ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾನು ಇದ್ದು ಫಲವೇನು ? ಈ ವರ್ತಮಾನವು ತಿಳಿದ ಕೂಡಲೆ, ನಮ್ಮ ತಾಯಿ) ಯು ಮೃತಳಾಗುವಳು. ಏನೋ ಒಂದು ಮಹಾಪಾಪವನ್ನು ನಾನು ಮಾಡಿ ದ್ದೆನು, ಅದರಿಂದ ಪಿತೃಯೋಗ ದುಃಲವು ನನಗೆ ಪ್ರಾಪ್ತವಾಯಿತು ” ಎಂದು ಹಾ ! ತಂದೆಯೆ ಎಂದುಕೊಳ್ಳು ತ್ತಾ, ಭೂಮಿಗೆ ಬಿದ್ದನು. ( ಇವನ ಶೋಕಾತಿಶಯಕ್ಕೆ ತಾನೆ ಕಾರಣಳೆಂದು ಈ ಕಿನ್ನರಿಗೆ ಗೊತ್ತಾ ಯಿತು. ಅಚಾತುರ್ಯವನ್ನು ಮಾಡಿದೆನೆಂದು ತಿಳಿದುಕೊಂಡಳು, ಟೆಲಮಾಕ ಸೃನ ದುಃಖದಲ್ಲಿ ತಾನೂ ಭಾಗಿಯಾಗಿದ್ದ೦ತೆ ಅಭಿನಯಿಸಿದಳು, ಯಲಿಸೆಸ್ಸಿಗೆ ಉಂಟಾದ ದುರವಸ್ಥೆಗೊಸ್ಕರ ತಾನೂ ವ್ಯಸನಪಡುವಂತೆ ನಟಿಸಿದಳು. ಪಿತೃವಿ ಯೋಗ ದುಃಖವನ್ನು ಹೋಗಲಾಡಿಸುವುದಕ್ಕೆ ಸಾಧಕವಾದ ವೈರಾಗ್ಗಗರ್ಭಿತ ಗಳಾದ ಅನೇಕ ಇತಿಹಾಸಗಳನ್ನು ಹೇಳಿದಳು. ಇವನ ತಂದೆಯ ಕಥೆಯನ್ನೂ, ತಾಯಿಯ ಕಥೆಯನ್ನೂ ವಿಚಾರಿಸಿದಳು. ಟೆಲಿಮಾಕನ್ಸನು ಸದರಿ ವೃತ್ತಾಂತವನ್ನೆಲ್ಲಾ ವಿವರವಾಗಿ ಹೇಳಿ, ತಂದೆಯ ಅಕಾ ಲಮರಣವನ್ನು ಕುರಿತು ತುಂಬಾ ವ ಸನಪಟ್ಟನು. ಟೆಲಿಮಾಕಸ್ಸನು ಮಾತನಾಡುತ್ತಿದ್ದಾಗ, ಕೆಲಸೃಳು ಮೆಂಟರನ ಪೂರ್ವಾ ಸರಗಳನ್ನು ಕುರಿತು ನರ್ಯಾಲೋಚಿಸುತ್ತಿದ್ದಳು. ಇವಳಿಗೆ ತುಂಬಾ ಆಶ್ಚರ್ಯ ವಾಯಿತು, ಅವನ ಮಾತುಗಳಿಂದ ಅವನ ಮನೋಭಾವವು ಇವಳಿಗೆ ಗೊತ್ತಾ ಗಲಿಲ್ಲ. ಅವನ ಅಂತರಂಗವು ಅಭೇದ್ಯವಾಗಿ ತೋರಿತು, ತನ್ನ ಮನೋರಧಕ್ಕೆ ಅವನು ಪ್ರತಿಕೂಲನಾಗುವನೋ ಏನೋ ಎಂದು ಸಂದೇಹ ಉಂಟಾಯಿತು. ತನ್ನ ಮನೋಭಾವವು ಟೆಲಿಮಾಕಸ್ಸನಿಗೆ ತಿಳಿಯದೇ ಇರಲೆಂದು, ಅವನು ಹೇಳು ವುದನ್ನೆಲ್ಲಾ ಮನಸ್ಸಿಟ್ಟು ಕೇಳುವಳಂತೆ ಅಭಿನಯಿಸುತ್ತಾ, ಮುಂದಕ್ಕೆ ಹೇಳು” ಎಂಬದಾಗಿ ಅಂದಳು, ಟೆಲಮಾಕಸ್ಸನು ಹೇಳಿದ್ದೇ ನಂದರೆ :- ( ಅಲ್ಲಿಂದ ನಾವು ಸಿಸಲಿ ಪಟ್ಟಣಕ್ಕೆ ಪ್ರಯಾಣ ಮಾಡಿದೆವು, ವಾಯುವು ನಮಗೆ ಅನುಕೂಲವಾಗಿತ್ತು. ಕೊಂಚ ಹೊತ್ತಿನೊಳಗಾಗಿ ಆಕಾಶವು ಮೇಘಗ ೪೦ದ ಮುಚ್ಚಲ್ಪಟ್ಟಿತು, ಒಂದು ನಿಮಿಷಾರ್ಧದಲ್ಲಿ ಕತ್ತಲೆಯಾಯಿತು, ಮಿಂಚಿ ನ ಥಾಳಥಳದಿಂದ ನಮ್ಮ ಸುತ್ತುಮುತ್ತಲೂ ಇದ್ದ ಪದಾರ್ಥಗಳು ಗೋಚರವಾ ಗುತ್ತಿದ್ದವು. ನಾವು ತುಂಬಾ ಅಪಾಯಕ್ಕೆ ಗುರಿಯಾದೆವು. ನನ್ನ ಹಡಗು ಗಳು ಹೇಗೋ ಹಾಗೆ ಇತರ ಕೆಲವು ಹಡಗುಗಳು ಬಿರುಗಾಳಿಗೆ ಸಿಕ್ಕಿದವು. ಈ ಮಿಂಚಿನ ಬೆಳಕಿನಿಂದ ಈ ಹಡಗುಗಳು ಟ್ರಾಯದೇಶದ ಹಡಗುಗ ಳೆಂದು ಗೊತ್ತಾಯಿತು, ನಮ್ಮ ಭಯವು ದ್ವಿಗುಣವಾಯಿತು, ಅವರು ನಮ್ಮ ಶತ್ರುಗಳು, ಬಿರುಗಾಳಿಯಿಂದಲೂ, ಬಂಡೆಯಿಂದಲೂ ಉಂಟಾಗುವ ವಸ್ತು