ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

29 ಕುಳಿತಿದ್ದನು. ಕೈನಲ್ಲಿ ಒಂದು ಚಿನ್ನದ ರಾಜದಂಡವನ್ನು ಹಿಡಿದುಕೊಂಡಿ ದ್ದನು ಅಪರವಯಸ್ಸಿನವನಂತೆ ಕಾಣುತ್ತಿದ್ದಾಗ್ಯೂ, ಇವನು ಸುಂದರನಾಗಿ ದ್ದನು. ಇವನ ವ ೨ಖದಲ್ಲಿ ಸತ್ಯವೂ, ಧಮ್ಮವ, ಘನತೆಯ, ಸದ್ಭಾವವನ್ನು ತೋರಿಸತಕ್ಕ ಮಂದಹಾಸವೂ ನರ್ತಿಸುತ್ತಿದ್ದವು, ಪ್ರತಿ ದಿವಸವ ಜನಗಳ ಕಸ್ಟನಿನ್ನೂರಗಳನ್ನು ಕೇಳುವುದಕ್ಕೆ ಇವನು ದರ್ಬಾರು ಮಾಡುತ್ತಿದ್ದನು. ಇವನ ಶಾಂತಿಯ, ಬುದ್ದಿಯ ಅಸಾಧಾರಣವಾಗಿದ್ದ ವು. ಅತಿಶಯೋಕ್ತಿಗರ್ಭಿತಗ ಳಾದ ಸ್ತುತಿಯೂ ಕೂಡ ಇವನ ವಿಷಯದಲ್ಲಿ ಅತಿಶಯೋಕ್ತಿಗಳಾಗುವುದಿಲ್ಲ ವೆಂದು ತೋರುತ್ತಿತ್ತು, ಇಂಥಾ ಪ್ರಭುವಿನ ಸಮಕ್ಕೆ ನಾವಿಬ್ಬರೂ ಕರೆದು ಕೊಂಡು ಹೋಗಲ್ಲಟ್ಟೆ ವು, ನನ್ನನ್ನು ನೋಡಿದ ಕೂಡಲೆ, ಅವನಿಗೆ ಏನೋ ಒಂದು ವಿಧವಾದ ಕರುಣೆಯು ಹುಟ್ಟಿತು. “ ನೀನು ಯಾರು ? ನಿನ್ನ ಹೆಸರು ಏನು ? ನೀನು ಎಲ್ಲಿಂದ ಬಂದಿರುತ್ತೀಯೆ ? " ಎ೦ಬದಾಗಿ ಈತನು ನನ್ನನ್ನು ಕೇಳಿದನು, ನಾನು ಅದಕ್ಕೆ ಹೇಳಿದ್ದೇ ನಂ ದ :- • ಎಲೆ ಪ್ರಭುವೆ, ಟ್ರಾಯ ರಾಜ್ಯದ ಮುತ್ತಿಗೆಯ ವಿಷಯವು ನಿನಗೆ ತಿಳಿದಿರಬಹುದು. ಈ ಯುದ್ಧವು ೧೦ ವರ್ಷಗಳು ನಡೆಯಿತು. ಈ ೧೦ ವರ್ಷ ಗಳ ಯುದ್ಧದಲ್ಲಿ ಗ್ರೀಸ್‌ ದೇಶದವರು ಪ್ರಸಿದ್ಧರಾದ ೬೨ನೇಕರು ಮೃತಪಟ್ಟರು. ಟ್ರಾಯ ದೇಶವು ನಾಶಮಾಡಲ್ಪಟ್ಟಿತು. ಇದು ನಿನಗೆ ತಿಳಿದಿರಬಹುದು, ಈ ಮಹಾ ಯುದ್ದದಲ್ಲಿ ಮುಖಂಡನಾಗಿದ್ದ ಇಧಾ ಕಾ ದ್ವಿಸದ ಪ್ರಭುವಾದ ಯೂ ಲಿಸೆಸ್ಸಿನ ವಿಷಯವನ್ನು ನೀನು ಕೇಳಿರಬಹುದು, ಅವನು ನಮ್ಮ ತಂದೆಯು. ಅವನು ದೇಶಾಟನವನ್ನು ಮಾಡುವುದಕ್ಕೋಸ್ಕರ ಹೊರಟಿರುವನು ಅವನನ್ನು ಹುಡುಕಿಕೊಂಡು ನಾನು ತಿರುಗುತ್ತಿರುವೆನು, ನನ್ನ ದುರದೃ ಷ್ಟವಿ: ದ ಈ ದೇಶ ದಲ್ಲಿ ಖೈದಿಯಾಗಿ ಮಾಡಲ್ಪಟ್ಟಿರುವೆನು, ನನ್ನಲ್ಲಿ ಕರುಣೆಯು ಏನ ..ರೂ ನಿನಗೆ ಇದ್ದರೆ, ನನ್ನ ದೇಶಕ್ಕೆ ನಾ ವಾಪಸು ಹೋಗುವುದಕ್ಕೆ ಅನುಜ್ಞೆಯನ್ನು ಕೊಡು. ತಂದೆಯಿಂದ ನಿಯುಕ್ತನಾದ ನನ್ನನ್ನು ನಮ್ಮ ತಂದೆಯೊಡನೆ ಸೇರುವಂತ ಮಾಡಿದರೆ, ಅದರಿಂದ ನಿನಗೆ ಪುಣ್ಯವು ಒರದೆ ಹೋಗುವು ', ಧರ್ಮಕ್ಕೆ ಹರಿಣಾಮದಲ್ಲಾದರೂ ಪ್ರತಿಫಲವು ಬರುವುದು, ಇದೇ ನನ್ನ ವೃತ್ತಾಂತ ಇದೇ ನನ್ನ ಪ್ರರ್ಥನೆ, ೨ ಈ ರೀತಿಯಲ್ಲಿ ನಾನು ಹೇಳಲು, ಸಸಾಟ್ರಿಸ್ಟನು ನನ್ನಲ್ಲಿ ಕೈ ತೆಯುಳ್ಳವ ನಾಗಿ, ನಾನು ಹೇಳುವುದು ನಿಜವೋ, ಸುಳ್ಳೋ ಎಂಬುದನ್ನು ತಿಳಿದುಕೊಳ್ಳುವು ದಕೋಸ್ಕರ ನಮ್ಮನ್ನು ದಸ್ತಗಿರಿಮಾಡಿ ಕರೆದುಕೊಂಡು ಬಂದವರಿಗೆ ಇವನ್ನು ಹೇಳಿದ್ದೇನಂದರೆ :-