ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

193 ಸಾಧಕವಾದರೆ ನಾನು ಧನ್ಯನಾಗಲಿಲ್ಲವೇ ? ಇದಕ್ಕೆ ವ್ಯಸನವೇತಕ್ಕೆ ? ಮರ ಣಕ್ಕೆ ನಾನು ಭಯಪಡತಕ್ಕವನಲ್ಲ, ನಿಮ್ಮನ್ನೆಲ್ಲಾ ಬದು ಕಿಸುವುದಕ್ಕೆ ನಾನು ಸಾಧನಭೂತನಾದ್ದರಿಂದ, ನಾನು ಧನ್ಯನಾಗಲಿ : ವ್ಯಸನವನ್ನು ಬಿಡು, ಕತ್ತಿಯನ್ನು ತೆಗೆದುಕೊ ನನ್ನನ್ನು ಸಂಹರಿಸು, ಜಗದೀಶ್ವರನಿಗೆ ಬಲಿಯನ್ನಾಗಿ ಮಾಡು. ಅವನು ತಪ್ತನಾಗಲಿ' ನಿನ್ನ ಪ್ರತಿಜ್ಞೆಯು ಪರಿಪೂರ್ಣವಾಗಲಿ, ಎಂದು ಹೇಳಿದನು. ಈ ಮಾತನ್ನು ಕೇಳಿ, ತುಂಬಾ ವಿಷಾದವಾದಾಗ್ಯೂ, ಪ್ರತಿಜ್ಞೆಯನ್ನು ಪರಿಪಾ ಲಿಸುವುದು ತನಗೆ ಧರ್ಮವೆಂದು ತಿಳಿದುಕೊಂಡು, ಮಗನು ಹೇಳಿದಂತೆ ಕತ್ತಿ ಯನ್ನು ತೆಗೆದುಕೊಂಡು, : ಎಲೈ ಜಗದೀಶ್ವರನೇ-ನಾನು ಮಾಡಿದ ಪ್ರತಿಜ್ಞೆ ಯು ಅನುಲ್ಲಂಘನೀಯವಾದದು, ನನಗೆ ಪ್ರಾಣಪ್ರಾಯನಾದ ಮಗನನ್ನು ನಿನಗೆ ಒಪ್ಪಿಸಿರುತ್ತೇನೆ' ಎಂದು ಕತ್ತಿಯಿಂದ ಒಂದೇ ಏಟಿನಲ್ಲಿ ಮಗನ ಶಿರಚ್ಛೇದ ವನ್ನು ಮಾಡಿದನು. ಅದೆ ಕತ್ತಿಯಿಂದ ತನ್ನನ್ನು ಹೊಡೆದುಕೊಳ್ಳಬೇಕೆಂದು ಪ್ರಯತ್ನ ಮಾಡಿದನು. ಅಷ್ಟರಲ್ಲಿಯೇ ಸಮೀಪದಲ್ಲಿದ್ದವರು ಆತ್ಮಹತ್ಯವನ್ನು ತಪ್ಪಿ ಸದರು ಆದಾಗ್ಯೂ ದೇಹದ ಮೇಲೆ ಪ್ರಜ್ಞೆಯಿಲ್ಲದೆ, ಅವನು ನೆಲಕ್ಕೆ ಬಿದ್ದನು. ಅವನಿಗೆ ಪ್ರಜ್ಞೆಯು ತಪ್ಪಿತು. ಶೈತ್ಯೋಪಚಾರ ಬಲದಿಂದ ಅವನಿಗೆ ಪ್ರಜ್ಞೆಯು ಬಂದಿತು. ಆದರೆ, ಬುದ್ಧಿ ವಿಕಲ್ಪವು ಉಂಟಾಯಿತು. ದುಃಬಪರವಶತೆಯಿಂದ ಸಿಕ್ಕಿದ ಕಡೆ ತಿರುಗುತ್ತಾ, ನನ್ನ ಮಗನು ಎಲ್ಲಿ ? ಎಂಬದಾಗಿ ಕೆ೦ಳುತ್ತಾ, ಉನ್ನ ತಾವಸ್ಥೆ ಯನ್ನು ಹೊಂದಿದನು, ಮಗನನ್ನು ಕೊಂದದ್ದಕ್ಕೆ ಜಗದೀಶ್ವರನ ಇವನಿಗೆ ತಕ್ಕ ಶಿಕ್ಷೆಯನ್ನು ಮಾಡಿರುವನೆಂದು ಜನಗಳು ಹೇಳುವುದಕ್ಕೆ ಉಪಕ್ರಮ ಮಾಡಿದರು, ಪುತ್ರಹ ತೃಮಾಡಿದವನೆಂದು ಇವನನ್ನು ಜನಗಳು ಬಹಿರಂಗವಾಗಿ ನಿಂದಿಸು ' ದಕ್ಕೆ ಉಪ ಕ್ರಮಿಸಿದರು, ಪ್ರಭುವಾಗಿರುವುಕ್ಕೆ ಇವನು ಅನರ್ಹನೆಂದು ಆ ೯ : ಸದ ನಿವಾ ಸಿಗಳೆಲ್ಲರೂ ಇವನಲ್ಲಿ ತಿರಸ್ಕಾರವನ್ನು ತೋರಿಸಿದರು, ಇವನ : 'ರಲ್ಲಿ ಕಲ ವರು ಇವನನ್ನು ಕರೆದುಕೊಂಡು ಹೋಗಿ ಹಡಗಿಗೆ ಬಿಟ್ಟ ರು, ದ್ವೀಪದಿಂದ ಈ ಹಡಗು ಹೆಸೀರಿಯಾ ಪ್ರಾಂತ್ಯಕ್ಕೆ ಹೊರಟಿತು. ಈ ಮಧ್ಯೆ ಕ್ರೀಟ್ ದ್ವೀಪದ ನಿವಾಸಿಗಳು ಇಡುವಿಾನಿಯ ಸೃನಿಗೆ ಬದ ಲಾಗಿ, ಒಬ್ಬ ಪ್ರಭುವನ್ನು ಚುನಾಯಿಸಿಕೊಳ್ಳಬೇಕೆಂದು ನಿರ್ಮಿಸಿದರು, ಇದಕ್ಕಾಗಿ ಪ್ರತಿ ಒಂದು ಪಟ್ಟಣದಿಂದಲೂ ಮಹಾಜನಗಳು ಕರೆಸಲ್ಪಟ್ಟರು, ಆ ದ್ವೀಪದಲ್ಲಿ ಮುಖಂಡರಾದ ವಿದ್ವಾಂಸರೆಲ್ಲಾ ಸೇರಿ, ಪ್ರಭುವಾಗಿ ಚುನಾಯಿಸ ಬೇಕಾದರೆ, ಏನು ಮಾಡಬೇಕೆಂದು ವಾಲೋಚಿಸಿದರು, ಪ್ರಭುಪದವಿಗೆ