ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

137 ಈ ಜೂಜು ಮುಗಿದ ಕೂಡಲೇ, ಒಂದು ಉದ್ಯಾನವನದಲ್ಲಿ ಸೇರಿಸಲ್ಪಟ್ಟಿದ್ದ ಒಂದು ಮಹಾ ಸಭೆಗೆ ಬರಬೇಕೆಂದು ಆಜ್ಞೆಯಾಯಿತು, ಮೈನಾಸನ ಧರ್ಮ ಗಳಲ್ಲಿ ಪ್ರವೀಣರಾದ ಧರ್ಮಶಾಸ್ತ್ರಜ್ಞರು ಅಲ್ಲ ಸೇರಿದ್ದರು, ಮೇಲೆ ಹೇಳಿದ ವ್ಯಾಯಾಮರೂಪವಾದ ಪೊಟಾಪೊಟಿಗಳಿಗೆ ಸೇರಿದ್ದವರು ಮಾತ್ರ ಅಲ್ಲಿಗೆ ಬಿಡಲ್ಪಟ್ಟರು, ಅಲ್ಲಿಗೆ ನಾವೂ ಹೋದೆವು, ನಮ್ಮನ್ನು ಪರೀಕ್ಷೆ ಮಾಡುವುದಕ್ಕೆ ಅಲ್ಲಿ ಕುಳಿತಿದ್ದ ಸಕಲ ವಿದ್ಯಾವಿಶಾರದರಾದ ಧರ್ಮಶಾಸ್ತ್ರಜ್ಞರೆಲ್ಲರೂ ಬಹಳ ವೃದ್ದರಾಗಿಯೂ, ತೇಜಸ್ವಿಗಳಾಗಿಯೂ ಇದ್ದರು, ಅವರನ್ನು ನೋಡಿದ ಕೂಡ ಲೇ, ಹೇಳಲಸದಳವಾದ ಭಕ್ತಿಯು ನನಗೆ ಹುಟ್ಟಿತು. ಭಕ್ತಿ ಪುರಸ್ಸರವಾಗಿ ಅವರಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿದೆನು. ಅವರ ಆಕೃತಿಗೆ ಸಮಾ ನವಾದ ದೇಹಕ್ಕಿಯು ಅವರಿಗೆ ಇತ್ಯ, ಅವರ ಗಾಂಭೀರವು ಅವರ ವಿದ್ಯ ತ್ರಿಗೆ ಸಮಾನವಾಗಿತ್ತು, ಎಲ್ಲರೂ ದೀರ್ಘವಾದ ಗಡ್ಡಗಳುಳ್ಳವರಾಗಿದ್ದ ರು. ಅವು ಗಳಲ್ಲಿ ಒಂದು ಕರಿ ಕೂದಲೂ ಕೂಡ ಇರಲಿಲ್ಲ, ಅವರ ಹಣೆಯು ವಿಶಾಲವಾ ಗಿತ್ತು. ಮುಖವು ಚಂದ್ರಬಿಂಬದಂತೆ ಆಹ್ಲಾದಕರವಾಗಿತ್ತು, ಮೂಗು ಚಂಪ ಕದಂತೆಯೂ, ಕಿವಿಗಳು ಕನುಲಪತ್ರದಂತೆಯ ಇದ್ದವು, ಕಣ್ಣುಗಳಿಂದ ಮನೋಹರವಾದ ಚಂದ್ರಿಕೆಯು ಹೊರಡುತ್ತಿತ್ತು ಅವರ ಬಾಯಿನಿಂದ ಬರ ತಕ್ಕ ಪ್ರತಿ ಒಂದು ಶಬ್ದ ಭೂ ಪೂರ್ವಭಾವಿಯಾಗಿಯೇ ಪರಾಲೋಚಿಸಲ್ಪಟ್ಟ ವಿಷ ಯಗಳನ್ನು ಸ್ಪಷ್ಟವಾಗಿ ತಿಳಿಸುವುದಕ್ಕೆ ಹೇಗಿರಬೇಕೊ ಆ ಪ್ರಕಾರ ಇರುತ್ತಿತ್ತು. ಭಿನ್ನಾಭಿಪ್ರಾಯಗಳು ಬಂದಾಗ, ಅವರ ಸಂಭಾಷಣೆಯಲ್ಲಿ ಅವರ ಕೂಲಂಕಷ ವಾದ ಪ್ರಜ್ಞೆಯು ಗೊತ್ತಾಗುತ್ತಿತ್ತು. ಅವರ ವಾಕ್ಯಾರ್ಥಗಳನ್ನು ನೋಡಿದರೆ ವ್ಯಾನರಗರವವಾದ ತಪಸ್ಸನ್ನು ಎಷ್ಟು ಮಟ್ಟಿಗೆ ಮಾಡಿ, ಅವರು ಸಿದ್ಧಿಯನ್ನು ಹೊಂದಿದ್ದರೂ ಅದು ಗೊತ್ತಾಗುತ್ತಿತ್ತು, ಈ ಎಲ್ಲಾ ಗುಣಾತಿಶಯಗಳಿಗಿಂ ತಲೂ ಇವರಲ್ಲಿ ತೋರುತ್ತಿದ್ದ ಶಾಂತಿಯ ಧಸಿಫಿಕ್ ಸಾಗರದಂತೆ ಕಾಣುತ್ತಿತ್ತು ಆತುರವೂ, ದುಡುಕೂ ಲೇಶವಾದರೂ ಇವರಲ್ಲಿ ಕಾಣಲಿಲ್ಲ. ವಿವೇಕನಿಧಿಗಳಿಗೆ ಇವರೇ ದ್ರಷ್ಟಾಂತವಾಗಿದ್ದರು. ದೇಹವನ್ನೂ, ಮನಸ್ಸನ್ನೂ ದಂಡಿಸಿ, ದೀರ್ಘ ನಾದ ತಪಸ್ಸಿನಿಂದ ಇಂದ್ರಿಯಗಳನ್ನೂ, ಬುದ್ಧಿಯನ್ನೂ ಹೇಗೆ ಹತೋಟಿಯಲ್ಲಿ ಇಟ್ಟುಕೊಳ್ಳಬೇಕೋ ಹಾಗೆ ಇಟ್ಟು ಕೊಂಡಿದ್ದರು, ಜಿತೇಂದ್ರಿಯರೆಂಬ ಬಿರುದಿಗೆ ಇವರು ಅರ್ಹರಾಗಿದ್ದರು, ವಸಿಷ್ಠಾದಿ ಹಿಂದೂ ಮಹರ್ಷಿಗಳ ವೃತ್ತಾಂತವನ್ನು ನಾನು ಕೇಳಿ ಇದ್ದೆನು. ಅದಕ್ಕೆ ದೃಷ್ಟಾಂತವು ಈಗ ನನ್ನ ದೃಷ್ಟಿ ಪಥಕ್ಕ, ಬುದ್ದಿ ಸಧಕ್ಕೂ ಬಿದ್ದವು, ಇವರನ್ನು ನೋಡಿದ ಕೂಡಲೇ, ವಿಲಕ್ಷಣವಾದ 18 ..