ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

144 ಈ ಮೂರು ಇಲ್ಲದ ಕುದುರೆಗಳಂತ ಪರಿಣಮಿಸುವುದಿಲ್ಲವೇ ? ಯುದ್ದದಲ್ಲಿ ಸಮ ರ್ಧನೆಂದು ಕೀರ್ತಿಯು ಪ್ರಭುವಿಗೆ ಲಭ್ಯವಾಗಬೇಕಾದರೆ, ಎಷ್ಟು ಜನಗಳು ಬಲಿ ಯಾಗಬೇಕು ? ಎಷ್ಟು ಸಂಪತ್ತು ನಾಶವಾಗಬೇಕು ? ಎಷ್ಟು ಜನಗಳಿಗೆ ವಿಪತ್ತು ಬರಬೇಕು ? ಎಷ್ಟು ತಲೆಗಳು ನಾಶವಾಗಬೇಕು ? ಎಷ್ಟು ಜನ ಯೋಧರು ಏಟುಗಳನ್ನು ತಿಂದು, ಪ್ರಾಣ ಹೋಗವುದಕ್ಕೆ ಮುಂಚೆ, ಅನಿರ್ವಚನೀಯವಾದ ನೋವನ್ನು ಅನುಭವಿಸಬೇಕು ? ದೇಹವನ್ನು ಬಿಟ್ಟು ಎಷ್ಟು ಜನ ಯೋಧರ ದೇಹವು ನರಿ, ನಾಯಿ, ಹದ್ದು ಮೊದಲಾದ ದುಷ್ಟ ಮೃಗಗಳಿಗೂ, ದುಷ್ಟ ಪಕ್ಷಿಗ ಳಿಗೂ ಆಹಾರವಾಗಿ ಪರಿಣಮಿಸಬೇಕು ? ಎಷ್ಟು ಜನಗಳ ಮಾನವೂ, ಪ್ರಾಣವೂ ಹೋಗಬೇಕು ? ಇಂಧಾ ಕುಯುಕ್ತಿಯನ್ನು ಅಪೇಕ್ಷಿ ಸತಕ್ಕವರು ಮನುಷ್ಯರೇ? ಇವರಿಂದ ಪ್ರಪಂಚಕ್ಕೆ ಕೈಮು ಉಂಟಾಗುವುದೇ ? ಪ್ರಪಂಚದಲ್ಲಿ ಧರ್ಮವು ಮೂಲೋತ್ಪಾಟನವಾಗುವುದಕ್ಕೂ, ಆಧರ್ಮವು ಮೆರೆಯುವಂತೆ ಆಗುವು ದಕ್ಕೂ, ಪ್ರಪಂಚವು ನರಕವಾಗುವುದಕ್ಕೂ, ಅವರವರ ಕರ್ಮಫಲವನ್ನು ಅನು ಭವಿಸಲೆಂದು ಜಗದೀಶ್ವರನು ತಟಸ್ಸನಾಗುವುದಕ್ಕೂ ಈ ಯುದ್ಧಾಪೇಕ್ಷೆಯು ಕಾರಣವಾಗುವುದಿಲ್ಲವೇ ?? ( ಸಮಾಧಾನದಲ್ಲಿ ಆಸಕ್ತನಾದ ದೊರೆಯು ಯುದ್ಧದಲ್ಲಿ ಪ್ರಕಾಶಿಸುವು ದಕ್ಕೆ ಅರ್ಹತೆಯುಳ್ಳವನಾಗಿರಬಹುದು ಛೇದಭಾವಗಳನ್ನು ಹುಟ್ಟಿಸಿ, ಒಬ್ಬರನ್ನು ಒಬ್ಬರು ಗೆಲ್ಲುವಂತೆ ಮಾಡುವುದರಲ್ಲಿ ನಿಶ್ಯಕ್ತರಾಗಿರಬಹುದು. ಇತರರ ಆಸ್ತಿ ಯನ್ನೂ, ಜಾನನ್ನೂ, ಪರಸ್ತ್ರೀಯರನ್ನೂ ಬಲಾತ್ಕಾರವಾಗಿ ತೆಗೆದುಕೊಳ್ಳುವು ದರಲ್ಲಿ ಪರಾ ಬನಾಗಿರಬಹುದು. ಈ ನ್ಯೂನತೆಗಳೆಲ್ಲಾ ಗುಣಗಳಾಗಿ ಪರಿಣ ಮಿಸುವುದಿಲ್ಲವೇ ? ಈ ಗುಣಾತಿರಯಗಳು ಎಲ್ಲರೂ ತಮಗೆ ಕೊಟ್ಟಿದ್ದರಲ್ಲಿ ತ್ರಸ್ತ ರಾಗಿರುವಂತೆ ಮಾಡುವುದಕ್ಕೆ ಸಾಧಕಗಳಾಗುವುದಿಲ್ಲವೇ ? ಅವನು ಸಕಲ ಪ್ರಜೆ ಗಳೂ ಅನುರಕ್ತರಾಗುವುದಿಲ್ಲವೇ ? ಜನಗಳೂ ಕೂಡ ತಮ್ಮ ತಮ್ಮ ಹಕ್ಕು ಬಾಧ್ಯ ತೆಗಳನ್ನು ಹೊಂದಿ ಸುಖವಾಗಿರುವಂತಾಗುವುದಿಲ್ಲವೇ ? ಶಾಂತಿಯಲ್ಲಿ ಆಸಕ್ತನಾದ ಪ್ರಭುವಿನ ಕಾಲದಲ್ಲಿ ಪಭುವಿನ ಮೇಲ್ಪಂಕ್ತಿಯು ವಡೆಗಳಲ್ಲಿಯೂ ಶಾಂತಿಯ ನುಂಟುಮಾಡುವದಿಲ್ಲವೇ ? ರಾಜನು ಹೇಗೋ ಪ್ರಜೆಗಳೂ ಹಾಗೆಂಬ ಗಾಧೆ ಯು ಹುಟ್ಟಿರುವುದಿಲ್ಲವೇ ? ರಾಜನು ಯುದ್ಧದಲ್ಲಿ ಪರಾಣ್ಮುಖನಾಗಿ, ಧರ್ಮ ದಿಂದ ತನ್ನ ಪ್ರಜೆಗಳನ್ನು ಪರಿಪಾಲಿಸುವುದರಲ್ಲಿ ಆಸಕ್ತನಾದರೆ, ಪ್ರಜೆಗಳೂ ಕೂಡ ಧರ್ಮದಿಂದ ತಮ್ಮ ಕುಟುಂಬವನ್ನು ಪರಿಪಾಲಿಸುವುದಕ್ಕೂ, ನೆರೆಹೊರೆಯವರಲ್ಲಿ ಸುಪ್ರೀತರಾಗಿರುವುದಕ್ಕೂ ಕಾರಣವಾಗುವುದಿಲ್ಲವೇ ? ನಿರ್ಭಯವಾಗಿ ಧರ್ಮ ವನ್ನು ಆಚರಿಸುವುದಕ್ಕೂ, ಅಧರ್ಮವನ್ನು ಮಾಡುವುದರಲ್ಲಿ ಭಯಪಡುವುದಕ್ಕೂ