿ, ಜಗದೀ ಶ್ವರನನ್ನು ಕುರಿತು, “ ಎಲೆ ಸೃಷ್ಟಿಸ್ಥಿತಿಪ್ರಳಯಕರ್ತನೇ,-ಈಗ ಸನ್ನಿಹಿತವಾಗಿ ರುವ ಅಪಮೃತ್ಯುವಿನ ದೆಸೆಯಿಂದ ಮರಣವನ್ನು ತಪ್ಪಿಸು. ಈಗ ಸಮುದ್ರ ದಲ್ಲಿ ಮುಳುಗಿ ಸಾಯುವುದನ್ನು ನೀನು ತಪ್ಪಿಸಿದರೆ, ನನ್ನ ದೇಶಕ್ಕೆ ಹೋದ ಕೂಡಲೇ, ಯಾವ ಪ್ರಾಣಿಯು ಮೊದಲು ನನ್ನ ಬಳಿಗೆ ಬರುವುದೋ ಅದನ್ನು ನಿನಗೆ ಬಲಿ ಕೊಡುತ್ತೇನೆ” ಎಂದು ಪ್ರಾರ್ಥಿಸಿದನು. ದೈವಯೋಗದಿಂದ ಗಾಳಿಯು ನಿಂತಿತು. ಅವನ ಹಡಗಿಗೆ ಅಪಾಯವು ತಪ್ಪಿತು. ಕ್ರೀಟ್‌ ದ್ವೀಪ ವನ್ನು ಅವನು ತಲಪಿದನು.” - ಇವನು ಹಡಗನ್ನು ಇಳಿದ ಕೂಡಲೇ, ಇವನ ಪ್ರೀತಿಗೆ ಅತ್ಯಂತ ಪಾತ್ರ ನಾದ ಇವನ ಮಗನು ಬಂದು, ಅವನನ್ನು ಎದುರುಗೊಂಡು, ಅವನ ಆಲಿಂಗನ ಸುಖವನ್ನು ಅಪೇಕ್ಷಿಸಿದನು, ಕೂಡಲೇ ಈ ಇಡುಮಿನಿಯಸ್ಸನು ದುಸ್ಸಹ ವಾದ ವ್ಯಸನದಿಂದ ವಜ್ರಾಯುಧದಿಂದ ಹೊಡೆಯಲ್ಪಟ್ಟಂತ ನೆಲಕ್ಕೆ ಬಿದ್ದ ನು. ನಾನಾ ವಿಧವಾದ ಶೈತ್ಯೋಪಚಾರಗಳಿಂದ ಅವನಿಗೆ ಪ್ರಜ್ಞೆಯು ಬರುವಂತ ಮಾಡಲ್ಪಟ್ಟಿತು, ಬದುಕಿರುವುದಕ್ಕಿಂತ ಸಾಯುವುದು ಮೇಲೆಂದು ಅಂದು ಕೊಂಡನು, ತನಗೆ ಉಂಟಾದ ಮೂರ್ಛಿಯಿಂದ ಸುತ್ತಿದ್ದರೆ ಚನ್ನಾಗಿತ್ತಂಬ ಭಾವನೆಯು ಅವನಿಗೆ ಉಂಟಾಯಿತು, ಮುಂದಕ್ಕೆ ಹೋಗುವುದಕ್ಕೆ ಹಿಂತೆಗೆ ದನು, “ ದುರ್ದೆವವೇ ! ನನಗೆ ಏನು ಗತಿ !” ಎಂದು ಅಳುವುದಕ್ಕೆ ಉಪ ಕ್ರಮಿಸಿದನು, ನನ್ನ ಮಗನೇ ಮೊದಲು ನನ್ನ ದೃಷಿಗೆ ಬೀಳುವಂತೆ ಆಯಿ ತಲ್ಲಾ ! ದೇವರು ನನ್ನನ್ನು ಪರೀಕ್ಷಿಸುತ್ತಲಿದಾನೆ. ಬದುಕಿ ಪುತ್ರಶೋಕವನ್ನು ಅನುಭವಿಸುವುದಕ್ಕಿಂತ ಸಾಯುವುದು ಮೇಲು ಎಂದುಕೊಂಡನು. ಈ ಅವಸ್ಥೆ ಯನ್ನು ನೋಡಿ, ಇಡುಮಾನಿಯಸ್ಥನನ್ನು ಕುರಿತು, ಅವನ ಮಗಳು ಹೇಳಿದ್ದ ನೆಂದರೆ :- 1 ಎಲೆ ಜನಕರೇ-ಈ ಅಪಾರವಾದ ದುಃಖಕ್ಕೆ ಕಾರಣವೇನು? ನೀನು ಈ ದೇಶವನ್ನು ಬಿಟ್ಟು, ಬಹುಕಾಲವಾಯಿತು. ನಿನ್ನ ದರ್ಶನಸುಖವನ್ನು ಅನುಧ ವಿಸಬೇಕೆಂದು ಬಂದ ನನಗೆ ನಿನ್ನ ಸ್ಥಿತಿಯನ್ನು ನೋಡಿದರೆ ತುಂಬಾ ವ್ಯಸನವಾ