ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

32 ಇವನು ಸ್ಥಿರಸಂಕಲ್ಪವುಳ್ಳವನಾಗಿದ್ದನು. ಇವನ ಅವಸ್ಥೆಯು ತುಂಬಾ ಶೋಚ ನೀಯವಾಯಿತು, ಪ್ರಭುಗಳು ಸ್ವತಂತ್ರರೆಂದು ಜನಗಳು ಸಾಮಾನ್ಯವಾಗಿ ತಿಳಿದು ಕೊಳ್ಳುವರು. ಇವರಿಗೆ ಸ್ವಾತಂತ್ರವು ಪ್ರಾಯಕವಾಗಿ ಅಸಂಭವವಾಗುವು ದು, ಧರಿಷ್ಠರಾದ ಪ್ರಭುಗಳೂ ಕೂಡ ನೃತ್ಯಮಿತ್ರ ಕಳತ್ರಾದಿಗಳ ಮಾತುಗಳನ್ನು ನಂಬಬೇಕಾಗುವುದು, ಅವರು ಧರ್ಮಿಷ್ಟರಾಗಿದ್ದರೆ ಪ್ರಭುಗಳಿಗೂ ಧರ್ಮಲ ಭ್ರವಾಗುವುದು, ಅವರು ಮೋಸಗಾರರಾಗಿಯೂ, ಸ್ವಾರ್ಥಪರರಾಗಿಯೂ, ಅಧರ್ಮಿಷ್ಠರಾಗಿಯೂ, ಇಂದ್ರಜಾಲ ಮಹೇಂದ್ರ ಚಾಲ ವಿದ್ಯೆಗಳನ್ನು ತೋರಿ ಸುವುದರಲ್ಲಿ ನಿಪುಣರಾಗಿಯೂ ಇದ್ದರೆ, ಪ್ರಭುವು ಅವರು ಹೇಳಿದಂತೆ ನಡೆ ಯಬೇಕಾಗುವುದು, ಸ್ವತಂತ್ರನೆಂದು ಪ್ರಭುವು ತಿಳಿದುಕೊಂಡಿರಬಹುದು. ಇಂಥಾ ಸಂದರ್ಭಗಳಲ್ಲಿ ಪ್ರಾಯಕವಾಗಿ ಅವನು ಪರತಂತ್ರನಾಗಿರುವನು, ಪ್ರಭು ಗಳ ಪರಿವಾರ ದೇವತೆಗಳು ಪ್ರಾಯಕವಾಗಿ ಆಶಾಪಾಶಗಳಿಗೆ ಒಳಗಾಗಿರುವರು. ಇವರು ಧನಪಿಶಾಚದಿಂದ ಹಿಡಿಯಲ್ಪಟ್ಟಿರುವರು, ಪ್ರಾಮಾಣಿಕರು 'ಪ್ರಭುಗಳ ಸವಿಾಪದಲ್ಲಿ ಇರುವುದು ಅಪೂರ್ವ, ಮನೋಹರವಾಗಿರುವಂತೆ ಮೈ ತಾ ಸ್ತುತಿ ಯನ್ನು ಮಾಡಿ, ಪ್ರಭುಗಳ ಪ್ರಸನ್ನತೆಗೆ ಪಾತ್ರರಾಗುವ ಶಕ್ತಿಯು ಈ ದರ್ಬಾರಿಗ ಳಿಗೆ ನಿಸರ್ಗವಾದ ಗುಣವಾಗಿ ಪರಿಣಮಿಸಿರುವುದು, ಹಿಡಿದ ಪಟ್ಟನ್ನು ಅವರು ಎಂದಿ ಗೂ ಬಿಡುವುದಿಲ್ಲ, ಪ್ರಭುವು ಹಟವನ್ನು ಹಿಡಿದಾಗ್ಯೂ, ಆಗೈ ಆ ವಿಷಯವನ್ನು ಬಿಟ್ಟು, ಅವನು ಸಾನುದಾಸನಾಗುವವರೆಗೂ ಅವರು ತಮ್ಮ ಪಟ್ಟನ್ನು ಬಿಡುವುದಿಲ್ಲ, ಸತ್ಪುರುಷರಿಗೆ ಪ್ರಭು ಎನ ಸವಿಾಪದಲ್ಲಿ ಅವಕಾಶವು ದೊರೆಯುವು ದಿಲ್ಲ. ದೊರೆತಾಗ, ಅವರು ಮನಸ್ಸಿನಲ್ಲಿ ಒಂದು ವಿಧವಾಗಿಯೂ, ವಾಚಾ ಒಂದು ವಿಧವಾಗಿಯ, ಕರ್ಮದಲ್ಲಿ ಒಂದು ವಿಧವಾಗಿಯೂ ನಗೆಯಲಾರರು. ಅಂಥಾವರಿಗೆ ಪ್ರಭುವಿನ ಪ್ರಸನ್ನತೆಯ, ಉಂಟಾಗುವುದು ಕಷ್ಟ, ಸ್ವಾರ್ಥಪರರಾದ ದರ್ಬಾರಿಗಳು ಅಸೆ' ಕ್ಷಿಸದೆ ಇದ್ದಾಗ , ಹಾಜರುಭಾಗೆಯಲ್ಲಿರುವರು, ಮಹಾತ್ಮರಾದವರು ತೃಣ "ಕೃ ತಪ್ರರಂದರರು. ಪ್ರಭುವಿನಿಂದ ಪ್ರಾಪ್ತವಾಗತಕ್ಕ ಪ್ರಯೋಜನಗಳಿಗಾಗಿ ತಮ್ಮ ಮನಾಕ್ಷೆಯನ್ನು ಬಲಿಯಾಗಿ ಮಾಡುವುದಕ್ಕೆ ಅವರು ಒಪ್ಪುವುದಿಲ್ಲ, ಪ್ರಭುಗಳ ನ್ಯೂನಾತಿರಿಕ್ತಗಳನ್ನು ನಿರ್ಭಯವಾಗಿ ಅವ ರಿಗೆ ತೋರಿಸುವರು. ಅವರ ಪರಿವಾರ ದೇವತೆಗಳ ತಪ್ಪುಗಳನ್ನು ನಿರ್ದಾಕ್ಷಿಣ್ಯ ವಾಗಿ ಪ್ರಕಾಶ ಪಡಿ ಸುವರು, ಶ್ರೇಯಸ್ಸಿಗೆ ಸಾಧಕವಾದ ಮಾರ್ಗಗಳನ್ನು ದಯೆಯಿಂದ ಉಪದೇಶಿಸು ವರು, ಸತ್ಯವನ್ನೂ, ಅಸತ್ಯವನ್ನೂ ನೋಡದೆ, ಪ್ರಿಯವಾದ ಮಾತುಗಳನ್ನು ಆಡಿ, ಪ್ರಭುವಿನಿಂದ ತಮ್ಮ ಇಷ್ಟಾರ್ಥಗಳನ್ನು ಪಡೆ ದುಕೊಳ್ಳತಕ್ಕ ಕೃತ್ಯಳು ಪ್ರಭುಗಳಿಗೆ ಬೇಕಾದ ಹಾಗೆ ಸಿಕ್ಕವರು, ಅಪ್ರಿಯ