ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

139 ೬ ಮಾಡುತ್ತಾ, ಬೇಕಾದ ವಿಷಯ ಸುಖಗಳಲ್ಲಿ ಮುಳುಗಿ ತೇಲುತ್ತಾ ಇರುವನೂ, ಅವನು ಸ್ವತಂತ್ರನೆಂದು ಇನ್ನೊಬ್ಬನು ಹೇಳಿದನು. ಬಂಧವಿಮೋಶನವನ್ನು ಹೊಂದಿದ ದಾಸನು ಸ್ವತಂತ್ರನೆಂದು ಮತ್ತೊಬ್ಬನು ಹೇಳಿದನು. ಸಕಲ ಬಂಧ ವಿಮೋಚನೆಯೂ ಮರಣದಿಂದ ಉಂಟಾಗುವುದೆಂಬದಾಗಿಯೂ, ದೇಹವನ್ನು ಬಿಟ್ಟವನೇ ಸ್ವತಂತ್ರನೆಂಬದಾಗಿಯೂ ಮತ್ತೊಬ್ಬನು ಹೇಳಿದನು. ಹೀಗೆ ಅನೇ ಕರು ಅನೇಕ ವಿಧವಾದ ಉತ್ತರಗಳನ್ನು ಕೊಟ್ಟರು. ಆಖೈರಿನಲ್ಲಿ ನನ್ನ ಸರ ದಿಯು ಬಂದಿತು, ನಾನು ಹೇಳಿದ್ದೆನೆಂದರೆ :- (( ಯಾರು ದುರ್ವಿಷಯನು ಾರಕ್ಕೆ ತಂದ ಬದ್ಧರಾಗಿರುವುದಿಲ್ಲವೋ, ಯಾರು ಅರಿಷಡ್ವರ್ಗಗಳಿಗೆ ಅಧಿನರಾಗಿರುವುದಿಲ್ಲವೋ, ಯಾರು ಕಾರಾಗೃಹಗಳಲ್ಲಿ ಯ ಕೂಡ ತಪೋವನದಲ್ಲಿ ಹೇಗೋ ಹಾಗೆ ಸುಖವಾಗಿರಬಲ್ಲರೋ, ಯಾರು ಮನೋವಾಕ್ಕೆ ರ್ಮಗಳಲ್ಲಿ ಪರಿಶುದ್ಧರಾಗಿರುನರೂ, ಯಾರು ಪರಿಣಾಮ ಫಲ ಳನ್ನು ಸತ್ಕಾಲೋಚಿಸಿ ಧರ್ಮಗಳನ್ನು ಉಲ್ಲಂಘಿಸದೆ ಕೆಲಸ ಮಾಡುವರೋ, ಯಾರು ಆಸ್ತಿಕರಾಗಿರುವರೊ, ದಾರ, ನಾಸ್ತಿಕ ಬುದ್ದಿಯು ಇರುವುದಿಲ್ಲವೋ, ಭಯಕ್ಕೂ ಆಸೆ, ಅಧಿಕಾರಕ್ಕೂ ಅನನಾಗದೆ ಸುನಸ್ಕತಿಗನುಸಾರವಾಗಿ ಕೆಲಸ ಮಾಡುವುದು ಯಾರಿಗೆ ಅಧ್ಯಾನವಾಗಿರುವುದೊ, ಯಾವ ದುರಾಶಾಪಾಶ ಗಳಿಂದ ಯಾರು ಬದ್ಧರಾಗಿರುವುದಿಲ್ಲ , ಸಕಲ ವಿಷಯಗಳಲ್ಲಿಯೂ ನಿರ್ಲಿ ಸ್ಥರಾಗಿರುವರೋ ಅವರು ಸ್ವತಂತ್ರರಾಗಿಯೂ, ಉಳಿದವರೆಲ್ಲಾ ಪರತಂತ್ರ ರೆಂಬವಾಗಿಯೂ ನಾನು ಹೇಳಿದೆನು.” ಈ ಮಹರ್ಷಿಗಳೆಲ್ಲರೂ ಮಂದಹಾಸ :ರ್ವಕವಾಗಿ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಿ, ನಾನು ಹೇಳಿದ್ದನ ಮೈನಾಸನ ಧರ್ಮಶಾನ್ಯ ವಿಧಿಗಳೊ ಡನೆ ಹೋಲಿಸಿಕೊಂಡರು, ಈ ಉತ್ತರ ವ್ರ ಸಮುರ್ದಕವಾಗಿರುವುದೆಂದು ಅವರು ನನಗೆ ಅಪ್ಪಣೆ ಕೊಡಿಸಿದರು. - ಅನಂತು ಎರಡನೇ ಪ್ರಶ್ನೆಯ ಕೆಸಲ್ಪಟ್ಟಿತು. ಲೋಕದಲ್ಲಿ ನಿರ್ಭಾಗ್ಯರು ಯಾರು ? ಯಾರಿಗೆ ಇಹಪರಸೌಖ್ಯಗಳಿರಡೂ ದೊರೆಯುವುದಿಲ್ಲ ಎಂಬುವುದೇ ಈ ಪ್ರಶ್ನೆಯಾಗಿತ್ತು, ಇದಕ್ಕೆ ಒಬ್ಬೊಬ್ಬರು ಒದೊಂದು ವಿಧವಾಗಿ ಉತ್ತರ ವನ್ನು ಕೊಟ್ಟ ರು. ದ್ರವ್ಯ, ಆರೋಗ್ಯ, ಆ'ರ್ತಿ, ಇವುಗಳಲ್ಲಿ ಯಾವುದೂ ಯಾರಿಗೆ? ಇರುವುದಿಲ್ಲವೋ ಅವನೇ ನಿರ್ಭಾಗ್ಯವೆಂದು ಒಬ್ಬನು ಹೇಳಿದನು. ಕಷ್ಟ ಕಾಲಕ್ಕೆ ಒದಗತಕ್ಕೆ ಸ್ನೇಹಿತನಿಲ್ಲದವನು ನಿರ್ಭಾಗ್ಯನೆಂದು ಮತ್ತೊಬ್ಬನು ಹೇಳಿದನು. ಅಯೋಗ್ಯರಾಗಿಯೂ, ಕೃತಜ್ಞರಾಗಿಯ ಇರತಕ್ಕ ಪುತ್ರಮಿತ್ರ ಕಳತ್ರಾದಿಗಳನ್ನು ಪಡೆದಿರತಕ್ಕವನು ನಿರ್ಭಾಗ್ಯನೆಂದು ಮತ್ತೆ ಕೆಲವರು ಹೇಳಿದರು, ತಾನು ನಿರ್ಭಾ