ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

134 ಚುನಾಯಿಸಲ್ಪಡತಕ್ಕವನು ದೇಹಶಕ್ತಿಯನ್ನೂ, ಬುದ್ಧಿಶಕ್ತಿಯನ್ನೂ ವಿಶೇಷವಾಗಿ ಪಡೆದಿರಬೇಕೆಂದು ನಿಷ್ಕರ್ಷೆ ಮಾಡಲ್ಪಟ್ಟಿತು, ವ್ಯಾಯಾಮಗಳಲ್ಲಿಯೂ, ಧೈಯ್ಯದ ಲ್ಲಿಯೂ, ಬಲದಲ್ಲಿಯೂ, ಚಟುವಟಿಕೆಯಲ್ಲಿಯೂ, ಧರ್ಮಶಾಸ್ತ್ರಗಳಲ್ಲಿಯೂ ಯಾರು ಸರ್ವೋತ್ತಮರೋ, ಧರ್ಮಗಳು ಯಾರ ಅನುಷ್ಠಾನದಲ್ಲಿ ಇರುವುವೋ ಅವರು ಚುನಾಯಿಸಲ್ಪಡಬೇಕೆಂದು ನಿಷ್ಕರ್ಷೆಯಾಯಿತು. ಈ ನಿಷ್ಕರ್ಷೆಗೆ ಅನುಸಾರ ವಾಗಿ ಮೊದಲು ದೇಹಶಕ್ತಿಯನ್ನು ಪರೀಕ್ಷಿಸುವುದಕೋಸ್ಕರ ಆಟಪಾಟಗಳ ಕ್ಲಯ, ಅಂಗಸಾಧನೆಗಳಲ್ಲಿಯ ಪೊಟಾಪೋಟಿಯು ಏರ್ಪಡಿಸಲ್ಪಟ್ಟಿತು, ಪ್ರಭು ಪದವಿಗೆ ಉಮೇದುವಾರರಾಗತಕ್ಕೆ ಜನಗಳೆಲ್ಲಾ ಸೇರಿಸಲ್ಪಟ್ಟರು, ಒಂದು ದೊಡ್ಡ ಅಖಾಡಾವು ಏರ್ಪಡಿಸಲ್ಪಟ್ಟಿತು, ಇವರ ಪೋಟಾಫೋಟಿಯನ್ನು ನೋ ಡುವುದಕ್ಕೆ ಅಕ್ಟೋಪಲಕ್ಷ ಪ್ರೇಕ್ಷಕರು ಸೇರಿದರು, ಈ ಪೋಟಾ ಪೊಟಿಗೆ ನೇರಬೇಕೆಂದು ಅಧಿಕಾರಿಗಳು ನಮಗೆ ಅಪ್ಪಣೆ ಕೊಡಿಸಿದರು, ಮೆಂಟರನು ವೃದ್ದನಾದ್ದರಿಂದ, ತಾನು ಪೊಟಾಪೋಟಿಗೆ ಸೇರುವುದಿಲ್ಲವೆಂದು ಹೇಳಿದನು. ಹೇಜಲ್‌ನ ದೇಹಸ್ಥಿತಿಯು ಸರಿಯಾಗಿರಲಿಲ್ಲ, ಆದುದರಿಂದ ಅವನೂ ಸೇರಲಿಲ್ಲ. ನಾನು ಪ್ರಾಯಸ್ಥನಾಗಿಯೂ, ಬಲಿಷ್ಠ ನಾಗಿಯೂ ಇದ್ದುದರಿಂದ, ನನ್ನನ್ನು ನೇರ ಬೇಕೆಂದು ಬಲಾತ್ಕಾರ ಮಾಡಿದರು, ನಾನು ತಪ್ಪಿಸಿಕೊಳ್ಳುವುದಕ್ಕೆ ಆಗಲಿಲ್ಲ. ಸೇರಬಹುದೆಂದು ಮೆಂಟರನು ಅನುಚ್ಛೆಯನ್ನು ಕೊಟ್ಟನು, ನಾನು ಈ ಪೋಟಾ ಪೋಟಿಗೆ ಸೇರಿದೆನು, ನಾನು ಬಟ್ಟೆಗಳನ್ನು ತೆಗೆದು, ಅಂಗಸಾಧನೆಗೆ ಉಚಿತವಾದ ಚಡ್ಡಿ ಮೊದಲಾದವುಗಳನ್ನು ಹಾಕಿಕೊಂಡು, ಅಖಾಡಕ್ಕೆ ಇಳಿದ ಕೂಡಲೇ, ಬಾಲ್ಯದಲ್ಲಿ ನನ್ನನ್ನು ನೋಡಿದ್ದ ವರು ಯಾರೋ ಒಬ್ಬರು ನಾನು ಇಥಾಕಾ ದೇಶದ ಪ್ರಭುವಾದ ಯಲಿಸಸ್ಸನ ಮಗನೆಂದು ಹೇಳಿದರು, ಊರೆಲ್ಲಾ ಹರಡಿಕೊಂಡಿತು, ಮೊದಲು ಕುಸ್ತಿಗೆ ಪ್ರಾರಂಭವಾಯಿತು, ರೋಡ್ಸ್‌ ದೇಶದ ವನೊಬ್ಬ ಯುವಕನು ತನ್ನೊಡನೆ ಕುಸ್ತಿಗೆ ಬಂದವರನ್ನೆಲ್ಲಾ ಕೆಡವಿ, ಅದ್ವಿತೀ ಯನೆನಿಸಿಕೊಂಡಿದ್ದನು ಅವನು ಆಜಾನುಬಾಹುವಾಗಿಯೂ, ಅದ್ಭುತವಾದ ದೇಹ ಶಕ್ತಿಯುಳ್ಳವನಾಗಿಯೂ ಇದ್ದನು, ಅವನ ನರಗಳು ಉಕ್ಕಿನ ಸಲಾಕಿಗಳಂತೆ ಇದ್ದವು. ಎಲ್ಲರೂ ಅವನಿಂದ ಪರಾಜಿತರಾದರು, ನಾನು ಒಬ್ಬನು ಮಾತ್ರ ಉಳಿದಿದ್ದೆನು, ನನ್ನನ್ನು ನೋಡಿ, ಮಶಕವನ್ನು ನೋಡಿದ ಆನೆಗೆ ಎಂಥಾ ತಿರ ಸ್ಮಾರವು ಉಂಟಾಗುವುದೊ ಅಂಥಾ ತಿರಸ್ಕಾರವನ್ನು ಇವನು ನನ್ನ ವಿಷಯ ದಲ್ಲಿ ತೋರಿಸಿದನು. ಆದಾಗ್ಯೂ, ಭಯಪಡದೆ, ನಾನು ಕುಸ್ತಿಗೆ ಸಿದ್ಧವಾದೆನು, ಸ್ವಲ್ಪ ಹೊತ್ತು ನಾವಿಬ್ಬರೂ ಹೆಣಗಾಡಿದೆವು, ನಮ್ಮ ಶಕ್ತಿಯನ್ನೆಲ್ಲಾ ಬಿಟ್ಟು, ಒಬ್ಬರನ್ನು ಒಬ್ಬರು ಗೆಲ್ಲಬೇಕೆಂಬ ಹುಮ್ಮಸ್ಸಿನಿಂದ ಒಬ್ಬರನ್ನು ಒಬ್ಬರು