ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

145 ಇದು ಕಾರಣವಾಗುವುದಿಲ್ಲವೇ ? ಧರ್ಮಿಷ್ಠನಾದ ಪಕ್ಷದಲ್ಲಿ, ಎಲ್ಲಾ ಧರ್ಮಿಷ್ಠ ರಾದ ಪ್ರಭುಗಳೂ ಇವನಿಗೆ ಸಹಾಯ ಮಾಡುವುದಿಲ್ಲವೇ ? ಅಧರ್ಮಿಷ್ಠ ರೂ ಕೂಡ ಇವನಿಗೆ ಭಯಪಡುವುದಿಲ್ಲವೇ ? ಇವನ ಧರ್ಮವೂ, ನಿಷ್ಪಕ್ಷಪಾತತೆ ಯೂ, ಪ್ರಜೆಗಳಲ್ಲಿ ಇವನಿಗೆ ಇರತಕ್ಕೆ ಅನುರಾಗವೂ ಇವನಿಗೆ ವಜ್ರಕವಚವಾಗಿ ಪರಿಣಮಿಸುವುದಿಲ್ಲವೇ ? ಇವನ ಮಾತುಗಳಲ್ಲಿ ಇತರ ಪ್ರಭುಗಳಿಗೂ, ಅವರ ಪ್ರಜೆಗಳಿಗೂ ನಂಬಿಕೆಯು ಹುಟ್ಟುವುದಿಲ್ಲವೇ ? ಯುದ್ಧದಲ್ಲಿ ಆಸಕ್ತನಾದ ಅಧ ರ್ಮಿಷ್ಠನಾದ ಪ್ರಭುವಿಗೆ ಪ್ರವಂಶವೆಲ್ಲಾ ಶತ್ರುಗಳಾಗುವುದಿಲ್ಲವೇ ? ಶಾಂತಿಯಲ್ಲಿ ಆಸಕ್ತನಾದ ದೊರೆಯ ಕೀರ್ತಿಯೊಡನೆ ಜಗಳಗಂಟನ ಕೀರ್ತಿಯನ್ನು ಹೋಲಿ ಸುವುದು ಸಾಧ್ಯವೇ ? ಶಾಂತಿಯಿಂದ ಶೋಭಿಸುವ ಪ್ರಭುವನ್ನು ಜನಗಳು ದೇವ ರಂತೆಯೂ, ಯುದ್ಧಾ ನಕ್ತಿಯುಳ್ಳ ಪ್ರಭುವನ್ನು ಪಿಶಾಚದಂತೆಯೂ ಸಜ್ಜನರು ಭಾವಿಸುವುದಿಲ್ಲವೇ ? ಎಲ್ಲಿ ಸಮಾಧಾನವು ಇರುವುದೋ ಅಲ್ಲಿ ಧರ್ಮವೂ ಇರು ವುದು, ಅಲ್ಲಿ ಸಕಲ ವಿದ್ಯೆಗಳೂ, ಸಕಲ ಕಲೆಗಳೂ ವೃದ್ಧಿಯಾಗುವುವು, ಕೃಷಿ, ಕೈಗಾರಿಕೆ ವ್ಯಾಪಾರ ಮೊದಲಾದವುಗಳು ಅಲ್ಲಿ ನಿರ್ವಿಘ್ನವಾಗಿ ನಡೆಯುವುವು. ಸರ್ವರೂ ಶಕ್ತಿಗನುಸಾರವಾಗಿ ಕೆಲಸ ಮಾಡುವರು, ಭೋಗವಸ್ತುಗಳು ಬೇಕಾದ ಹಾಗೆ ಉತ್ಪತ್ತಿಯಾಗುವುವು, ಅಂಧಾ ಪ್ರಭುವಿನ ದೇಶದಲ್ಲಿ ಮಾತ್ರವೇ ಅಲ್ಲದೆ, ಪ್ರಪಂಚದಲ್ಲೆಲ್ಲಾ ಧಾರಣವಾಸಿಗಳು ಚಡಾವಾಗದೆ, ಜನಗಳಿಗೆ ಕ್ಷಾಮ ಭಯವಿಲ್ಲದಂತೆ ಆಗುವುದು, ಸಮಾಧಾನದಿಂದ ಶೋಭಿತನಾದ ದೊರೆಯ ಪ್ರಭುತ್ವದಲ್ಲಿ ಜನಗಳು ಆರೊಗದೃಢಕಾಯರಾಗಿಯೂ, ದೀರ್ಘಾಯುರಾರೋ ಗ್ಯವುಳ್ಳವರಾಗಿಯೂ, ಸತ್ಯವಂತರಾಗಿಯೂ, ಎಲ್ಲರೂ ಸೌಖ್ಯವಾಗಿರುವಂತೆಯೂ ಆಗಿ, ಅದರಿಂದ ಜನರೆಲ್ಲರೂ ತಮ್ಮ ಸೌಲ್ಯವನ್ನು ಸಂಪಾದಿಕೊಳ್ಳತಕ್ಕವರಾಗಿಯೂ, ಎಲ್ಲರೂ ಅವರವರ ಹಕ್ಕು ಬಾಧ್ಯತೆಗಳಿಗೆ ಅನುರೂಪವಾದ ಧಲವನ್ನು ಹೊಂದತ ಈವರಾಗಿಯೂ, ಅಧರ್ಮಪ್ರವರ್ತನಕ್ಕೆ ಎಲ್ಲರೂ ಪ್ರತಿಭಟಿಸತಕ್ಕವರಾಗಿಯೂ ಆಗುವರು, ಅಂಧಾ ಪ್ರಭುವಿಗೆ ಸಕ ೨ ಸಂಪತ್ತುಗಳೂ ಅಪ್ರಾರ್ಧಿತವಾಗಿ ಬರುವು ವು, ದುರ್ಮಾರ್ಗಪ್ರವರ್ತಕರನ್ನು ಶಿಕ್ಷಿಸುವುದಕ್ಕೋಸ್ಕರ ಅವನು ಯುದ್ಧವನ್ನು ಮಾಡಬೇಕಾಗಿ ಬರುವುದುಂಟು, ಅಂತಹ ಸಂಭವವು ಬಂದರೆ, ದುರ್ಮಾರ್ಗ ಪ್ರವರ್ತಕರನ್ನು ಶಿಕ್ಷಿ ಸುವುದರಲ್ಲಿ, ಅಪ್ರತಿಹತವಾದ ಶಕ್ತಿಯುಳ್ಳ ಯೋಧರೂ ಮಿಲಿಟರಿ ಅಧಿಕಾರಿಗಳೂ ನಮಗೆ ಬೇಕಾದ ಹಾಗೆ ಸಿಕ್ಕುವರು, ಶಾಂತಿಯಲ್ಲಿ ಆಸ ಕನಾದ ಪ್ರಭುವು ತಾನೇ ಯುದ್ಧಕ್ಕೆ ಹೋಗಬೇಕಾದ ಆವಶ್ಯಕತೆಯಿಲ್ಲ. ಸಮು ರ್ಧರಾದವರನ್ನು ಚುನಾಯಿಸಿ ಕಳುಹಿಸುವನು, ಅದರಿಂದ ಇವನಿಗೆ ಜಯವು 19