ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಗಿದ್ದಾಗ್ಯೂ, ಶ್ರೇಯಸ್ಕರವಾದ ಹಿತೋಪದೇಶವನ್ನು ಮಾಡತಕ್ಕವರು ಪ್ರಭು ಗಳಿಗೆ ಜನ್ಮಾಂತರ ಸುಕೃತದಿಂದ ದೊರೆಯಬೇಕೇ ಹೊರತು, ಅನ್ಯಥಾ ಎಂದಿಗೂ ದೊರೆಯುವುದಿಲ್ಲ, ಈ ವಿಷಯವು ಅನೇಕ ಪ್ರಭುಗಳ ಅನುಭವಕ್ಕೆ ಬಂದೇ ಇರುವುದಿಲ್ಲ, ಪ್ರಾಯಕವಾಗಿ ಪ್ರಭುಗಳ ಸಮಿಾಪವರ್ತಿಗಳಾದ ಜನರು ಅವರೇ ಇಂದ್ರಚಂದ್ರ ದೇವೇಂದ್ರರಾಗಿ ಇದ್ದರೆ ಹೇಗೋ ಹಾಗೆ ಅತಿಶಯೋಕ್ತಿಗಳಿಂದ ಸ್ತುತಿಸುವುದರಲ್ಲಿ ಪ್ರವೀಣರಾಗಿರುವರು, ಯಥಾರ್ಧವನ್ನು ಹೇಳತಕ್ಕ ಜನಗೆ ಳಿಗೆ ತೇಜೋವಧೆಯನ್ನು ಮಾಡುವದರಲ್ಲಿಯೂ ಇವರು ನಿಸ್ಸಿಮರಾಗಿರುವರು. ದುರಹಂಕಾರ, ಮೋಸ, ವಂಚನೆ, ಮೃ ವಾಸ್ತುತಿ, ಆಪ್ತಾಭಿನಯ, ನಿಜವಾದ ಅಭಿಪ್ರಾಯಗಳನ್ನು ಆಹ್ವಾದಿಸುವಿಕೆ, ದ್ರೋಹಬುದ್ದಿಯು ಭಕ್ತಿಯಂತೆ ತೋರುವ ಹಾಗೆ ವಿಜೃಂಭಿಸುವಿಕೆ, ಧರ್ಮೊಲ್ಲಂಘನೆ, ಸದ್ಭಂಧ ವಿಮೋಚನೆ, ದುರ್ಮಾರ್ಗ ಪ್ರವರ್ತನ, ಧರ್ಮದಿಂದ ಅಸಾಧ್ಯವಾದದ್ದನ್ನು ಅಧರ್ಮದಿಂದಲಾದರೂ ಸಾಧಿಸು ವಿಕೆ, ಇವುಗಳೆಲ್ಲಾ ಪ್ರಭುಗಳ ಪರಿವಾರ ದೇವತೆಗಳ ಪೈಕಿ ಅನೇಕರಲ್ಲಿ ಮೂರ್ತಿ ಭಎಸಿರುವುದುಂಟು, ಇಂಥಾ ಜನಗಳ ಬಲೆಗೆ ಸಿಕ್ಕದೆ ಇರತಕ್ಕೆ ಪ್ರಭುಗಳೇ ಅಪೂರ್ವ ಪ್ರಾಯಕವಾಗಿ ಗಾನವು ಪ್ರಭುಗಳ ಕಿವಿಗೆ ಬಹಳ ಮನೋಹರವಾ ಗಿರುವುದು, ಮನೋಹರವಾಗಿಯ, ಸ್ತುತಿಗರ್ಭಿತವಾಗಿಯೂ ಇರುವ ಸಹ ಸ್ತನಾಮರೂಪವಾದ ಗಾನವು ಮನಸ್ಸಿಗೂ, ಕೈಕಾಲುಗಳಿಗೂ ಬೇಡಿಯಂತ ಪರಿ ಣಮಿಸುವುದು, ಪ್ರಭುಗಳ ಪರಿವಾರ ದೇವತೆಗಳ ಇಂದ್ರಜಾಲ ಮಹೇಂದ್ರ ಜಾಲ ವಿದ್ಯೆಗಳೂ ಹೀಗೆಯೇ ಇರುವುವೆಂದು ಮೆಂಟರನು ನನಗೆ ಹೇಳಿದ್ದನು. ಇದು ನಿಜವೆಂದು ಈಗ ಗೊತ್ತಾಯಿತು, ಈ ವಿದ್ಯೆಗಳೆಲ್ಲಾ ಮೆಟೋಫಿಸಿನಲ್ಲಿ ಪರಿಪೂರ್ಣವಾಗಿದ್ದವು, ಅವನು ನಮ್ಮ ಕೈಫೀತುಗಳಿಂದಲೇ ನಮ್ಮನ್ನು ಸಿಕ್ಕಿಸಿ ಕೊಂಡು, ತನ್ನ ಸಂಕಲ್ಪವನ್ನು ಪೂರೈಸಬೇಕೆಂದು ಮಾಡುತ್ತಿದ್ದ ಮೆಹನತ್ತನ್ನು ನೋಡಿ, ಇಂಥಾ ದುರಾತ್ಮರನ್ನು ಪಡೆದಿರತಕ್ಕ ಪ್ರಭುವಿನ ದುರ್ದೆಸೆಯು ಅಸ ಮಾನವಾದದ್ದೆ ದು ನಾನು ತಿಳಿದುಕೊಂಡೆನು. ಹೀಗೆ ಯೋಚಿಸುತ್ತಿದ್ದಾಗ, ಈ ದುರಾತ್ಮನು ನನಗೆ ಹೇಳಿಕಳುಹಿಸಿದನು. ಅವನ ಬಳಿಗೆ ಹೋಗಲು, ಆ ಪಟ್ಟಣದ ಸಮಿಾಪದಲ್ಲಿ ಒಂದು ಪರ್ವತವಿರುವು ದೆಂಬದಾಗಿಯೂ, ಅಲ್ಲಿ ಮನೋಹರವಾಡ ದೊಡ್ಡ ಕಾಡು ಇರುವುದೆಂಬದಾ ಗಿಯೂ, ಅಲ್ಲಿ ಈ ಸಂಸ್ಥಾನಕ್ಕೆ ಸೇರಿದ ಕುರಿಮಂದೆಗಳು ಅನೇಕವಾಗಿರುವು ವೆಂಬದಾಗಿಯೂ, ಸದರಿ ಸ್ಥಳಕ್ಕೆ ಹೋಗಿ, ಕುರಿಕಾಯತಕ್ಕವರಿಗೆ ನಾನು ಸಹಾಯಮಾಡಬೇಕೆಂಬದಾಗಿಯೂ ಇವನು ನನಗೆ ಆಜ್ಞಾಪಿಸಿದನು, “ ಆಗ