ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಳೆಲ್ಲಾ ಇವರ ಮಕ್ಕಳಾದುದರಿಂದ, ಇವರ ಕುಟುಂಬಗಳಲ್ಲಿ ಲಕ್ಷಾಂತರ ಜನ ಗಳಿರುವರು. ಅವರೆಲ್ಲರೂ ಸನ್ಮಾರ್ಗಪ್ರವರ್ತಕರಾಗುವಂತೆಯೂ, ದುರ್ಮ ರ್ಗಪ್ರವರ್ತಕರಾಗದಂತೆಯೂ, ಆತ್ಮಾವಲಂಬಿಗಳಾಗುವಂತೆಯೂ, ಪರಾಧೀನರಾ ಗದಂತೆಯೂ, ಪರೋಪಕಾರಿಗಳಾಗುವಂತೆಯೂ, ಪರಪೀಡನದಲ್ಲಿ ಆಸಕ್ತರಾಗ ದಂತೆಯೂ, ಲೋಕಹಿತೈಷಿಗಳಾಗುವಂತೆಯೂ, ಲೋಕಕಂಟಕರಾಗದಂತೆಯೂ, ದೇವತೆಗಳಲ್ಲಿಯ, ಸಜ್ಜನರಲ್ಲಿಯೂ ಭಕ್ತಿಯುಳ್ಳವರಾಗುವಂತೆಯೂ, ನಾಸ್ತಿಕ ಶಿಖಾಮಣಿಗಳಾಗದಂತೆಯೂ, ಉದ್ಯೋಗಿಗಳಾಗುವಂತೆಯೂ, ನಿರುದ್ಯೋಗಿಗ ಳಾಗದಂತೆ ನೋಡಿಕೊಳ್ಳುವುದು ಪ್ರಭುವಿಗೆ ಮುಖ್ಯ ಕರವ್ಯ, ಎಷ್ಟು ಕಷ್ಟವಾದಾಗ್ಯೂ, ತದೇ ಕಾಯತ್ತಚಿತ್ತನಾಗಿ ಯಾರು ಸಕಲ ಪ್ರಜೆಗಳನ್ನೂ ಧರ್ಮ ಮಾರ್ಗೇಕಪರಾಯಣರನ್ನಾಗಿ ಮಾಡಿಕೊಳ್ಳುವನೋ ಅವನೇ ಭಾಗ್ಯವಂತನು. ಅವನಿಗೆ ಈ ಲೋಕವೂ, ಲೋಕಾಂತರವೂ ಎರಡೂ ಸ್ವರ್ಗವಾಗಿ ಪರಿಣಮಿನು ವುವು.” ಈ ರೀತಿಯಲ್ಲಿ ನಾನು ಹೇಳಿದೆನು. - ಈ ಮಹರ್ಷಿಗಳೂ ಸ್ವಲ್ಪ ಹೊತ್ತು ಪರಾಲೋಚಿಸಿದರು. ಮೈನಾಸನೆ ಧರ್ಮಶಾಸ್ತ್ರ ಪುಸ್ತಕಗಳನ್ನು ತೆಗೆದು ನೋಡಿದರು ನಾನು ಹೇಳಿದ್ದೆ ಅವನ ಧರಶಾಸ್ತ್ರವಾಗಿತ್ತು. ಈ ಪ್ರಶ್ನೆಗೂ ಸರಿಯಾದ ಉತ್ತರ ಬಂತೆಂದು ಅವರು ಅಪ್ಪಣೆ ಕೊಡಿಸಿದರು. ಮೂರನೆಯ ಪ್ರಶ್ನೆಯು ಹಾಕಲ್ಪಟ್ಟಿತು, ಯುದ್ದದಲ್ಲಿ ಅಜೇಯನಾದ ದೊರೆಯು ಉತ್ತಮನೇ ? ಅಥವಾ ರಾಜ್ಯಭಾರವನ್ನು ಸಮಾಧಾನ ಕಾಲದಲ್ಲಿ ವಿಶೇಷ ವಿತರಣೆಯಿಂದ ಮಾಡತಕ್ಕವನು ಉತ್ತಮನೇ? ಎಂಬುವುದೇ ಮೂರನೆಯ ಪ್ರಶ್ನೆಯಾಗಿತ್ತು. ಯುದ್ಧದಲ್ಲಿ ಅಜೇಯನಾದವನೇ ಉತ್ತಮನೆಂದು ಕೆಲವರು ಹೇಳಿದರು, ಸಮಾಧಾನ ಕಾಲದಲ್ಲಿ ವಿವೇಕದಿಂದ ರಾಜ್ಯಭಾರ ಮಾಡುವುದು ಅಪೇಕ್ಷಣೀಯವಾದಾಗ್ಯೂ, ಯುದ್ಧವು ನನ್ನಿಹಿತವಾದಾಗ, ಶತ್ರುಗಳನ್ನು ಜಯಿ ಸುವುದಕ್ಕೆ ಶಕ್ತಿಯಿಲ್ಲದವನು ಪ್ರಭುವಾಗಿದ್ದರೆ, ರಾಜ್ಯಭಾರ ಮಾಡುವುದರಲ್ಲಿ ಇರುವ ಶಕ್ತಿಯು ಸಿಸ್ಮ ,ಯೋಜನವಾಗುವುದೆಂಬದಾಗಿಯೂ ಅವರು ಹೇಳಿ ದರು, ಶಾಂತಿಯುಳ್ಳ ದೊರೆಯೆ ಉತ್ತಮನೆಂದು ಕೆಲವರು ಹೇಳಿದರು, ಶಾಂತಿ ಯುಳ್ಳವರು ಯುದ್ಧವು ಬರುವುದಕ್ಕೆ ಅವಕಾಶವಿಲ್ಲದಂತೆ ಮಾಡುವರೆಂಬದಾಗಿ ಯೂ, ಯುದ್ಧದಲ್ಲಿ ಆಸಕ್ತರಾದವರು ಹೆಸರುವಾಸಿಯನ್ನು ಸಂಪಾದಿಸುವುದ ಕ್ರೋಸ್ಕರ ಬಹು ಜನಗಳನ್ನು ಕೊಲ್ಲುವರೆಂಬದಾಗಿಯೂ, ಪಾಪಕ್ಕೆ ಗುರಿಯಾಗು ವರೆಂಬದಾಗಿಯೂ, ಶಾಂತಿಯುಳ್ಳ ಪ್ರಭುವಿಗೆ ಇಂಥಾ ಪಾಪವು ಸಂಘಟನೆಯ ಗುವುದಿಲ್ಲವೆಂಬದಾಗಿಯೂ, ಯುದ್ಧವು ಸಂಭವಿಸದಂತೆ ಸತ್ಯದಿಂದಲೂ, ಧರ್ಮ